ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಶಾಂತವಾಗಿ ಕುಳಿತು ಭಜನೆಯಲ್ಲಿ ಮಗ್ನನಾದ ʼಡಾಗೇಶ್‌ ಭಾಯಿʼ: ಶ್ವಾನದ ಭಕ್ತಿಗೆ ನೆಟ್ಟಿಗರ ಬಹುಪರಾಕ್

Viral Video: ಶ್ವಾನವೊಂದು ಭಕ್ತಿ ಮತ್ತು ಸಂಗೀತಕ್ಕೆ ಮನಸೋತಿದ್ದು ಶಾಂತವಾಗಿ ಕುಳಿತು ಭಜನೆಯನ್ನು ಆನಂದಿಸುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ. ರಸ್ತೆ ಬದಿಯಲ್ಲಿ ನಡೆಯುತ್ತಿದ್ದ ಸತ್ಸಂಗವೊಂದರಲ್ಲಿ ಮಹಿಳೆಯ ಪಕ್ಕದಲ್ಲಿ ಶ್ವಾನ ಕೂತಿದ್ದು ಭಜನೆಯನ್ನು ಭಾರಿ ಗಂಭೀರವಾಗಿ ಆಲಿಸುತ್ತಿರುವುದು ಕಂಡುಬಂದಿದೆ‌.‌ ಈ ಶ್ವಾನಕ್ಕೆ ನೆಟ್ಟಿಗರು ಡಾಗೇಶ್‌ ಎಂದು ಹೆಸರಿಟ್ಟಿದ್ದಾರೆ.

ಭಜನೆಯಲ್ಲಿ ಮಗ್ನವಾದ ಶ್ವಾನ

ನವದೆಹಲಿ, ಡಿ.‌ 25: ಪ್ರಾಮಾಣಿಕತೆಗೆ ಮತ್ತೊಂದು ಹೆಸರೇ ಶ್ವಾನ. ಅದು ಬಹಳ ಹಿಂದಿನಿಂದಲೂ ಮನುಷ್ಯರೊಂದಿಗೆ ಉತ್ತಮ ಒಡನಾಟ ಹೊಂದಿದೆ. ಇದೀಗ ಶ್ವಾನವೊಂದು ಭಕ್ತಿ ಮತ್ತು ಸಂಗೀತಕ್ಕೆ ಮನಸೋತಿದ್ದು ಶಾಂತವಾಗಿ ಕುಳಿತು ಭಜನೆಯನ್ನು ಆನಂದಿಸುತ್ತಿರುವ ವಿಡಿಯೊ ವೈರಲ್ (Viral Video) ಆಗಿದೆ. ರಸ್ತೆ ಬದಿಯಲ್ಲಿ ನಡೆಯುತ್ತಿದ್ದ ಸತ್ಸಂಗವೊಂದರಲ್ಲಿ ಮಹಿಳೆಯ ಪಕ್ಕದಲ್ಲಿ ನಾಯಿ ಕೂತಿದ್ದು ಭಜನೆಯನ್ನು ಭಾರಿ ಗಂಭೀರವಾಗಿ ಆಲಿಸುತ್ತಿರುವ ದೃಶ್ಯ ಕಂಡು ಬಂದಿದೆ‌.‌ ಸದ್ಯ ಈ ವಿಡಿಯೊ ಭಾರಿ ವೈರಲ್ ಆಗಿದ್ದು ನೆಟ್ಟಿಗರ ಮನ ಗೆದ್ದಿದೆ. ಹಲವರು ಶ್ವಾನಕ್ಕೆ ಡಾಗೇಶ್‌ ಎಂದು ನಾಮಕರನ ಮಾಡಿದ್ದಾರೆ.

ಸಾಮಾನ್ಯವಾಗಿ ಜನರು ಒಗ್ಗೂಡಿದಾಗ ನಾಯಿಗಳು ಇದ್ದ ಜಾಗದಿಂದ ದೂರ ಸರಿಯುತ್ತವೆ. ಆದರೆ ಇಲ್ಲಿ ಮಾತ್ರ ಶ್ವಾನ ಭಜನೆಯ ಲಯಕ್ಕೆ ತಕ್ಕಂತೆ ಆಲಿಸುತ್ತಿರುವ ದೃಶ್ಯ ಕಂಡು ಬಂದಿದೆ.‌ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೊ ಶೇರ್ ಮಾಡಲಾಗಿದ್ದು ಎಲ್ಲರ ಮನ ಗೆದ್ದಿದೆ. ಗಾಯಕರು ಭಜನೆ ಕಾರ್ಯಕ್ರಮವನ್ನು ನೆರವೇರಿಸುತ್ತಿದ್ದರೆ ಡಾಗೇಶ್‌ ಯಾವುದೇ ಅಳುಕಿಲ್ಲದೆ,‌ ಆತ್ಮ ವಿಶ್ವಾಸದಿಂದ ಜನರ ನಡುವೆ ಕುಳಿತಿರುವ ದೃಶ್ಯವನ್ನು ನೀವು ಗಮನಿಸಬಹುದು.

ವಿಡಿಯೊ ನೋಡಿ :



ಈ ವಿಡಿಯೊವನ್ನು ನೆಟ್ಟಿಗರು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಅನೇಕ ಬಳಕೆದಾರರು ನಾಯಿಯ ಮುದ್ದಾದ ಸನ್ನೆಗಳ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ವಿಡಿಯೊ ನೋಡಿದ ಅನೇಕರು ʼʼಇಂತಹ ಸತ್ಸಂಗವಿದ್ದರೆ ನಾವು ಪ್ರತಿದಿನ ಹೋಗುತ್ತೇವೆ" ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ʼʼಯಾವುದೇ ಉಪದೇಶವಿಲ್ಲ, ಯಾರ ಒತ್ತಡ ಕೂಡ ಇಲ್ಲ‌. ಕೇವಲ ಶಾಂತಿ ಮತ್ತು ಪ್ರೀತಿಯಷ್ಟೇ ಇಲ್ಲಿದೆʼʼ ಎಂದು ಬರೆದುಕೊಂಡಿದ್ದಾರೆ.

ಮಿನರಲ್ ವಾಟರ್ ಬಾಟಲಿಗೆ ಟ್ಯಾಪ್ ನೀರು ತುಂಬಿಸಿ ರೈಲಿನಲ್ಲಿ ಮಾರಾಟ

ನಾಯಿಗಳು ಕೇವಲ ಕಾವಲುಗಾರರಲ್ಲ, ಅವುಗಳು ನಮ್ಮ ದಿನ ನಿತ್ಯ ಜೀವನದ ಭಾಗ ಎಂಬುದಕ್ಕೆ ಈ ವಿಡಿಯೊ ಸಾಕ್ಷಿ ಎಂದು ಮತ್ತೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಇದು ಎಐ ವಿಡಿಯೊ ಎಂದು ಸಂದೇಹ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ರಾಜಸ್ಥಾನದ ಜೈಪುರದಲ್ಲಿ ನಾಯಿಯೊಂದು 'ರಾಧೆ ರಾಧೆ' ಎನ್ನುವ ಭಜನೆ ಹಾಡಿಗೆ ತಕ್ಕಂತೆ ತನ್ನ ಹಿಂಗಾಲುಗಳ ಮೇಲೆ ನಿಂತು, ಮುಂಗಾಲುಗಳಿಂದ ಚಪ್ಪಾಳೆ ತಟ್ಟುವಂತೆ ನೃತ್ಯ ಮಾಡಿ ವೈರಲ್ ಆಗಿತ್ತು. ಈಗ ದೆಹಲಿಯ ಈ ಶ್ವಾನದ ವಿಡಿಯೊ ಕೂಡ ಬಾರಿ ವೈರಲ್ ಆಗಿತ್ತು.