ಸಿಡ್ನಿ, ಡಿ. 17: ನಾಯಿಯನ್ನು ನಿಷ್ಠಾವಂತ ಪ್ರಾಣಿ ಎಂದು ಹೇಳಲಾಗುತ್ತದೆ. ಅದರಲ್ಲೂ ನಾವು ಅದಕ್ಕೆ ಎಷ್ಟು ಪ್ರೀತಿ ತೋರಿಸುತ್ತೇವೊ ಅದಕ್ಕಿಂತ ದುಪ್ಪಟ್ಟು ಪ್ರೀತಿಯನ್ನು ಮರಳಿ ನಮಗೆ ಅದು ತೋರಿಸಲಿದೆ. (Sidney Shootout) ಹೀಗಾಗಿ ಬಹುತೇಕರು ನಾಯಿಯ ಜೊತೆ ವಿಶೇಷ ಬಾಂಧವ್ಯವನ್ನು ಇಟ್ಟು ಕೊಂಡಿ ರುತ್ತಾರೆ. ಉದ್ಯಾನವನ , ಮಾಲ್ , ಬೀಚ್, ಇತರ ಪ್ರವಾಸಿ ತಾಣಗಳಿಗೆ ತೆರಳುವಾಗ ತಮ್ಮ ಮುದ್ದಿನ ನಾಯಿಯನ್ನು ಜೊತೆಗೆ ಒಯ್ಯುವ ಅನೇಕ ಸಂಗತಿಗಳನ್ನು ನಾವು ಕಂಡಿರುತ್ತೇವೆ. ಅಂತೆಯೇ ಸಿಡ್ನಿಯ ಬೊಂಡಿ ಬೀಚ್ಗೆ ತನ್ನ ಮಾಲಕನ ಜೊತೆ ನಾಯಿಯೊಂದು ತೆರಳಿದ್ದು ದುಷ್ಕರ್ಮಿಗಳು ಸಾಮೂಹಿಕ ಗುಂಡಿನ ದಾಳಿಯ ಸಂದರ್ಭದಲ್ಲಿ ಮಾಲಕನ ಶವಕ್ಕೆ ಆ ನಾಯಿಯು ರಕ್ಷಣೆ ನೀಡು ತ್ತಿರುವ ಘಟನೆ ನಡೆದಿದೆ. ಬೀಚ್ ಬಳಿ ದಾಳಿಯಿಂದ ನಾಯಿಯ ಮಾಲಕ ಸತ್ತುಹೋಗಿದ್ದು ತನ್ನ ಮಾಲಕನನ್ನು ಬಿಟ್ಟು ಅಲ್ಲಿಂದ ತೆರಳಲು ಒಪ್ಪದ ನಿಷ್ಠಾವಂತ ನಾಯಿಯ ವಿಡಿಯೋ ಒಂದು ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸದ್ಯ ಈ ಹೃದಯ ವಿದ್ರಾವಕ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗುತ್ತಿದೆ.
ಡಿಸೆಂಬರ್ 14ರ ಭಾನುವಾರ ಸಂಜೆ ಹನುಕ್ಕಾ ಹಬ್ಬದ ಸಂದರ್ಭದಲ್ಲಿ ಬಂದೂಕುಧಾರಿ ಸಾಜಿದ್ ಅಕ್ರಮ್ ಗುಂಡು ಹಾರಿಸಿದ್ದ ಪರಿಣಾಮ ಘಟನೆಯಲ್ಲಿ 10 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಪ್ರದೇಶದಲ್ಲಿ ಕೆಲಹೊತ್ತು ಗೊಂದಲ, ಭಯ ಭೀತಿ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ನಡುವೆಯೂ ಅನೇಕ ಜನರು ಬಂದೂಕುಧಾರಿಯ ವಿಡಿಯೋ ಹಾಗೂ ಫೋಟೊ ಸೆರೆಹಿಡಿದಿದ್ದಾರೆ. ಇದೇ ವಿಡಿಯೋದಲ್ಲಿ ಬರ್ನೀಸ್ ಮೌಂಟೇನ್ ನಾಯಿಯ ಸಮೀಪ ಹಾದುಹೋಗಿದ್ದ ದೃಶ್ಯಗಳು ಸೆರೆಯಾಗಿವೆ. ನಾಯಿಯು ತನ್ನ ಮಾಲಕನ ಶವದ ಸುತ್ತ ಮುತ್ತ ಓಡಾಡುತ್ತಿದ್ದದ್ದನ್ನು ವಿಡಿಯೋದಲ್ಲಿ ಕಾಣಬಹುದು.
ವಿಡಿಯೋ ನೋಡಿ:
ವೈರಲ್ ಆದ ವಿಡಿಯೋದಲ್ಲಿ ದಾಳಿಕೋರನಿಂದ ಕೆಲವೇ ಮೀಟರ್ ದೂರದಲ್ಲಿ ಬರ್ನೀಸ್ ಮೌಂಟೇನ್ ನಾಯಿ ಇರುವುದನ್ನು ಕಾಣಬಹುದು. ಈ ನಾಯಿಯ ಹೆಸರು ಮೌಯಿ ಎಂದು ತಿಳಿದು ಬಂದಿದೆ. ಈ ನಾಯಿಯ ಮಾಲಕನು ತನ್ನ ಹೆಂಡತಿಯೊಂದಿಗೆ ಹಾಗೂ ಮೌಯಿ ನಾಯಿಯ ಜೊತೆಗೆ ಬೀಚ್ ನಲ್ಲಿ ನಡೆದುಕೊಂಡು ಹೋಗುತ್ತಿದ್ದನು. ಆಗ ಇದ್ದಕ್ಕಿದ್ದಂತೆ ಗುಂಡೇಟಿನ ಸದ್ದು ಕೇಳಿಸಿದೆ. ಈ ಸದ್ದಿಗೆ ಭಯಗೊಂಡ ಮೌಯಿ ನಾಯಿಯು ಮಾಲಕನಿದ್ದ ಸ್ಥಳದ ಸುತ್ತ ಮುತ್ತ ಓಡಾಡಿದೆ. ಅದೇ ಸಮಯದಲ್ಲಿ ಜನರು ತಮ್ಮ ಜೀವ ರಕ್ಷಣೆಗಾಗಿ ಓಡಿಹೋಗುವುದನ್ನು ದೃಶ್ಯಗಳು ಕೂಡ ಈ ವಿಡಿಯೋದಲ್ಲಿದೆ. ಬಳಿಕ ಮೌಯಿ ನಾಯಿಯು ತನ್ನ ಮಾಲಕನ ದೇಹದ ಬಳಿಯಲ್ಲಿಯೇ ರಕ್ಷಣಾತ್ಮಕವಾಗಿ ನಿಂತಿದೆ. ಈ ಕ್ಲಿಪ್ ಮನಕುಲುಕುವಂತಿದ್ದು ನಾಯಿಯ ನಿಷ್ಠೆ ಹಾಗೂ ಪ್ರೀತಿಯ ಬಗ್ಗೆ ಮೆಚ್ಚುಗೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
Viral Video: ತಂದೂರಿ ರೋಟಿಗಾಗಿ ರಣರಂಗವಾಯ್ತು ಮದುವೆ: ನೆಟ್ಟಿಗರಿಂದ ಭಾರಿ ಟೀಕೆ
ದೃಶ್ಯಗಳು ವೈರಲ್ ಆಗುತ್ತಿದ್ದಂತೆ, ದಾಳಿಯಲ್ಲಿ ಮೌಯಿ ಮಾಲಕ ದುರಂತವಾಗಿ ಪ್ರಾಣ ಕಳೆದು ಕೊಂಡಿದ್ದಾರೆ ಎಂದು ದೃಢಪಡಿಸಲಾಗಿದೆ. ಡಿಸೆಂಬರ್ 15ರ ಸೋಮವಾರ ಆರ್ಥರ್ ಮತ್ತು ಪೆಟ್ ಡಿಟೆಕ್ಟಿವ್ಸ್‌ನ ಕಂಪೆನಿಯ ಸಂಸ್ಥಾಪಕಿ ಆನ್-ಮೇರಿ ಕರಿ ಅವರು ನಾಯಿಯನ್ನು ಅದರ ಕುಟುಂಬ ದೊಂದಿಗೆ ಮತ್ತೆ ಸೇರಿಸಲು ಸಹಾಯ ಮಾಡಲು ಸಾರ್ವಜನಿಕ ಅಭಿಯಾನವನ್ನು ಪ್ರಾರಂಭಿಸಿದರು. ಆನ್ಲೈನ್ ಬಳಕೆದಾರರು, ಪ್ರಾಣಿ ರಕ್ಷಣಾ ಗುಂಪುಗಳು ಮತ್ತು ಸ್ಥಳೀಯ ಸಮುದಾಯದ ಸದಸ್ಯರು ಸಹ ಅವರ ಈ ಕಾರ್ಯಕ್ಕೆ ಕೈಯನ್ನು ಜೋಡಿಸಿದ್ದಾರೆ.
ಅಧಿಕಾರಿಗಳು ಮತ್ತು ಸ್ವಯಂಸೇವಕರ ಸುರಕ್ಷಿತವಾಗಿ ರಕ್ಷಿಸಿ ಬಳಿಕ ಆ ನಾಯಿಯನ್ನು ಮಾಲಕನ ಪತ್ನಿಗೆ ಹಸ್ತಾಂತರಿಸಿದ್ದಾರೆ. ಸದ್ಯ ಈ ವಿಡಿಯೋ ಬಗ್ಗೆ ನೆಟ್ಟಿಗರು ನಾನಾ ತರನಾಗಿ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ನಾಯಿಗೆ ಒಮ್ಮೆ ಪ್ರೀತಿ ತೋರಿಸಿದರೆ ತನ್ನ ಕೊನೆ ಉಸಿರು ಇರುವ ತನಕವು ತನ್ನ ಮಾಲಿಕನ ಜೊತೆ ನಿಷ್ಠೆಯಿಂದ ಇರಲಿದೆ ಎನ್ನಲು ಈ ವಿಡಿಯೋ ಸಾಕ್ಷಿ. ತನ್ನ ಮಾಲಕನು ಕಣ್ಮುಂದೆ ಸತ್ತರೂ ಏನು ಮಾಡಲಾಗದ ಅಸಹಾಯಕತೆ ಕಂಡರೆ ನಿಜಕ್ಕೂ ಬೇಸರ ಆಗುತ್ತದೆ ಎಂದು ಬಳಕೆದಾರರೊಬ್ಬರು ಕಾಮೆಂಟ್ ಹಾಕಿದ್ದಾರೆ.