ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಾಹಸ ಮಾಡಲು ಹೋಗಿ 12ನೇ ಮಹಡಿಯಲ್ಲಿ ಸಿಲುಕಿಕೊಂಡ ಡೋಗೇಶ್ ಭಾಯ್: ವಿಡಿಯೊ ವೈರಲ್

Viral Video: ನಾಯಿಯೊಂದು ತನ್ನ ಪಾಡಿಗೆ ತಾನು ಆಟವಾಡುತ್ತ ಸಾಹಸ ಮಾಡಲು ಹೋಗಿ ಕಟ್ಟಡವೊಂದರಲ್ಲಿ ಸಿಲುಕಿಕೊಂಡ ಘಟನೆ ನಡೆದಿದೆ. ಹರಿಯಾಣದ ಗುರುಗ್ರಾಮದಲ್ಲಿ ಈ ಘಟನೆ ನಡೆದಿದ್ದು ಬಹುಮಹಡಿ ಕಟ್ಟಡದ 12 ಮಹಡಿಯಲ್ಲಿ ನಾಯಿ ಸಿಲುಕಿಕೊಂಡಿದೆ. ಪಕ್ಕದ ಬಿಲ್ಡಿಂಗ್ ನಲ್ಲಿದ್ದ ವ್ಯಕ್ತಿಯೊಬ್ಬರು ಇದನ್ನು ಗಮನಿಸಿದ್ದಾರೆ. ತಕ್ಷಣವೇ ಅವರು ತುರ್ತು ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ

ಹರಿಯಾಣದಲ್ಲಿ 12ನೇ ಮಹಡಿಯಲ್ಲಿ ಸಿಲುಕಿಕೊಂಡ ಶ್ವಾನದ ರಕ್ಷಣೆ

ಚಂಡೀಗಢ, ಆ. 28: ನಾಯಿಯೊಂದು ತನ್ನ ಪಾಡಿಗೆ ತಾನು ಆಟವಾಡುತ್ತ ಸಾಹಸ ಮಾಡಲು ಹೋಗಿ ಬಹುಮಹಡಿ ಕಟ್ಟಡವೊಂದರಲ್ಲಿ ಸಿಲುಕಿಕೊಂಡ ಘಟನೆ ನಡೆದಿದೆ. ಹರಿಯಾಣದ ಗುರುಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕಟ್ಟಡದ 12 ಮಹಡಿಯಲ್ಲಿ ಸಿಲುಕಿಕೊಂಡಿದೆ. ಪಕ್ಕದ ಬಿಲ್ಡಿಂಗ್‌ನಲ್ಲಿದ್ದ ವ್ಯಕ್ತಿಯೊಬ್ಬರು ಇದನ್ನು ಗಮನಿಸಿದ್ದಾರೆ. ತಕ್ಷಣವೇ ಅವರು ತುರ್ತು ಸಹಾಯ ವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ (Viral News). ಕೆಲವೇ ನಿಮಿಷದಲ್ಲಿ ಸ್ಥಳಕ್ಕೆ ಧಾವಿಸಿದ ಹರಿಯಾಣ ಅಗ್ನಿಶಾಮಕ ದಳ ಹಾಗೂ ಪೊಲೀಸರ ತಂಡ, ಅತ್ಯಂತ ಜಾಗರೂಕತೆಯಿಂದ ಕಾರ್ಯಾಚರಣೆ ಮಾಡಿ ನಾಯಿಯನ್ನು ರಕ್ಷಿಸಿದ್ದಾರೆ.

ಸೋಹ್ನಾ ರಸ್ತೆಯ ಸುಭಾಷ್ ಚೌಕ್ ಬಳಿ 12ನೇ ಮಹಡಿಯಲ್ಲಿ ಈ ಘಟನೆ ನಡೆದಿದೆ. ಸ್ಥಳೀಯರು ಈ ಮಹಡಿಗೆ ನಾಯಿ ಹೇಗೆ ತಲುಪಿತು ಎಂದು ಆಶ್ಚರ್ಯ ಪಟ್ಟಿದ್ದಾರೆ. ಸಾಹಸ ಮಾಡಲು ಹೋಗಿ ಕಟ್ಟಡದ 12ನೇ ಮಹಡಿಯ ಚಾವಣಿಯ ಮೇಲೆ ನಾಯಿ ಸಿಕ್ಕಿಬಿದ್ದಿದೆ. ಸಿಬ್ಬಂದಿ ರಕ್ಷಿಸಿದ ನಂತರ ತನ್ನ ಬಾಲ ಮುಖ ಆಡಿಸುತ್ತಾ ಸಂತಸ ವ್ಯಕ್ತಪಡಿಸುತ್ತಿರುವ ವಿಡಿಯೊ ಕಾಣಬಹುದು.

ವಿಡಿಯೊ ನೋಡಿ:



ನಾಯಿಯನ್ನು ಕಂಡ ವ್ಯಕ್ತಿ ತಕ್ಷಣ 112 ಸಂಪರ್ಕಿಸಿ ತುರ್ತು ಸೇವೆಗೆ ಮನವಿ ಮಾಡಿದ್ದಾರೆ. ಹರಿಯಾಣ ಅಗ್ನಿಶಾಮಕ ಸೇವೆಯ ಸಿಬ್ಬಂದಿ ಸುಮಾರು 30 ನಿಮಿಷದ ಒಳಗೆ ಸ್ಥಳಕ್ಕೆ ಧಾವಿಸಿ ಅತ್ಯಂತ ಜಾಗರೂಕತೆಯಿಂದ ಕಾರ್ಯಾಚರಣೆ ನಡೆಸಿ ನಾಯಿಯನ್ನು ಕಾಪಾಡಿದ್ದಾರೆ. ಈ ರಕ್ಷಣಾ ಕಾರ್ಯಾಚರಣೆಯ ವಿಡಿಯೊ ವೈರಲ್ ಆಗಿದ್ದು ನೆಟ್ಟಿಗರು ನಾಯಿಯನ್ನು ಉಳಿಸಲು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತಿದ್ದಾರೆ.

ರೈಲ್ವೆ ಗೇಟ್‌ನಲ್ಲೇ ಟ್ರೈನ್ ನಿಲ್ಲಿಸಿ ಹತ್ತಿದ ಕುಟುಂಬ

ಆದರೆ ನಾಯಿ 12ನೇ ಮಹಡಿಯ ಚಾವಣಿಯ ಮೇಲೆ ಹೇಗೆ ಬಂದಿದೆ? ಎಂದು ಕೆಲವರು ಪ್ರಶ್ನಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಯಾರಾದರೂ ನಾಯಿಯನ್ನು ಅಲ್ಲಿಗೆ ಕರೆದೊಯ್ದಿದ್ದರಬೇಕು ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಕೆಲವರು ಡೋಗೇಶ್ ಭಾಯ್, ಇನ್ನೊಮ್ಮೆ ಇಂತಹ ಸಾಹಸಕ್ಕೆ ಕೈ ಹಾಕಬೇಡ ಎಂದು ತಮಾಷೆ ಮಾಡಿದ್ದಾರೆ.