ಪುಣೆ,ಫೆ.7: ಪ್ರಾಣಿಗಳ ಕುತೂಹಲಕಾರಿ ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗುತ್ತವೆ. ಇದೀಗ ಡೋಗೇಶ್ ಭಾಯ್ ದರ್ಬಾರ್ ನ ದೃಶ್ಯವೊಂದು ಎಲ್ಲರ ಗಮನ ಸೆಳೆದಿದೆ. ಇತ್ತೀಚೆಗೆ ಪುಣೆಯ ದಾಂಗೆ ಚೌಕ್ ಬಳಿ ಆಟೋ ರಿಕ್ಷಾದ ಮೇಲ್ಛಾವಣಿಯ ಮೇಲೆ ನಾಯಿಯೊಂದು ಅತ್ಯಂತ ಗತ್ತಿನಿಂದ ಸವಾರಿ ಮಾಡಿದ್ದು ಎಲ್ಲರನ್ನು ಮೂಕವಿಸ್ಮಿತರನ್ನಾಗಿ ಮಾಡಿದೆ. ಚಲಿಸುವ ಆಟೋದ ಮೇಲೆ ಶಾಂತವಾಗಿ ಕುಳಿತಿರುವ ನಾಯಿ ವೀಕ್ಷಕರನ್ನು ರಂಜಿಸಿದೆ.
ಪುಣೆಯ ಬೀದಿಗಳು ಸಾಮಾನ್ಯವಾಗಿ ವಾಹನಗಳು, ಟ್ರಾಫಿಕ್ ಮತ್ತು ಅಸಾಮಾನ್ಯ ದೃಶ್ಯಗಳಿಗೆ ಒಗ್ಗಿಕೊಂಡಿರುತ್ತವೆ, ಆದರೆ ಕೆಲವೊಮ್ಮೆ ನಿಜವಾಗಿಯೂ ಅನಿರೀಕ್ಷಿತವಾದದ್ದು ಜನರಿಗೆ ನೋಡಲು ಸಿಗುತ್ತದೆ. ಆಟೋದ ಒಳಗೆ ಯಾರೂ ಇಲ್ಲದಿದ್ದರೂ, ಅದರ ಟಾಪ್ ಮೇಲೆ ನಾಯಿಯೊಂದು ಅತ್ಯಂತ ಗತ್ತಿನಿಂದ ಕುಳಿತಿರುವ ದೃಶ್ಯ ಕಂಡು ಬಂದಿದೆ. ರಸ್ತೆಯಲ್ಲಿ ಎಷ್ಟೇ ವಾಹನ ವಾಹನಗಳು ಸಾಗುತ್ತಿದ್ದರೂ ಈ ಶ್ವಾನ ಮಾತ್ರ ಆತ್ಮವಿಶ್ವಾಸದಿಂದ ಕುಳಿತಿದೆ.
ವಿಡಿಯೋ ನೋಡಿ:
ಜನನಿಬಿಡ ರಸ್ತೆಯಲ್ಲಿ ಈ ಕ್ಲಿಪ್ ಪ್ರಾರಂಭವಾಗುತ್ತದೆ. ಆಟೋ ರಿಕ್ಷಾದ ಮೇಲೆ ನಾಯಿ ಛಾವಣಿಯ ಮೇಲೆ ಆರಾಮವಾಗಿ ಕುಳಿತಿದೆ. ನಾಯಿ ಯಾವುದಕ್ಕೂ ಭಯ ಪಟ್ಟಿಲ್ಲ. ಬೊಗಳುತ್ತಿಲ್ಲ ಅಥವಾ ಕೆಳಗೆ ಜಿಗಿಯಲು ಪ್ರಯತ್ನಿಸುತ್ತಿಲ್ಲ.ಅದು ಸುಮ್ಮನೆ ಕುಳಿತುಕೊಂಡು ಜನರನ್ನು ವೀಕ್ಷಣೆ ಮಾಡು ತ್ತಿದೆ. ಹಲವರು ಆ ಕ್ಷಣವನ್ನು ಜನರು ತಮಾಷೆಯಾಗಿ ಕಂಡುಕೊಂಡರು, ಇತರರು ಪ್ರಾಣಿಯ ಸುರಕ್ಷತೆಯ ಬಗ್ಗೆ ಪ್ರಶ್ನಿಸಿದ್ದಾರೆ.
Viral Video: ರೀಲ್ಸ್‌ಗಾಗಿ ಇದೆಂಥ ಹುಚ್ಚಾಟ? ಚಲಿಸುವ ಟ್ರಕ್ ಕೆಳಗೆ ಬೈಕ್ ಓಡಿಸಿದ ಯುವಕ
ಫೆಬ್ರವರಿ 5 ರಂದು ಹಂಚಿಕೊಳ್ಳಲಾದ ಈ ಕ್ಲಿಪ್ ತ್ವರಿತವಾಗಿ ಭಾರಿ ಗಮನ ಸೆಳೆಯಿತು. ಹಲವಾರು ಕಾಮೆಂಟ್‌ಗಳೊಂದಿಗೆ 17.7 ಮಿಲಿಯನ್ ವೀಕ್ಷಣೆಗಳನ್ನು ದಾಟಿದೆ. ಒಬ್ಬ ಬಳಕೆದಾರರು ಡೋಗೇಶ್ ಭಾಯ್ ಆತ್ಮವಿಶ್ವಾಸ ಮೆಚ್ಚಲೇಬೇಕು ಎಂದು ಬರೆದಿದ್ದಾರೆ. ಮತ್ತೊಬ್ಬರು "ರಿಕ್ಷಾ ಅವನಿಗೆಯೇ ಸೇರಿದ್ದು... ಓಡಿಸಲು ಬಾಡಿಗೆಗೆ ಕೊಡಲಾಗಿದೆ ಎಂದು ತಮಾಷೆ ಮಾಡಿದ್ದಾರೆ.