ಬಿಜ್ನೋರ್: ಪಾತ್ರೆಗಳನ್ನು ಸ್ವಚ್ಛಗೊಳಿಸುವಾಗ ಮನೆಕೆಲಸದಾಕೆ ಅದಕ್ಕೆ ಮೂತ್ರ ವಿಸರ್ಜಿಸಿದ (urinating) ಆಘಾತಕಾರಿ ಘಟನೆಯು ಕ್ಯಾಮರಾದಲ್ಲಿ ಸೆರೆಯಾಗಿದೆ. ಉತ್ತರ ಪ್ರದೇಶದ ಬಿಜ್ನೋರ್‌ನ ನಗೀನಾ ಪ್ರದೇಶದ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ಮೂತ್ರ ವಿಸರ್ಜಿಸಿದ ಆರೋಪದ ಮೇಲೆ ಮನೆಕೆಲಸದಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಇದರ ವಿಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ.
ವಿಡಿಯೊ ವೈರಲ್ ಆದ ಬೆನ್ನಲ್ಲೇ ಮಹಿಳೆಯನ್ನು ಬಂಧಿಸಲಾಗಿದೆ ಎಂದು ನಗೀನಾ ಠಾಣೆ ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಆಕೆಯ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. ಆಕೆ ಯಾವ ಕಾರಣಕ್ಕಾಗಿ ಪಾತ್ರೆ ಮೇಲೆ ಮೂತ್ರ ವಿಸರ್ಜಿಸುತ್ತಿದ್ದಳು ಎಂಬ ಬಗ್ಗೆ ತಿಳಿದು ಬಂದಿಲ್ಲ. ಅಲ್ಲದೇ ಎಷ್ಟು ದಿನಗಳಿಂದ ಈ ರೀತಿ ದುಷ್ಕೃತ್ಯ ಎಸಗುತ್ತಿದ್ದಳು ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ. ಮನೆ ಮಂದಿ ಮಾತ್ರ ಮಹಿಳೆಯ ದುಷ್ಕೃತ್ಯ ನೋಡಿ ಹೌಹಾರಿದ್ದಾರೆ. ಯಾರನ್ನು ನಂಬುವುದು ಯಾರನ್ನು ಬಿಡುವುದು ಎಂಬಂತಾಗಿದೆ ಅವರ ಪರಿಸ್ಥಿತಿ.
ವಿಡಿಯೊ ವೀಕ್ಷಿಸಿ:
ಇದೇ ರೀತಿಯ ಪ್ರಕರಣವೊಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೆಲವು ವರ್ಷಗಳ ಹಿಂದೆ ನಡೆದಿತ್ತು. ಮನೆಕೆಲಸದಾಕೆ ಚಪಾತಿ ಹಿಟ್ಟು ಕಲಸುವಾಗ ತನ್ನ ಮೂತ್ರವನ್ನು ಮಿಶ್ರಣ ಮಾಡುತ್ತಿದ್ದಳು. ಮನೆಮಂದಿ ಅನಾರೋಗ್ಯದಿಂದ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದಾಗ, ಆಹಾರದಲ್ಲಿ ಮೂತ್ರದ ಅಂಶವಿರುವುದು ಪತ್ತೆಯಾಗಿತ್ತು. ವಿಚಾರಣೆ ವೇಳೆ ಮನೆಕೆಲಸದಾಕೆ ಚಪಾತಿ ಹಿಟ್ಟಿಗೆ ಮೂತ್ರ ವಿಸರ್ಜಿಸುತ್ತಿದ್ದಳು ಎಂದು ತಿಳಿದು ಬಂದಿತ್ತು. ಮನೆಮಂದಿ ಕಿರಿಕ್ ಮಾಡುತ್ತಿದ್ದರಿಂದ ಕೋಪಗೊಂಡಿದ್ದ ಆಕೆ, ಚಪಾತಿಗೆ ಮೂತ್ರ ಮಿಶ್ರಣ ಮಾಡುತ್ತಿದ್ದುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಳು.
ಈ ಸುದ್ದಿಯನ್ನೂ ಓದಿ: Teacher Fired: 17 ವರ್ಷದ ಇಬ್ಬರು ವಿದ್ಯಾರ್ಥಿಗಳೊಂದಿಗೆ ಶಿಕ್ಷಕಿಯ ಕಾಮದಾಟ!