ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಜಗತ್ತಿನೆದುರು ಮತ್ತೆ ಪಾಕಿಸ್ತಾನದ ಮಾನ ಹರಾಜು; ಕಲಾಪ ನಡೆಯುತ್ತಿದ್ದಾಗ ಸಂಸತ್‌ಗೆ ದಿಢೀರ್ ಕತ್ತೆ ಎಂಟ್ರಿ: ವೈರಲ್ ವಿಡಿಯೊ ಇಲ್ಲಿದೆ

ಪಾಕಿಸ್ತಾನ ಸಂಸತ್ತಿನಲ್ಲಿ ರಾಷ್ಟ್ರದ ಪ್ರಮುಖ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯುತ್ತಿದ್ದಾಗಲೇ ಇದ್ದಕ್ಕಿದ್ದಂತೆ ಅನಿರೀಕ್ಷಿತವಾಗಿ ಕತ್ತೆಯೊಂದು ಸೆನೆಟ್ ಕೊಠಡಿಗೆ ಎಂಟ್ರಿ ಕೊಟ್ಟಿದೆ. ಈ ಘಟನೆಯಿಂದ ಅಲ್ಲಿದ್ದ ರಾಜಕೀಯ ನಾಯಕರೆಲ್ಲ ಒಂದು ಕ್ಷಣ ದಿಗ್ಭ್ರಮೆ ಒಳಗಾದರು. ಮೇಲ್ಮನೆ ಕಲಾಪಗಳು ನಡೆಯುತ್ತಿದ್ದಾಗ ಕತ್ತೆ ಎಂಟ್ರಿ ಕೊಟ್ಟ ಕಾರಣ ಸದಸ್ಯರಲ್ಲಿ ಗೊಂದಲ ಉಂಟಾಯಿತು. ಸದ್ಯ ಈ ಘಟನೆಯ ವಿಡಿಯೊ ವೈರಲ್ ಆಗಿದೆ.

ಸಾಂದರ್ಭಿಕ ಚಿತ್ರ

ಇಸ್ಲಾಮಾಬಾದ್‌, ಡಿ. 6: ಎಲ್ಲ ದೇಶಗಳ ಸಂಸತ್‌ ಕಲಾಪದಲ್ಲಿ ಆಡಳಿತ ಅಭಿವೃದ್ಧಿಗೆ, ಹೊಸ ನೀತಿ ನಿರ್ಧಾರಗಳಿಗೆ ಹಾಗೆ ನೂತನ ಯೋಜನೆ ಜಾರಿ ತರುವ ಸಲುವಾಗಿ ಜನಪ್ರತಿನಿಧಿಗಳೊಂದಿಗೆ ಸಭೆ, ನಡೆಸಲಾಗುತ್ತದೆ. ಇದೀಗ ಪಾಕಿಸ್ತಾನದಲ್ಲಿಯೂ ಸಂಸತ್ತಿನ ಅಧಿವೇಶನ ನಡೆಯುತ್ತಿದ್ದು. ಎಂದಿನಂತೆ ಸಂಸದರು, ಜನ ಪ್ರತಿನಿಧಿಗಳು ಭಾಗಿಯಾಗುತ್ತಿದ್ದಾರೆ. ಈ ಮಧ್ಯೆ ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲಿ ಕತ್ತೆಯೊಂದು ದಿಢೀರ್ ಆಗಿ ಸಂಸತ್‌ಗೆ ಎಂಟ್ರಿ ಕೊಟ್ಟು ಪಾಕಿಸ್ತಾನ ಮುಜುಗರಕ್ಕೊಳಗಾಗಿದೆ. ಸಂಸತ್ತಿನಲ್ಲಿ ರಾಷ್ಟ್ರದ ಪ್ರಮುಖ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದ್ದಾಗಲೇ ಇದ್ದಕ್ಕಿದ್ದಂತೆ ಅನಿರೀಕ್ಷಿತವಾಗಿ ಕತ್ತೆಯೊಂದು ಸೆನೆಟ್ ಕೊಠಡಿಗೆ ಎಂಟ್ರಿ ಕೊಟ್ಟಿದೆ. ಈ ಘಟನೆಯಿಂದ ಅಲ್ಲಿದ್ದ ರಾಜಕೀಯ ನಾಯಕರೆಲ್ಲ ಒಂದು ಕ್ಷಣ ದಂಗಾಗಿದ್ದಾರೆ. ಮೇಲ್ಮನೆ ಕಲಾಪಗಳು ನಡೆಯುತ್ತಿದ್ದಾಗ ಕತ್ತೆ ಎಂಟ್ರಿ ಕೊಟ್ಟ ಕಾರಣ ಕೆಲ ಹೊತ್ತುಗೊಂಡಲದ ವಾತಾವರಣ ಕಂಡು ಬಂತು. ಸದ್ಯ ಈ ಕುರಿತಾದ ವಿಡಿಯೊ ಸೋಶಿಯಲ್ ‌ಮಿಡಿಯಾದಲ್ಲಿ ವೈರಲ್ (Viral Video) ಆಗಿದೆ.

ವೈರಲ್ ಆದ ವಿಡಿಯೊದ ಆರಂಭದಲ್ಲಿ ಪಾಕಿಸ್ತಾನದ ಸಂಸತ್ತಿನೊಳಗೆ ಕಲಾಪ ನಡೆಯುತ್ತಿರುತ್ತಿದ್ದಾಗ ಎಲ್ಲ ಸಂಸದರೂ ತಮ್ಮ ಆಸನದಲ್ಲಿ ಕೂತಿರುವುದು ಕಂಡು ಬಂದಿದೆ. ಅಲ್ಲಿ ಬಹಳ ಗಂಭೀರ ವಿಷಯ ಚರ್ಚೆಯಾಗುತ್ತಿದ್ದ ವೇಳೆ ಕತ್ತೆಯೊಂದು ಸೀದಾ ಸದನದೊಳಗೆ ಬಂದು ದಿಕ್ಕು ತಪ್ಪಿ ಅತ್ತ ಇತ್ತ ಓಡಾಡಿದೆ. ಆಗ ಅಲ್ಲಿದ್ದವರೆಲ್ಲ ಒಂದು ಕ್ಷಣ ಏನಾಯಿತು ಎಂದು ತಿಳಿಯದೆ ಹೌಹಾರಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಭದ್ರತಾ ಸಿಬ್ಬಂದಿ ತತ್ ಕ್ಷಣ ಕತ್ತೆಯನ್ನು ಓಡಿಸಲು ಮುಂದಾದರು. ಈ ವೇಳೆ ಆ ಕತ್ತೆಯು ಭಯದಲ್ಲಿ ಓಡಿ ಕೊನೆಗೆ ಸಂಸದರಿಗೆ ಢಿಕ್ಕಿ ಹೊಡೆದಿದ್ದನ್ನು ದೃಶ್ಯದಲ್ಲಿ ಕಾಣಬಹುದು.

ವಿಡಿಯೊ ವೀಕ್ಷಿಸಿ:



ಕತ್ತೆಯು ಸದನದೊಳಗೆ ಓಡಿ ಬಂದ ರಭಸಕ್ಕೆ ಅಲ್ಲಿದ್ದ ಸೀಟು, ಕಾಗದ ಪತ್ರ ಚಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿತು. ಕತ್ತೆಯ ದಾಳಿಗೆ ಅಲ್ಲಿದ್ದ ಪೀಠೋಪಕರಣಗಳಿಗೂ ಹಾನಿಯಾಇದೆ. ಕತ್ತೆ ಮಾಡಿದ ಅವಾಂತರಕ್ಕೆ ಸಂಸದರು ಜೋರಾಗಿ ನಗುತ್ತಿರುವ ದೃಶ್ಯ ಕೂಡ ವಿಡಿಯೊದಲ್ಲಿ ಸೆರೆಯಾಗಿದೆ. ಒಟ್ಟಿನಲ್ಲಿ ಕ್ಷಣ ಮಾತ್ರದಲ್ಲಿ ಸಂಸತ್ ನಲ್ಲಿ ಕತ್ತೆಯ ಅವಾಂತರದಿಂದ ಕೆಲ ಹೊತ್ತು ಗೊಂದಲದ ವಾತಾವರಣ ನೆಲೆ ಮಾಡಿದೆ.

ಇಂಡಿಗೋ ವಿಮಾನ ಎಡವಟ್ಟು: ಕೈಯಲ್ಲಿ ಅಸ್ಥಿ ಹಿಡಿದು ಏರ್‌ಪೋರ್ಟ್‌ನಲ್ಲೇ ಕುಳಿತ ಯುವತಿ!

ಸೆನೆಟ್ ಅಧ್ಯಕ್ಷ ಯೂಸಫ್ ರಾಜಾ ಗಿಲ್ಲಾನಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ‌. ನಮ್ಮ ಕಾನೂನು ಸುವ್ಯವಸ್ಥೆಯಲ್ಲಿ ಪಾಲುದಾರರಾಗಲು ಪ್ರಾಣಿಗಳು ಕೂಡ ಮುಂದೆ ಬರುತ್ತಿವೆ. ಅವುಗಳಿಗೂ ಈಗ ಸಂಸತ್ತಿನ ಕಲಾಪದ ಬಗ್ಗೆ ತಿಳಿದಂತಿದೆ ಎಂದು ತಮಾಷೆಯಾಗಿ ಹೇಳಿದದಾರೆ. ಈ ಹೇಳಿಕೆ ಕೇಳಿ ಅಲ್ಲಿದ್ದ ಸಂಸದರು ಚಪ್ಪಾಳೆ ತಟ್ಟಿದ್ದಾರೆ. ಈ ಘಟನೆಯ ಬಳಿಕ ಭದ್ರತಾ ಅಧಿಕಾರಿಗಳು ಕತ್ತೆಯು ಸಂಸತ್ತಿಗೆ ಹೇಗೆ ಪ್ರವೇಶಿಸಿದೆ ಎಂಬುದರ ತನಿಖೆ ಪ್ರಾರಂಭಿಸಿದ್ದಾರೆ.

ವರದಿಯೊಂದರ ಪ್ರಕಾರ, ಕತ್ತೆಯು ಹತ್ತಿರದ‌ ಲಾಯದಿಂದ ದಾರಿ ತಪ್ಪಿ ಒಳಗೆ ಬಂದಿರಬಹುದು ಎಂದು ತಿಳಿದುಬಂದಿದೆ. ಈ ಮೂಲಕ ಸಂಸತ್ತಿನ ಭವನ ಭದ್ರತಾ ವ್ಯವಸ್ಥೆ ನ್ಯೂನತೆಯಿಂದ ಕೂಡಿದೆ. ಇಲ್ಲಿ ಅನೇಕ ಲೋಪ ಕಂಡು ಬರುತ್ತಿದೆ ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ. ಆ ಕತ್ತೆಯು ತನ್ನ ಸ್ವಂತ ಸಂಬಂಧಿಕರನ್ನು ನೋಡಲು ಅಲ್ಲಿಗೆ ಬಂದಿರಬಹುದು. ಅಲ್ಲಿದ್ದ ತನ್ನ ‌ಸಂಬಂಧಿಕರಿಗೆ ಏನೊ ಮೆಸೇಜ್ ನೀಡಲು ಬಂದಿರಬೇಕು. ಆದರೆ ಅಷ್ಟರೊಳಗೆ ಅದನ್ನು ಓಡಿಸಿಬಿಟ್ಟಿದ್ದಾರೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಆ ಕತ್ತೆ ಕೂಡ ಅದೇ ಸಂಸತ್ತಿನ ಸದಸ್ಯ ಆಗಿರಬಹುದು ಮತ್ತೊಬ್ಬರು ಹೇಳಿದ್ದಾರೆ.