ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸ್ಟೇರಿಂಗ್ ಬಿಟ್ಟು ಟ್ರಕ್ ಮೇಲೆ ಕುಣಿದಾಡಿದ ಚಾಲಕ! ಬ್ಯುಸಿ ರಸ್ತೆ ಮಧ್ಯೆಯೇ ನಡೆದ ಹುಚ್ಚಾಟದ ವಿಡಿಯೊ ವೈರಲ್‌

Viral Video: ರಸ್ತೆ ಮಧ್ಯೆಯೇ ಚಾಲಕ ಅಪಾಯಕಾರಿ ಸಾಹಸ ಮಾಡಿದ್ದಾನೆ. ಯಾವುದೇ ಭಯವಿಲ್ಲದೇ ಚಲಿಸುತ್ತಿದ್ದ ಟ್ರಕ್‌ನ ಕಿಟಕಿಯಿಂದ ಹೊರಬಂದು, ನೇರವಾಗಿ ವಾಹನದ ಚಾವಣಿ ಮೇಲೆ ನಿಂತು ಸ್ಟೆಪ್ ಹಾಕಿದ್ದಾನೆ. ಈ ವಿಡಿಯೊ ನೋಡಿದ ಅನೇಕರು ಚಾಲಕನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಚಲಿಸುತ್ತಿದ್ದ ಟ್ರಕ್ ಏರಿ ಚಾಲಕನ ಡ್ಯಾನ್ಸ್

ಜೈಪುರ, ಆ.16: ರಸ್ತೆ ಸುರಕ್ಷತೆ ಬಗ್ಗೆ ಸಾರಿಗೆ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ನಿರ್ಲಕ್ಷ್ಯ ಮಾಡುವವರು ಅನೇಕರು ಇದ್ದಾರೆ. ಅತೀ ವೇಗದ ಪ್ರಯಾಣ, ರಸ್ತೆ ಮಧ್ಯೆ ಸ್ಟಂಟ್ ಮಾಡುವುದು, ಫುಟ್‌ಪಾತ್ ಮೇಲೆ ವಾಹನ ಚಲಾಯಿಸುವುದು ಹೀಗೆ ನಿಯಮವನ್ನು ಗಾಳಿಗೆ ತೂರುವವರು ಇದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ರಾಜಸ್ಥಾನದಲ್ಲಿ ಚಾಲಕನೊಬ್ಬ ಮಿತಿ ಮೀರಿದ ಹುಚ್ಚು ವರ್ತನೆಯನ್ನು ತೋರಿದ್ದಾನೆ. ಚಲಿಸುತ್ತಿದ್ದ ಭಾರಿ ಗಾತ್ರದ ಟ್ರಕ್‌ನ ಚಾವಣಿ ಏರಿ ಡ್ಯಾನ್ಸ್ ಮಾಡಿದ್ದಾನೆ‌. ಸದ್ಯ ಈ ಆತಂಕಕಾರಿ ವಿಡಿಯೊ ಭಾರೀ ವೈರಲ್ (Viral Video) ಆಗುತ್ತಿದೆ.

ರಸ್ತೆ ಮಧ್ಯೆಯೇ ಚಾಲಕ ಅಪಾಯಕಾರಿ ಸಾಹಸ ಮಾಡಿದ್ದಾನೆ. ಯಾವುದೇ ಭಯವಿಲ್ಲದೆ ಚಲಿಸುತ್ತಿದ್ದ ಟ್ರಕ್‌ನ ಕಿಟಕಿಯಿಂದ ಹೊರಬಂದು, ನೇರವಾಗಿ ವಾಹನದ ಚಾವಣಿ ಮೇಲೆ ನಿಂತು ಸ್ಟೆಪ್ ಹಾಕಿದ್ದಾನೆ. ಈ ವಿಡಿಯೊ ನೋಡಿದ ಅನೇಕರು ಚಾಲಕನ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ವಿಡಿಯೊ ನೋಡಿ:



ಟ್ರಕ್ ಚಲಿಸುತ್ತಿರುವಾಗಲೇ ಈ ಅಪಾಯಕಾರಿ ಸಾಹಸ ಮಾಡಿದ್ದಾನೆ. ಅಲ್ವಾರ್‌ನ ಉದ್ಯೋಗ್ ನಗರ ಪೊಲೀಸ್ ಠಾಣೆ ಪ್ರದೇಶದ ತಿಬಾರಾ ಬಳಿ ಈ ಘಟನೆ ನಡೆದಿದೆ. ಚಾಲಕನ ಅಜಾಗರೂಕ ಕೃತ್ಯವು ಆತನ ಜೀವಕ್ಕೆ ಅಪಾಯವನ್ನುಂಟು ಮಾಡುವುದಲ್ಲದೆ, ಪಾದಚಾರಿಗಳು ಮತ್ತು ಇತರ ವಾಹನ ಚಾಲಕರಿಗೆ ಗಂಭೀರ ಅಪಾಯವನ್ನುಂಟು ಮಾಡುತ್ತಿತ್ತು. ಅದೃಷ್ಟವಸಾತ್‌ ಯಾವುದೇ ಅನಾಹುತ ಸಂಭವಿಸಿಲ್ಲ.

ರೈಲು ಹಳಿಗೆ ಬಿದ್ದ ಮಕ್ಕಳನ್ನು ರಕ್ಷಿಸಲು ದೇಹವನ್ನೇ ರಕ್ಷಾ ಕವಚವಾಗಿಸಿದ ತಾಯಿ!

ಸ್ಟೇರಿಂಗ್ ಹಿಡಿಯಲು ಚಾಲಕನೇ ಇಲ್ಲದೆ ಟ್ರಕ್ ಚಲಿಸುತ್ತಿರುವುದನ್ನು ಕಂಡು ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ವೈರಲ್ ಆಗುವ ವಿಡಿಯೊದಲ್ಲಿ ಇತರ ವಾಹನಗಳು ರಸ್ತೆಯಲ್ಲಿ ಚಲಿಸುತ್ತಿದ್ದಂತೆ ಚಾಲಕ ಟ್ರಕ್‌ ಮೇಲೆ ನಿಂತು ನೃತ್ಯ ಮಾಡುತ್ತಿರುವುದನ್ನು ಕಂಡು ಬಂದಿದೆ. ಕೆಲವು ವಾಹನ ಚಾಲಕರು ಇದನ್ನು ಗಮನಿಸಿ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಲು ತಮ್ಮ ವಾಹನಗಳನ್ನು ಹಿಂದಕ್ಕೆ ತಿರುಗಿಸಿದ್ದಾರೆ.

​ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಅನೇಕರು ಜನನಿಬಿಡ ರಸ್ತೆಯಲ್ಲಿ ಇಂತಹ ಅಪಾಯಕಾರಿ ಸಾಹಸವನ್ನು ಮಾಡುವ ಈತ ಸೇರಿ ಎಲ್ಲ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ. ಈ ಘಟನೆಯು ಮತ್ತೊಮ್ಮೆ ಅಜಾಗರೂಕ ಚಾಲನೆ ಮತ್ತು ಸಾರ್ವಜನಿಕ ರಸ್ತೆಗಳಲ್ಲಿ ಅಪಾಯಕಾರಿ ಸಾಹಸಗಳ ಬಗ್ಗೆ ಕಳವಳಗಳನ್ನು ಎತ್ತಿ ತೋರಿಸಿದೆ.

ಈ ಬಗ್ಗೆ ನೆಟ್ಟಿಗರು ಕಿಡಿಕಾರಿದ್ದು ನೆಟ್ಟಿಗರೊಬ್ಬರು, ʼʼಪ್ರಯಾಣ ಮಾಡುತ್ತಿದ್ದ ಇತರರಿಗೂ ಅನಾಹುತವಾಗುತ್ತಿತ್ತು. ಈತನ ಬೇಜವ್ದಾರಿ ವರ್ತನೆ ವಿರುದ್ಧ ಕ್ರಮ ಕೈಗೊಳ್ಳಬೇಕುʼʼ ಎಂದು ಮನವಿ ಮಾಡಿದ್ದಾರೆ. ಮತ್ತೊಬ್ಬರು, ʼʼರಸ್ತೆ ಮಧ್ಯೆ ಸ್ಟಂಟ್ ಮಾಡುವವರಿಗೆ ಸರಿಯಾದ ದಂಡ ವಿಧಿಸಬೇಕುʼʼ ಎಂದು ಆಗ್ರಹಿಸಿದ್ದಾರೆ.