ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕುಡಿತದ ಮತ್ತಿನಲ್ಲಿ ಪೊಲೀಸ್ ಮೇಲೆ ಹಲ್ಲೆ: ಕಾನ್‌ಸ್ಟೆಬಲ್ ಲಾಠಿ ಕಸಿದು ಥಳಿಸಿದ ವ್ಯಕ್ತಿ!

Viral Video: ಕುಡಿತದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಪೊಲೀಸ್ ಕಾನ್‌ಸ್ಟೆಬಲ್ ಕೈಲಿದ್ದ ಲಾಠಿಯನ್ನೇ ಕಸಿದುಕೊಂಡು ಮನ ಬಂದಂತೆ ಥಳಿಸಿರುವ ಘಟನೆಯೊಂದು ಕಂಡು ಬಂದಿದೆ. ಈ ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಭಾರೀ ವೈರಲ್ ಆಗಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಖಡಕ್‌ಪಾಡಾ ಪೊಲೀಸರು ಬಂಧಿಸಿದ್ದಾರೆ.

ಕುಡಿತದ ಮತ್ತಿನಲ್ಲಿ ಪೊಲೀಸ್ ಮೇಲೆ ಹಲ್ಲೆ

ಕಲ್ಯಾಣ್,ಜು.27: ಮಹಾರಾಷ್ಟ್ರದ ಕಲ್ಯಾಣ್‌ನಲ್ಲಿ ಅಘಾತಕಾರಿ ಘಟನೆಯೊಂದು ಕಂಡುಬಂದಿದೆ. ಕುಡಿತದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಪೊಲೀಸ್ ಕಾನ್‌ಸ್ಟೆಬಲ್ ಕೈಲಿದ್ದ ಲಾಠಿಯನ್ನೇ ಕಸಿದು ಕೊಂಡು ಮನ ಬಂದಂತೆ ಥಳಿಸಿರುವ ಘಟನೆಯೊಂದು ಕಂಡು ಬಂದಿದೆ. ಈ ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಭಾರೀ ವೈರಲ್ (Viral News) ಆಗಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಖಡಕ್‌ಪಾಡಾ ಪೊಲೀಸರು ಬಂಧಿಸಿದ್ದಾರೆ.

ಪಶ್ಚಿಮದ ಗೌರಿಪಾದದಲ್ಲಿ ಕುಡಿದ ಅಮಲಿನಲ್ಲಿದ್ದ ಯುವಕ ಸಾರ್ವಜನಿಕರಿಗೆ ತೊಂದರೆಯನ್ನು ಎಸಗುತ್ತಿದ್ದ. ಈ ನಿಟ್ಟಿನಲ್ಲಿ ಸ್ಥಳೀಯರು ಆತನ ಟಾರ್ಚರ್ ಸಹಿಸಿಕೊಳ್ಳಲಾಗದೇ ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದರು‌. ದೂರಿನ ಮೇರೆಗೆ ಪೊಲೀಸ್ ಕಾನ್‌ಸ್ಟೆಬಲ್ ಗಣೇಶ್ ಚೌಹಾಣ್ ಅವರು ಪರಿಸ್ಥಿತಿಯನ್ನು ನಿಯಂತ್ರಿಸಲು ಸ್ಥಳಕ್ಕೆ ಆಗಮಿಸಿದ್ದರು.

ವಿಡಿಯೋ ನೋಡಿ:



ಈ ವೇಳೆ ಆರೋಪಿಯೂ ಪೊಲೀಸ್ ಜೊತೆ ವಾದಕ್ಕೆ ಇಳಿದಿದ್ದು ಬಾಯಿಗೆ ಬದಂತೆ ಮಾತನಾಡಿದ್ದಾನೆ. ಆರೋಪಿ ರಾಹುಲ್ ತಾಯ್ಡೆ ಎಂಬಾತ, ಏಕಾಏಕಿ ಅಧಿಕಾರಿಯ ಮೇಲೆಯೇ ದಾಳಿ ಮಾಡಿದ್ದಾನೆ. ಅಷ್ಟೇ ಅಲ್ಲದೆ ಪೊಲೀಸ್ ಕೈಯಲ್ಲಿ ಇದ್ದ ಲಾಠಿ ಕಸಿದುಕೊಂಡು ಸರಿಯಾಗಿ ಬಾರಿಸಿದ್ದಾನೆ‌. ಮದ್ಯಪಾನಿಯ ಈ ಅನಿರೀಕ್ಷಿತ ದಾಳಿಯಿಂದಾಗಿ ಪೊಲೀಸ್ ಕಾನ್‌ಸ್ಟೆಬಲ್ ಗಣೇಶ್ ಎಂಬವರು ತೀವ್ರ ಗಾಯಗೊಂಡಿದ್ದರು.

Viral News: ರಣಬೀರ್‌ ಕಪೂರ್‌-ದೀಪಿಕಾ ಪಡುಕೋಣೆ ಸಿನಿಮಾ ನೋಡಿ ಕಾರ್ಪೋರೇಟ್‌ ಕೆಲಸ ಬಿಟ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಯುವತಿ

​ವೈರಲ್ ಆದ ವೀಡಿಯೊದಲ್ಲಿ ಆರೋಪಿಯೂ ಪೊಲೀಸರ ಕೋಲನ್ನು ಕಸಿದುಕೊಂಡು, ಪದೇ ಪದೇ ಹೊಡೆಯುತ್ತಿರುವುದನ್ನು ತೋರಿಸಲಾಗಿದೆ. ಸದ್ಯ ಖಡಕ್‌ಪಾಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದಾರೆ. ಕಲ್ಯಾಣ್ ಭಾಗದಲ್ಲಿ ಕರ್ತವ್ಯ ನಿರತ ಪೊಲೀಸರ ಮೇಲೆ ಈ ಮೊದಲು ಹಲ್ಲೆಗಳಾಗಿವೆ.

ಮೇ ತಿಂಗಳಿನಲ್ಲಿ ಕಲ್ಯಾಣ್-ಮಲಾಂಗ್ ರಸ್ತೆಯಲ್ಲಿ ಸಂಚಾರ ದಟ್ಟಣೆಗೆ ಕಾರಣವಾಗುತ್ತಿದ್ದ ಕಾರನ್ನು ಸ್ಥಳಾಂತರಿಸಲು ಸಂಚಾರ ಕಾನ್‌ಸ್ಟೆಬಲ್ ದೇವಿದಾಸ್ ವಾಘೆರೆ ಕೇಳಿಕೊಂಡಾಗ ಚಾಲಕ ಮತ್ತು ಅವರ ಇಬ್ಬರು ಸಹಾಯಕರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಸಾರ್ವ ಜನಿಕರ ಸುರಕ್ಷತೆ ಕಾಯುವ ಪೊಲೀಸರ ಮೇಲೆಯೇ ಹಲ್ಲೆ ನಡೆಯುತ್ತಿರುವ ಬಗ್ಗೆ ಆತಂಕ ವ್ಯಕ್ತವಾಗುತ್ತಿದೆ.