ಪುಣೆ: ಭಾನುವಾರ (ಅಕ್ಟೋಬರ್ 12) ತಡರಾತ್ರಿ ಪೊಲೀಸ್ ಕಾನ್‌ಸ್ಟೇಬಲ್ (Police Constable) ಒಬ್ಬರು ಕುಡಿದು ಕಾರು ಚಲಾಯಿಸಿದ್ದಲ್ಲದೆ, ಆಟೋಗೆ ಡಿಕ್ಕಿ ಹೊಡೆದಿದ್ದಾರೆ. ಅಪಘಾತದಲ್ಲಿ ಆರು ಜನರು ಗಾಯಗೊಂಡಿದ್ದಾರೆ. ಮಹಾರಾಷ್ಟ್ರದ (Maharashtra) ಪುಣೆಯ ರಂಜನ್‌ಗಾಂವ್ ಪ್ರದೇಶದಲ್ಲಿ ಘಟನೆ ನಡೆದಿದೆ. ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಹೇಮಂತ್ ಇನಾಮೆ ಎಂದು ಗುರುತಿಸಲಾದ ಕಾನ್‌ಸ್ಟೇಬಲ್ ಕರ್ತವ್ಯದ ನಂತರ ಮನೆಗೆ ಹಿಂತಿರುಗುತ್ತಿದ್ದರು. ಅಪಘಾತದ ಸಿಸಿಟಿವಿ ದೃಶ್ಯಾವಳಿಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ.
ಕುಡಿದು ಕಾರು ಚಲಾಯಿಸಿದ ಪೊಲೀಸ್ ಪೇದೆಯು ತನ್ನ ವಾಹನವನ್ನು ಪಾದಚಾರಿಗಳು ಮತ್ತು ಎರಡು ಮೋಟಾರ್‌ಸೈಕಲ್‌ಗಳಿಗೆ ಡಿಕ್ಕಿ ಹೊಡೆದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಪೇದೆ ಇನಾವೆ ಸೇರಿದಂತೆ ಆರು ಮಂದಿ ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಡಿತ ಮತ್ತು ಅತಿವೇಗದ ಚಾಲನೆಗಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಅವರ ರಕ್ತದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳು ಹೇಳುವಂತೆ ಇನಾಮೆ ಅವರ ಕಾರು ಮೊದಲು ರಸ್ತೆಬದಿಯಲ್ಲಿ ನಡೆಯುತ್ತಿದ್ದ ಪಾದಚಾರಿಗಳಿಗೆ ಡಿಕ್ಕಿ ಹೊಡೆದು ನಂತರ ಎರಡು ಮೋಟಾರ್ ಸೈಕಲ್‌ಗಳಿಗೆ ಡಿಕ್ಕಿ ಹೊಡೆದಿದೆ. ಸ್ಥಳದಲ್ಲಿದ್ದ ಜನರು ಗಾಯಾಳುಗಳಿಗೆ ಸಹಾಯ ಮಾಡಲು ಧಾವಿಸಿದರು. ಅಪಘಾತದ ಪರಿಣಾಮವಾಗಿ ಆಟೋರಿಕ್ಷಾ ಕೂಡ ಪಲ್ಟಿಯಾಗಿದ್ದು, ರಸ್ತೆಯ ಅವ್ಯವಸ್ಥೆ ಇನ್ನಷ್ಟು ಹೆಚ್ಚಾಯಿತು.
ವಿಡಿಯೊ ವೀಕ್ಷಿಸಿ:
ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಸಿಸಿಟಿವಿ ವಿಡಿಯೊ, ಅಪಘಾತದ ಕ್ಷಣಗಳನ್ನು ತೋರಿಸುತ್ತದೆ. ಈ ದೃಶ್ಯವು ಎರಡು ಬಿಳಿ ಕಾರುಗಳು ನಿಂತಿರುವ ಜನನಿಬಿಡ ರಸ್ತೆಯನ್ನು ಸೆರೆಹಿಡಿದಿದೆ. ಇದ್ದಕ್ಕಿದ್ದಂತೆ, ಇನಾಮೆ ಕಾರು ಪಾದಚಾರಿಗಳು ಮತ್ತು ಬೈಕ್‌ಗಳಿಗೆ ಡಿಕ್ಕಿ ಹೊಡೆದು, ಧೂಳು ಮತ್ತು ಹೊಗೆಯ ದೃಶ್ಯ ಕಂಡುಬಂತು. ಜನರು ಗಾಯಾಳುಗಳಿಗೆ ಸಹಾಯ ಮಾಡಲು ಓಡಿದ್ದಾರೆ. ಅಪಘಾತದ ಸ್ಥಳದ ಸುತ್ತಲೂ ಜನಸಮೂಹವು ಬೇಗನೆ ಸೇರಿದೆ.
ಅಕ್ಟೋಬರ್ 16 ರಂದು ಪೋಸ್ಟ್ ಮಾಡಿದ ನಂತರ ಈ ವಿಡಿಯೊ X (ಹಿಂದೆ ಟ್ವಿಟರ್) ನಲ್ಲಿ 55,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ವಿಡಿಯೊ ನೋಡಿದ ನಂತರ ಅನೇಕ ಬಳಕೆದಾರರು ಕೋಪ ಮತ್ತು ಕಳವಳವನ್ನು ವ್ಯಕ್ತಪಡಿಸಿದರು. ಅಪಘಾತ ಸಂಭವಿಸಿದೆ. ಆದರೆ, ಸಹಾಯ ಮಾಡುವ ಬದಲು, ಬಿಳಿ ಟೀ ಶರ್ಟ್ ಧರಿಸಿದ್ದ ಆ ಮೂವರು ವ್ಯಕ್ತಿಗಳು ನೋಡುತ್ತಾ ಕುಳಿತಿದ್ದರು ಎಂದು ಬಳಕೆದಾರರೊಬ್ಬರು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: Viral Video: ವಿದ್ಯಾರ್ಥಿನಿಯರು ಬಟ್ಟೆ ಬದಲಾಯಿಸುವಾಗ ಇಣುಕಿ ನೋಡಿ, ವಿಡಿಯೊ ರೆಕಾರ್ಡ್! ಶಾಕಿಂಗ್ ವಿಡಿಯೊ ಇಲ್ಲಿದೆ
ಪುಣೆಯಲ್ಲಿ ಕುಡಿದು ವಾಹನ ಚಲಾಯಿಸುವ ಪ್ರಕರಣಗಳು ಹೆಚ್ಚುತ್ತಿವೆ ಎಂದು ಹಲವರು ಟೀಕಿಸಿದ್ದಾರೆ. ಪುಣೆಯು ಕುಡಿದು ವಾಹನ ಚಲಾಯಿಸುವ ಪ್ರಕರಣಗಳಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ ಎಂದು ಬಳಕೆದಾರರೊಬ್ಬರು ಹೇಳಿದರು. ಇನ್ನು ಕೆಲವರು ನ್ಯಾಯದ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ಇಲ್ಲಿಯೂ ನ್ಯಾಯ ಸಿಗುವುದಿಲ್ಲ. ಏಕೆಂದರೆ ಪೊಲೀಸ್ ಪೇದೆಯೇ ಅಪಘಾತದಲ್ಲಿ ಶಾಮೀಲಾಗಿರುವುದರಿಂದ ನ್ಯಾಯ ಸಿಗುವುದಿಲ್ಲ ಎಂದು ಮತ್ತೊಬ್ಬ ಬಳಕೆದಾರರು ಹೇಳಿದರು.
ಹೇಮಂತ್ ಇನಾಮೆ ವಿರುದ್ಧ ಕುಡಿದು ವಾಹನ ಚಲಾಯಿಸುವುದು ಮತ್ತು ಅತಿವೇಗದ ಚಾಲನೆಗಾಗಿ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಅವರ ದೇಹದಲ್ಲಿ ಮದ್ಯದ ಮಟ್ಟವನ್ನು ನಿರ್ಧರಿಸಲು ಅವರ ರಕ್ತದ ಮಾದರಿಗಳನ್ನು ಪರೀಕ್ಷಿಸಲಾಗುತ್ತಿದೆ. ತನಿಖೆ ಮುಂದುವರೆದಿದ್ದು, ಫಲಿತಾಂಶಗಳ ಆಧಾರದ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.