ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಒಳಗೆ ಸೇರಿದರೆ ಗುಂಡು...: ಮದ್ಯಪಾನ ಮಾಡಿ ಕಾರ್‌ನ ಬಾನೆಟ್ ಮೇಲೆ ಕುಳಿತು ಮಹಿಳೆಯ ಕಿರಿಕ್‌; ಟ್ರಾಫಿಕ್‌ ಜಾಮ್‌

Viral Video: ಹರಿಯಾಣದ ಸಾರ್ವಜನಿಕ ರಸ್ತೆಯಲ್ಲಿ ಮಹಿಳೆಯೊಬ್ಬಳು ಗಲಾಟೆ ಮಾಡಿದ ದೃಶ್ಯ ಕಂಡು ಬಂದಿದೆ. ಮಹಿಳೆ ಮದ್ಯದ ಬಾಟಲಿ ಹಿಡಿದು ಕಾರಿನ ಬಾನೆಟ್ ಮೇಲೆ ಕುಳಿತಿದ್ದಾಳೆ. ಈ ದೃಶ್ಯ ವೈರಲ್ ಆಗಿದ್ದು, ಘಟನೆಯ ಸುತ್ತಲಿನ ಸಂದರ್ಭ ಮತ್ತು ಸಾರ್ವಜನಿಕ ಸ್ಥಳದಲ್ಲಿ ಪ್ರದರ್ಶಿಸಲಾದ ನಡವಳಿಕೆಯ ಬಗ್ಗೆ ವೀಕ್ಷಕರು ಚರ್ಚೆ ನಡೆಸಿದ್ದಾರೆ.

ಹರಿಯಾಣದಲ್ಲಿ ಕುಡಿತದ ಮತ್ತಿನಲ್ಲಿ ಕಾರ್‌ ಮೇಲೇರಿ ಕುಳಿತ ಮಹಿಳೆ

ಚಂಡೀಗಢ, ಸೆ. 6: ಕುಡಿತದ ನಶೆಯಲ್ಲಿ ಮಹಿಳೆಯೊಬ್ಬಳು ಕಾರಿನ ಬಾನೆಟ್ ಮೇಲೆ ಕುಳಿತು ಕಿರಿಕ್‌ ಮಾಡಿರುವ ಘಟನೆ ನಡೆದಿದೆ. ಸ್ಥಳದಲ್ಲಿದ್ದ ಸಾರ್ವಜನಿಕರು ಆಕೆಯನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದಾಗಲೂ ಜನರ ವಿರುದ್ಧವೇ ಕೂಗಾಡಿದ್ದಾಳೆ. ಹರಿಯಾಣದ ಸಾರ್ವಜನಿಕ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಅಲ್ಲಿ ಸೇರಿದ್ದ ಜನರು ಈ ದೃಶ್ಯವನ್ನು (Viral News) ಸೆರೆ ಹಿಡಿದಿದ್ದಾರೆ. ಸಾರ್ವಜನಿಕ ರಸ್ತೆಯಲ್ಲೇ ಈ ಘಟನೆ ನಡೆದಿದ್ದು ರಸ್ತೆ ಮಧ್ಯದಲ್ಲಿ ಕಾರ್ ಮೇಲೆ ಕುಳಿತು ಮದ್ಯ ಸೇವಿಸಿದ್ದಾಳೆ. ಆಕೆಯ ನಡವಳಿಕೆಯನ್ನು ಹಲವರು ಪ್ರಶ್ನಿಸಿದ್ದಾರೆ.

ಹರಿಯಾಣದ ಸಾರ್ವಜನಿಕ ರಸ್ತೆಯಲ್ಲಿ ಮಹಿಳೆಯೊಬ್ಬಳು ಗಲಾಟೆ ಸೃಷ್ಟಿಸುತ್ತಿರುವ ದೃಶ್ಯ ಕಂಡು ಬಂದಿದೆ. ಮಹಿಳೆ ಮದ್ಯದ ಬಾಟಲಿ ವಸ್ತುವನ್ನು ಹಿಡಿದು ಕಾರಿನ ಬಾನೆಟ್ ಮೇಲೆ ಕುಳಿತಿದ್ದಾಳೆ. ಈ ದೃಶ್ಯ ವೈರಲ್ ಆಗಿದ್ದು, ಘಟನೆಯ ಸುತ್ತಲಿನ ಸಂದರ್ಭ ಮತ್ತು ಸಾರ್ವಜನಿಕ ಸ್ಥಳದಲ್ಲಿ ಪ್ರದರ್ಶಿಸಲಾದ ನಡವಳಿಕೆಯ ಬಗ್ಗೆ ವೀಕ್ಷಕರು ಚರ್ಚೆ ನಡೆಸುತ್ತಿದ್ದಾರೆ.

ವಿಡಿಯೊ ನೋಡಿ:



ಕುಡಿತದ ಮತ್ತಿನಲ್ಲಿ ಮಹಿಳೆಯೂ ರಸ್ತೆಯಲ್ಲೇ ಕಾರಿನ ಮೇಲೇರಿ ಕುಳಿತಿದ್ದು ಅಲ್ಲದೆ ಓಲಾ ಕ್ಯಾಬ್ ಚಾಲಕನಿಗೆ ಮದ್ಯ ಎರಚಿ ಕಿರಿಕಿರಿ ಮಾಡಿದ್ದಾಳೆ. ಸಾರ್ವಜನಿಕರು ಆಕೆಯನ್ನು ಸಮಾಧಾನ ಪಡಿಸಲು ಮತ್ತು ರಸ್ತೆಯಿಂದ ಪಕ್ಕಕ್ಕೆ ಸರಿಸಲು ಯತ್ನಿಸಿದಾಗ, ಮಹಿಳೆ ಅವರ ಮೇಲೆಯೂ ಜೋರಾಗಿ ಕಿರುಚಾಡಿದ್ದಾಳೆ. ಸಾರ್ವಜನಿಕ ಸ್ಥಳದಲ್ಲಿ ಮಹಿಳೆ ತೋರಿಸಿದ ವರ್ತನೆ ಹಾಗೂ ರಸ್ತೆ ಸಂಚಾರಕ್ಕೆ ಅಡ್ಡಿಪಡಿಸಿದ ರೀತಿಯನ್ನು ಕಂಡು ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಸ್ತೆಗೆ ಮದ್ಯದ ಬಾಟಲ್‌ ಎಸೆದ ಕಿಡಿಗೇಡಿ; ಕೂದಲೆಳೆ ಅಂತರದಲ್ಲಿ ತಪ್ಪಿದ ದುರಂತ

ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿಯ ವರ್ತನೆ ತಪ್ಪು, ಆಕೆಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹಲವರು ಆಗ್ರಹಿಸಿದ್ದಾರೆ.​ ನೆಟ್ಟಿಗರು ಮಹಿಳಾ ಸ್ವಾತ್ರಂತ್ರ ಹೆಚ್ಚಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮಹಿಳೆಯ ಗುರುತು ಹಾಗೂ ಈ ಸಂಬಂಧ ಪೊಲೀಸರು ಕೈಗೊಂಡಿರುವ ಕ್ರಮಗಳ ಕುರಿತು ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಿದೆ.