ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕುಡಿದ ಅಮಲಿನಲ್ಲಿ ರೈಲ್ವೆ ಹಳಿ ಮೇಲೆ ಮಲಗಿದ ಯುವಕ; ಕ್ಯಾಮರಾದಲ್ಲಿ ಸೆರೆಯಾಯ್ತು ದೃಶ್ಯ

Drunk youth lies on railway track: ಮದ್ಯದ ಅಮಲಿನಲ್ಲಿ ಯುವಕನೊಬ್ಬ ರೈಲ್ವೆ ಹಳಿ ಮೇಲೆ ಮಲಗಿದ ಆತಂಕಕಾರಿ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಪಾಯವನ್ನೇ ಲೆಕ್ಕಿಸದೆ ಹಳಿ ಮೇಲೆ ಮಲಗಿರುವ ದೃಶ್ಯದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮುಂಬೈಯ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ನ ಪ್ಲಾಟ್‌ಫಾರ್ಮ್‌ನಲ್ಲಿ ಘಟನೆ ನಡೆದಿದೆ.

ಕುಡಿದ ಮತ್ತಿನಲ್ಲಿ ರೈಲ್ವೇ ಹಳಿ ಮೇಲೆ ಮಲಗಿದ ಯುವಕ

ಮುಂಬೈ, ಫೆ. 17: ಯುವಕನೊಬ್ಬ ಕಂಠಪೂರ್ತಿ ಕುಡಿದು, ಮದ್ಯದ ಅಮಲಿನಲ್ಲಿ ರೈಲ್ವೆ ಹಳಿಯಲ್ಲಿ ಮಲಗಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದರ ವಿಡಿಯೊ ವೈರಲ್ (viral video) ಆಗಿದೆ. ಸೋಮವಾರ (ಫೆಬ್ರವರಿ 16) ಮಧ್ಯಾಹ್ನ ಮುಂಬೈಯ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್(CSMT)ನ ಪ್ಲಾಟ್‌ಫಾರ್ಮ್ ಸಂಖ್ಯೆ-1ರ ಹಳಿ ಮೇಲೆ ಕುಡಿದ ಅಮಲಿನಲ್ಲಿದ್ದ ಹದಿಹರೆಯದ ಯುವಕನೊಬ್ಬ ಬಿದ್ದಿರುವುದು ಕಂಡುಬಂದಿತ್ತು. ಮಧ್ಯಾಹ್ನ 3.20ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಸ್ಥಳೀಯ ರೈಲು ಹಠಾತ್ತನೆ ಸ್ಥಗಿತಗೊಂಡಿತು.

ವ್ಯಕ್ತಿಯೊಬ್ಬ ಹಳಿಯ ಮೇಲೆ ಮಲಗಿದ್ದಾನೆಂದು ಲೋಕೋ ಪೈಲಟ್‍ಗೆ ಮಾಹಿತಿ ನೀಡಲಾಯಿತು. ತುರ್ತು ಸೂಚನೆ ನೀಡುವ ಸಲುವಾಗಿ ಅವರು ಜೋರಾಗಿ ಹಾರ್ನ್ ಹಾಕಿದ್ದಾರೆ. ನಂತರ ರೈಲನ್ನು ನಿಲ್ಲಿಸಿದ್ದಾರೆ. ಇದರಿಂದ ಕೂದಲೆಳೆ ಅಂತರದಲ್ಲಿ ಅನಾಹುತವೊಂದು ತಪ್ಪಿದೆ. ಕರ್ತವ್ಯ ನಿರತ ಸಬ್-ಇನ್ಸ್‌ಪೆಕ್ಟರ್ ವಿವೇಕ್ ಮತ್ತು ಹೆಡ್ ಕಾನ್‌ಸ್ಟೆಬಲ್ ರಾಜೇಶ್ ಚಿಟ್ಟೆ ಪರಿಸ್ಥಿತಿಯನ್ನು ಪರಿಶೀಲಿಸಲು ಸ್ಥಳಕ್ಕೆ ಧಾವಿಸಿದರು. ಅವರು ರೈಲಿನ ಹಾದಿಯಲ್ಲಿ ಮಲಗಿದ್ದ ಯುವಕನನ್ನು ಗಮನಿಸಿದರು. ಯುವಕನನ್ನು 18 ವರ್ಷದ ಅವಿನಾಶ್ ಪ್ರಕಾಶ್ ಕಾರ್ಡಿಲೆ ಎಂದು ಗುರುತಿಸಲಾಗಿದೆ.

ವಿಡಿಯೊ ವೀಕ್ಷಿಸಿ:



ಸಿಎಸ್‌ಎಂಟಿ ಬಸ್ ನಿಲ್ದಾಣದ ಬಳಿಯ ಫುಟ್‌ಪಾತ್‌ನಲ್ಲಿ ವಾಸಿಸುವ ಕಾರ್ಡಿಲೆ, ಎಸೆದಿರುವ ಪ್ಲಾಸ್ಟಿಕ್ ಬಾಟಲಿಗಳನ್ನು ಎತ್ತಿಕೊಳ್ಳು ಸಲುವಾಗಿ ಹಳಿಯತ್ತ ಪ್ರವೇಶಿಸಿದ್ದ. ಆದರೆ ಅವನು ಅತಿಯಾಗಿ ಕುಡಿದಿದ್ದರಿಂದ ನಿದ್ರೆಗೆ ಜಾರಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿ ತಕ್ಷಣವೇ ಹಳಿಯಲ್ಲಿ ಮಲಗಿದ್ದ ಕಾರ್ಡಿಲೆಯನ್ನು ಎಬ್ಬಿಸಿ ಸುಗಮ ರೈಲು ಸಂಚಾರಕ್ಕೆ ಅನುವು ಮಾಡಿದರು. ಹಠಾತ್ ನಿಲುಗಡೆಯ ಹೊರತಾಗಿಯೂ, ಲೋಕಲ್ ರೈಲು ವಿಳಂಬವಾಗಲಿಲ್ಲ. ಹಳಿಗಳನ್ನು ತೆರವುಗೊಳಿಸಿದ ಸ್ವಲ್ಪ ಸಮಯದ ನಂತರ ತನ್ನ ಪ್ರಯಾಣವನ್ನು ಪುನರಾರಂಭಿಸಿತು.

ರೈಲು ಬೋಗಿಯಲ್ಲ ಇದು ಮನೆ! ಮಗನ ರೈಲ್ವೆ ಕೆಲಸವನ್ನು ಗೌರವಿಸಲು ಮನೆಗೆ ಬೋಗಿಯಂತೆ ಬಣ್ಣ ಬಳಿದ ತಂದೆ

ಕಾರ್ಡಿಲೆಯನ್ನು ವಶಕ್ಕೆ ತೆಗೆದುಕೊಂಡು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ನಿಲ್ದಾಣದಲ್ಲಿದ್ದಾಗಲೂ ಕಾರ್ಡಿಲೆ ಕುಡಿದ ಮತ್ತಿನಲ್ಲಿಯೇ ಇದ್ದ. ರೈಲ್ವೆ ಕಾಯ್ದೆಯ ಸೆಕ್ಷನ್ 147ರ ಅಡಿಯಲ್ಲಿ ಅವನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.

IRCTCಯಿಂದ 'ಡಿವೈನ್ ಈಸ್ಟ್ ಟೆಂಪಲ್ ಟೂರ್' ಪ್ಯಾಕೇಜ್ ಆರಂಭ

ಐಆರ್‌ಸಿಟಿಸಿಯು ತನ್ನ ಪ್ರತಿಷ್ಠಿತ 'ಭಾರತ್ ಗೌರವ್' ಡಿಲಕ್ಸ್ ಎಸಿ ಪ್ರವಾಸಿ ರೈಲಿನ ಮೂಲಕ ಪೂರ್ವ ಭಾರತದ ಪ್ರಮುಖ ಧಾರ್ಮಿಕ ಹಾಗೂ ಸಾಂಸ್ಕೃತಿಕ ತಾಣಗಳನ್ನು ಒಳಗೊಂಡ 10 ದಿನಗಳ 'ಡಿವೈನ್ ಈಸ್ಟ್ ಟೆಂಪಲ್ ಟೂರ್' ಅನ್ನು ಪ್ರಾರಂಭಿಸಿದೆ. ಈ ರೈಲು ಆಧಾರಿತ ಪ್ರವಾಸ ಪ್ಯಾಕೇಜ್ ಮೂಲಕ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾ ಹಾಗೂ ಜಾರ್ಖಂಡ್ ರಾಜ್ಯಗಳಲ್ಲಿನ ಅತ್ಯಂತ ಪವಿತ್ರ ತೀರ್ಥಕ್ಷೇತ್ರಗಳು ಮತ್ತು ಸಾಂಸ್ಕೃತಿಕ ಹೇರಿಟೇಜ್ ತಾಣಗಳಿಗೆ ಭಕ್ತರು ಹಾಗೂ ಪ್ರವಾಸಿಗರಿಗೆ ಭೇಟಿ ನೀಡುವ ಅಪೂರ್ವ ಅವಕಾಶ ಲಭಿಸುತ್ತದೆ.