ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಹಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಆನೆಯ ರಕ್ಷಣೆ; ಸಮಯಕ್ಕೆ ಸರಿಯಾಗಿ ಬ್ರೇಕ್ ಹಾಕಿದ ರೈಲು ನಿರ್ವಾಹಕರು: ಇಲ್ಲಿದೆ ವೈರಲ್ ವಿಡಿಯೊ

Elephant Saved: ರೈಲು ಹಳಿ ಮೇಲೆ ನಡೆದುಕೊಂಡು ಹೋಗುತ್ತಿದ್ದ ಕಾಡಾನೆಯನ್ನು ಸಮಯಕ್ಕೆ ಸರಿಯಾಗಿ ಬ್ರೇಕ್ ಹಾಕಿ ನಿಲ್ಲಿಸುವ ಮೂಲಕ ರೈಲು ನಿರ್ವಾಹಕರು ರಕ್ಷಿಸಿದ್ದಾರೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಪರ್ವೀನ್ ಕಸ್ವಾನ್ ಹಂಚಿಕೊಂಡಿದ್ದಾರೆ.

ಕೋಲ್ಕತಾ: ರೈಲು ಹಳಿಯ ಮೇಲೆ ಆನೆಯೊಂದು (Elephant) ನಡೆದುಕೊಂಡು ಹೋಗುತ್ತಿರುವ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಪರ್ವೀನ್ ಕಸ್ವಾನ್ ವಿಡಿಯೊ ಹಂಚಿಕೊಂಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ (Viral Video) ಆಗಿದೆ. ಪಶ್ಚಿಮ ಬಂಗಾಳದಲ್ಲಿ ನಡೆದಿರುವ ಘಟನೆ ಇದಾಗಿದ್ದು, ಆನೆಯನ್ನು ನೋಡುತ್ತಿದ್ದಂತೆ ರೈಲು ನಿರ್ವಾಹಕರು ಬ್ರೇಕ್ ಹಾಕಿದ್ದಾರೆ. ಈ ಮೂಲಕ ಆನೆಯನ್ನು ರಕ್ಷಿಸಿದ್ದಾರೆ. ಗಜರಾಜ ರೈಲು ಹಳಿ ಬಿಟ್ಟು ಹೋಗುವವರೆಗೂ ಕಾದಿದ್ದಾರೆ.

ಆನೆಯನ್ನು ಕಾಪಾಡಲು ಲೋಕೋ ಪೈಲಟ್ ತೆಗೆದುಕೊಂಡ ನಿರ್ಧಾರ ವ್ಯಾಪಕ ಮೆಚ್ಚುಗೆಗೆ ಕಾರಣವಾಗಿದೆ. ಹಳಿಯಲ್ಲಿ ಆನೆ ನಡೆದುಕೊಂಡು ಬರುತ್ತಿರುವುದನ್ನು ನೋಡಿದ ತಕ್ಷಣ ಬ್ರೇಕ್ ಹಾಕಿದ್ದಾರೆ. ವಿಡಿಯೊದಲ್ಲಿ ಆನೆಯು ಹಳಿಯಲ್ಲಿ ನಡೆದುಕೊಂಡು ಬರುತ್ತಿರುವುದನ್ನು ಕಾಣಬಹುದು. ಕಾಡಿನ ಕಡೆಗೆ ಅದು ತಿರುಗಿ ಹೋಗುವವರೆಗೂ ಕಾದು ನಂತರ ಪ್ರಯಾಣ ಮುಂದುವರಿಸಿದ್ದಾರೆ.

ಇನ್ನು ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಹಂಚಿಕೊಂಡ ಅಧಿಕಾರಿ ಕಸ್ವಾನ್, “ಲೋಕೊ ಪೈಲಟ್ ಎಸ್. ಟೊಪ್ಪೊ ಮತ್ತು ಸಹಾಯಕ ಲೋಕೊ ಪೈಲಟ್ ಎಸ್. ಹಲ್ದಾರ್ ಅಭಿನಂದನೆಗೆ ಅರ್ಹರು. ಅವರು ಸಮಯಕ್ಕೆ ಸರಿಯಾಗಿ ಬ್ರೇಕ್ ಹಾಕಿ ಈ ದೈತ್ಯನನ್ನು ಉಳಿಸಿದ್ದಾರೆ” ಎಂದು ಕಸ್ವಾನ್ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೊ ವೀಕ್ಷಿಸಿ:



ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ವಿಡಿಯೊವನ್ನು 50,000ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಹಲವಾರು ಪ್ರತಿಕ್ರಿಯೆಗಳನ್ನು ಗಳಿಸಿದೆ. ಲೋಕೊ ಪೈಲಟ್ ಸಮಯಕ್ಕೆ ಸರಿಯಾಗಿ ರೈಲು ನಿಲ್ಲಿಸಿದ್ದು ಖುಷಿ ತಂದಿದೆ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಭಾರತವು ರಷ್ಯಾದಷ್ಟು ದೊಡ್ಡದಾಗಿದ್ದರೆ ಈ ಸುಂದರ ಪ್ರಾಣಿಗಳು ಮಾನವ ಹಸ್ತಕ್ಷೇಪದಿಂದ ಮುಕ್ತವಾಗಿ ಬದುಕಲು ಸಾಧ್ಯವಾಗುತ್ತಿತ್ತು ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

ಭಾರತದಲ್ಲಿ ಆನೆಗಳ ಸಂಖ್ಯೆ

ಜಾಗತಿಕ ಕಾಡಾನೆ ಸಂಖ್ಯೆಯಲ್ಲಿ ಭಾರತವು ಶೇಕಡಾ 60ರಷ್ಟಿದ್ದು, ಭಾರತದಲ್ಲಿ 33 ಆನೆ ಮೀಸಲು ಪ್ರದೇಶಗಳಿವೆ. 2023ರ ಆನೆ ಕಾರಿಡಾರ್‌ಗಳ ವರದಿಯ ಪ್ರಕಾರ, 150 ಗುರುತಿಸಲಾದ ಆನೆ ಕಾರಿಡಾರ್‌ಗಳಿವೆ. ಆನೆಗಳಿಗೆ ರಾಷ್ಟ್ರೀಯ ಪರಂಪರೆಯ ಪ್ರಾಣಿಗಳ ಸ್ಥಾನಮಾನವನ್ನು ನೀಡಲಾಗಿದೆ. ಇವು ದೇಶದ ಸಂಪ್ರದಾಯ ಮತ್ತು ಸಂಸ್ಕೃತಿಯಲ್ಲಿ ಆಳವಾಗಿ ಹುದುಗಿದೆ.

ಇದನ್ನೂ ಓದಿ: Accident: ವ್ಯಕ್ತಿಯ ಪ್ರಾಣವನ್ನೇ ತೆಗೆದ ನಿಲ್ಲಿಸಿದ್ದ ಟಾಟಾ ಹ್ಯಾರಿಯರ್‌ ಕಾರು; ಶಾಕಿಂಗ್‌ ವಿಡಿಯೋ ವೈರಲ್‌