ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಾಜಿ ಕ್ರಿಕೆಟಿಗ ಶೋಯೆಬ್ ಅಕ್ತರ್ ಸಹೋದರನ ಅಂತ್ಯಕ್ರಿಯೆಯಲ್ಲಿ ಲಷ್ಕರ್ ಉಗ್ರ ಸೈಫುಲ್ಲಾ ಕಸೂರಿ ಭಾಗಿ

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಅವರ ಸಹೋದರನ ಅಂತ್ಯಕ್ರಿಯೆಯಲ್ಲಿ ಲಷ್ಕರ್-ಎ-ತೈಬಾದ ಉಪ ಮುಖ್ಯಸ್ಥ ಸೈಫುಲ್ಲಾ ಕಸೂರಿ ಸೇರಿದಂತೆ ಹಲವು ಪ್ರಮುಖ ಭಯೋತ್ಪಾದಕರು ಪಾಲ್ಗೊಂಡಿದ್ದಾರೆ. ಇದರ ಚಿತ್ರಗಳು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಶೋಯೆಬ್ ಅಖ್ತರ್ ಸಹೋದರ ಜೂನ್ 24 ರಂದು ನಿಧನರಾದರು.

ಸಂಗ್ರಹ ಚಿತ್ರ

ಇಸ್ಲಾಮಾಬಾದ್: ಲಷ್ಕರ್-ಎ-ತೈಬಾದ (Let) ಉಪ ಮುಖ್ಯಸ್ಥ ಸೈಫುಲ್ಲಾ ಕಸೂರಿ ಸೇರಿದಂತೆ ಹಲವು ಭಯೋತ್ಪಾದಕರು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಅವರ ಸಹೋದರನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. ಇದರ ಚಿತ್ರ, ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಶೋಯೆಬ್ ಅಖ್ತರ್ ಅವರ ಹಿರಿಯ ಸಹೋದರ ಶಾಹಿದ್ ಅಖ್ತರ್ ಜೂನ್ 24ರಂದು ನಿಧನರಾಗಿದ್ದು, ಅವರ ಅಂತ್ಯಕ್ರಿಯೆಯಲ್ಲಿ ಭಾರತ ವಿರೋಧಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವ ಮತ್ತು 26/11 ಮುಂಬೈ ದಾಳಿ, ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿಂದಿನ ಭಯೋತ್ಪಾದಕ ಸಂಘಟನೆಯ ಹಲವು ಉಗ್ರರು ಭಾಗವಹಿಸಿದ್ದಾರೆ.

ಇಸ್ಲಾಮಾಬಾದ್‌ನ ಎಚ್ -8 ಸ್ಮಶಾನದಲ್ಲಿ ನಡೆದ ಶಾಹಿದ್ ಅಖ್ತರ್ ಅಂತ್ಯಕ್ರಿಯೆಯಲ್ಲಿ ಲಷ್ಕರ್-ಎ-ತೈಬಾದ ಉಪ ಮುಖ್ಯಸ್ಥ ಸೈಫುಲ್ಲಾ ಕಸೂರಿ ಮತ್ತು ಇತರ ಭಯೋತ್ಪಾದಕರು ಭಾಗಿಯಾಗಿರುವ ವಿಡಿಯೋದಲ್ಲಿ ಎಲ್‌ಇಟಿಯ ರಾಜಕೀಯ ಮುಖವಾಡ ಪಾಕಿಸ್ತಾನ್ ಮರ್ಕಜಿ ಮುಸ್ಲಿಂ ಲೀಗ್ (ಪಿಎಂಎಂಎಲ್) ಅಧ್ಯಕ್ಷ ಇನಾಮ್ ಉರ್ ರೆಹಮಾನ್ ಕೂಡ ಭಾಗವಹಿಸಿರುವುದನ್ನು ತೋರಿಸಿದೆ.

ಮಹಾರಾಷ್ಟ್ರದಲ್ಲಿ ಅಂಗನವಾಡಿ ಕಾರ್ಯಕರ್ತೆಯಿಂದ ಮಗುವಿನ ಮೇಲೆ ಹಲ್ಲೆ; ವಿಡಿಯೊ ನೋಡಿ ನೆಟ್ಟಿಗರ ಆಕ್ರೋಶ!

ಸೈಫುಲ್ಲಾ ಕಸೂರಿಯಂತಹ ಭಯೋತ್ಪಾದಕ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಬಹಿರಂಗವಾಗಿ ಕಾಣಿಸಿಕೊಂಡಿರುವುದು ಪಾಕಿಸ್ತಾನವು ಭಾರತ ವಿರೋಧಿ ಚಟುವಟಿಕೆಗಳಿಗೆ ನಿರಂತರ ಬೆಂಬಲ ನೀಡುತ್ತದೆ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದಂತಾಗಿದೆ. ಪಾಕಿಸ್ತಾನವು ಭಯೋತ್ಪಾದನೆಗೆ ಪ್ರಾಯೋಜಕತ್ವ ಒದಗಿಸುತ್ತಿರುವುದರಿಂದಲೇ ಇಲ್ಲಿ ಭಯೋತ್ಪಾದಕರು ಬಹಿರಂಗವಾಗಿ ಸುತ್ತಾಡುತ್ತಾರೆ ಎಂಬುದನ್ನು ಇದು ತೋರಿಸಿದೆ.

2011ರಲ್ಲಿ ಕ್ರಿಕೆಟ್‌ನಿಂದ ನಿವೃತ್ತರಾಗಿರುವ ಶೋಯಬ್ ಅಖ್ತರ್ ಪಾಕಿಸ್ತಾನದಲ್ಲಿ ಕ್ರಿಕೆಟ್ ಕಮೆಂಟರಿಗಳನ್ನು ನೀಡುತ್ತದೆ. ಹಲವು ಬಾರಿ ಅವರು ಐಪಿಎಲ್‌ಗೂ ನಿರೂಪಣೆಯನ್ನು ಮಾಡಿದ್ದಾರೆ.



ವಿಶ್ವಸಂಸ್ಥೆ ಗುರುತಿಸಿರುವ ಉಗ್ರರ ಪಟ್ಟಿಯಲ್ಲಿ ಸೈಫುಲ್ಲಾ ಕಸೂರಿ ಕೂಡ ಸೇರಿದ್ದಾನೆ. ವಿಶ್ವಸಂಸ್ಥೆಯ ಘೋಷಣೆಯ ಬಳಿಕ ಹಲವು ಉಗ್ರರನ್ನು ಬಂಧಿಸಿ ಜೈಲಿಗೆ ಕಳುಹಿಸಿರುವುದಾಗಿ ಪಾಕಿಸ್ತಾನ ಹೇಳುತ್ತಲೇ ಬಂದಿದೆ. ಆದರೆ ಈ ಉಗ್ರರು ಹಲವು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಲೇ ಇದ್ದಾರೆ.

ಸೈಫುಲ್ಲಾ ಕಸೂರಿ ಭಾರತದ ವಿರುದ್ಧ ಸಾರ್ವಜನಿಕ ಕಾರ್ಯಕ್ರಮದಲ್ಲಿ ಹಲವು ಬಾರಿ ಭಯೋತ್ಪಾದಕ ಹೇಳಿಕೆಗಳನ್ನು ನೀಡಿದ್ದಾನೆ. ಪ್ರಚೋದನಕಾರಿ ಹೇಳಿಕೆಗಳಿಗೆ ನೀಡುವ ಈತ 2025ರ 22ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಕೂಡ ಆಗಿದ್ದಾನೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ಪಾಕಿಸ್ತಾನದ ವಿರುದ್ಧ ಕೈಗೊಂಡಿರುವ ಹಲವು ಕಠಿಣ ಕ್ರಮಗಳ ಬಳಿಕ ಕಸೂರಿ ಭಾರತಕ್ಕೆ ಬಹಿರಂಗ ಬೆದರಿಕೆಗಳನ್ನು ಹಾಕುತ್ತಿದ್ದಾನೆ. ಭೂಮಿ, ಗಾಳಿ ಅಥವಾ ಸಮುದ್ರದಲ್ಲಿ ಕೂಡ ಶತ್ರುಗಳಿಗೆ ಜಾಗವಿಲ್ಲದಂತೆ ಮಾಡುತ್ತೇವೆ ಎಂದು ಹೇಳುತ್ತಿದ್ದಾನೆ.

ಆರ್‌ಎಸ್‌ಎಸ್ ಮಾಜಿ ಕಾರ್ಯಕರ್ತನ ಅಂತ್ಯಸಂಸ್ಕಾರ ನೆರವೇರಿಸಿದ ಮುಸ್ಲಿಂ ಮಹಿಳೆ: ಕೇರಳದಲ್ಲಿ ಮಾನವೀಯತೆಗೆ ಮೆಚ್ಚುಗೆ

ಪಾಕಿಸ್ತಾನಿ ಸೈನ್ಯವು ಲಷ್ಕರ್‌ನಂತಹ ಭಯೋತ್ಪಾದಕ ಗುಂಪುಗಳಿಗೆ ಬೆಂಬಲ ನೀಡುವುದನ್ನು ಕಸೂರಿ ಸ್ವತಃ ಹೇಳಿಕೊಂಡಿದ್ದು, ಪಾಕಿಸ್ತಾನ ಸೈನ್ಯವು ಅಂತ್ಯಕ್ರಿಯೆಯ ಪ್ರಾರ್ಥನೆಗಳನ್ನು ನಡೆಸಲು ನನ್ನನ್ನು ಆಹ್ವಾನಿಸುತ್ತದೆ. ಭಾರತವೂ ನನ್ನ ಬಗ್ಗೆ ಹೆದರುತ್ತಿದೆ ಎಂದು ನಿಮಗೆ ತಿಳಿದಿದೆಯೇ? ಎಂದು ಹೇಳಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.

ವಿದ್ಯಾ ಇರ್ವತ್ತೂರು

View all posts by this author