ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನರ್ಸರಿ ಫೀಸ್‌ 3.7 ಲಕ್ಷ ರುಪಾಯಿ! ಪದವಿ ಶಿಕ್ಷಣಕ್ಕೆ ಇಷ್ಟು ಖರ್ಚಾಗಿರಲಿಲ್ಲ ಎಂದ ನೆಟ್ಟಿಗರು

Viral News: ಹರಿಯಾಣದ ಗುರುಗ್ರಾಮ್‌ನ ನರ್ಸರಿ ಶಾಲೆಯ ಶುಲ್ಕದ ವಿವರ ಕೇಳಿದರೆ ನೀವು ನಿಜಕ್ಕೂ ಆಶ್ಚರ್ಯ ಪಡುತ್ತೀರಿ. ಮಗುವಿನ ನರ್ಸರಿ ಅಡ್ಮಿಷನ್‌ ಶುಲ್ಕ 1.24 ಲಕ್ಷ ರುಪಾಯಿ ಎಂದು ಪೋಷಕರೊಬ್ಬರು ತಿಳಿಸಿದ್ದಾರೆ. ಈ ಬಗ್ಗೆ ಆನ್‌ಲೈನ್‌ನಲ್ಲಿ ಗಂಭೀರ ಚರ್ಚೆ ನಡೆಯುತ್ತಿದೆ.

ಸಾಂದರ್ಭಿಕ ಚಿತ್ರ

ನವದೆಹಲಿ, ಏ. 2: ಇತ್ತೀಚೆಗೆ ಶಿಕ್ಷಣದ ವೆಚ್ಚ ದುಬಾರಿಯಾಗುತ್ತಿದೆ. ಪರೀಕ್ಷಾ ಶುಲ್ಕ, ನೋಂದಣಿ ಶುಲ್ಕ, ಹಾಸ್ಟೆಲ್ ಫೀಸ್ ಹೀಗೆ ಹಣ ವ್ಯಯಿಸುತ್ತಲೇ ಇರಬೇಕಾಗುತ್ತದೆ. ಅದರಲ್ಲೂ ಪ್ರಾಥಮಿಕ ಶಿಕ್ಷಣವೇ ಲಕ್ಷಾಂತರ ರುಪಾಯಿಗೆ ತಲುಪಿದೆ. ಈ ನಡುವೆ ಹರಿಯಾಣದ ಗುರುಗ್ರಾಮ್‌ನ ಪೋಷಕರೊಬ್ಬರು ತ್ರೈಮಾಸಿಕ ನರ್ಸರಿ ಶುಲ್ಕದ ಮೊತ್ತವನ್ನು ಪೋಸ್ಟ್ ಮೂಲಕ ಶೇರ್ (Viral News) ಮಾಡಿದ್ದು ಆನ್‌ಲೈನ್‌ನಲ್ಲಿ ಚರ್ಚೆಗೆ ನಾಂದಿ ಹಾಡಿದೆ.

ಗುರುಗ್ರಾಮ್‌ನ ನರ್ಸರಿ ಶಾಲೆಯ ಶುಲ್ಕದ ವಿವರ ಕೇಳಿದರೆ ನೀವು ನಿಜಕ್ಕೂ ಆಶ್ಚರ್ಯ ಪಡುತ್ತೀರಿ. ತನ್ನ ಮಗುವಿನ ಶಾಲೆ ನರ್ಸರಿಗೆ 1.24 ಲಕ್ಷ ರುಪಾಯಿ ಶುಲ್ಕ ನಿಗದಿಪಡಿಸಿದೆ ಎಂದು ಪೋಷಕರೊಬ್ಬರು ತಿಳಿಸಿದ್ದಾರೆ. ಆನ್‌ಲೈನ್‌ನಲ್ಲಿ ಈ ವಿಚಾರ ಚರ್ಚೆಗೆ ಕಾರಣವಾಗಿದೆ.

ದಿ ಪೀಪಲ್ ಸ್ಟುಡಿಯೋದ ಸಂಸ್ಥಾಪಕಿ ಪೂಜಾ ಸೆಟಿಯಾ 2026-27ರ ಶೈಕ್ಷಣಿಕ ಅವಧಿಯಲ್ಲಿ ತಮ್ಮ ಮಗುವಿನ ನರ್ಸರಿ ಶಿಕ್ಷಣಕ್ಕಾಗಿ ಪ್ರತಿ ತ್ರೈಮಾಸಿಕ ಅವಧಿಗೆ 1,24,780 ರುಪಾಯಿ ಪಾವತಿಸುತ್ತಿದ್ದೇನೆ ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.‌ ಜುಲೈಯಿಂದ ಮಾರ್ಚ್‌ವರೆಗಿನ ಮೂರು ತ್ರೈಮಾಸಿಕದಲ್ಲಿ ಮೊತ್ತವು ವಾರ್ಷಿಕವಾಗಿ ಸುಮಾರು 3.7 ಲಕ್ಷ ರುಪಾಯಿ ಎಂದಿದ್ದಾರೆ.

ಗಾಯಗೊಂಡ ಮಗುವಿಗೆ ಫೆವಿಕ್ವಿಕ್ ಬಳಸಿ ಚಿಕಿತ್ಸೆ: ವೈದ್ಯರ ವಿರುದ್ಧ ದೂರು ದಾಖಲು

ಲಿಂಕ್ಡಿನ್ ಪೋಸ್ಟ್‌ನಲ್ಲಿ, ʼʼಈ ಸ್ಕ್ರೀನ್‌ಶಾಟ್ ತಮಾಷೆಯಲ್ಲ! ಇದು ಈ ವರ್ಷ ನರ್ಸರಿ ಶಿಕ್ಷಣ ಪ್ರಾರಂಭಿಸುತ್ತಿರುವ ನನ್ನ ಮಗುವಿನ ಶುಲ್ಕ. ಈ ಹಣವನ್ನು ಶಾಲೆಯ ಬದಲಿಗೆ ಮಗುವಿನ ಹೆಸರಿನಲ್ಲಿ SIP (ಹೂಡಿಕೆ) ಮಾಡಿದ್ದಾರೆ ಮಗು ಬೆಳೆದು ಪದವಿ ಮುಗಿಸುವ ಹೊತ್ತಿಗೆ ದೊಡ್ಡ ಮೊತ್ತದ ಹಣ ಸಂಗ್ರಹವಾಗುತ್ತಿತ್ತುʼʼ ಎಂದು ಬರೆದಿದ್ದಾರೆ.

ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಪ್ರಸ್ತುತ ನರ್ಸರಿ ಶುಲ್ಕ‌ ಮತ್ತು ಅವರ ಶಿಕ್ಷಣದ ಒಟ್ಟು ವೆಚ್ಚದ ನಡುವೆ ಹೋಲಿಕೆ ಮಾಡಿದ್ದಾರೆ. ಒಬ್ಬರು, "ಈ ಒಂದು ತ್ರೈಮಾಸಿಕದ ಶುಲ್ಕದಲ್ಲಿ, ನಾನು ನನ್ನ ಸಂಪೂರ್ಣ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದೆʼʼ ಎಂದು ಕಮೆಂಟ್ ಮಾಡಿದ್ದಾರೆ.