ಮುಂಬೈ, ಫೆ. 23: ಖ್ಯಾತ ಗಾಯಕಿಯೊಬ್ಬರು ಆ್ಯಂಕರ್‌ಗೆ ಲೈವ್ ಶೋ ವೇಳೆಯೇ ಚಪ್ಪಲಿಯಿಂದ ಹೊಡೆದ ಅಘಾತಕಾರಿ ಘಟನೆ ನಡೆದಿದೆ. ಭೋಜ್‌ಪುರಿ ಲೈವ್ ಶೋ ವೇಳೆ ಈ ದೃಶ್ಯ ಕಂಡು ಬಂದಿದೆ. ಗಾಯಕಿ ನಿಶಾ ಉಪಾಧ್ಯಾಯ (Nisha Upadhyay) ಲೈವ್ ಶೋ ವೇಳೆಯೇ ನಿರೂಪಕನಿಗೆ ಚಪ್ಪಲಿಯಿಂದ ಬಾರಿಸಿದ್ದಾರೆ. ಗಾಯಕಿಯ ಸಂಭಾವನೆಯ ಕುರಿತಾಗಿ ನಿರೂಪಕ ವೇದಿಕೆಯಲ್ಲೇ ಅಸಂಬದ್ಧವಾಗಿ ಮಾತನಾಡಿದ್ದೇ ಈ ಜಗಳಕ್ಕೆ ಕಾರಣ ಎನ್ನಲಾಗಿದೆ.
ಈ ಘಟನೆಯ ಬಳಿಕ ಭೋಜ್‌ಪುರಿ ಚಿತ್ರರಂಗ ಮತ್ತು ವೇದಿಕೆ ಕಾರ್ಯಕ್ರಮಗಳಲ್ಲಿ ಹೆಚ್ಚುತ್ತಿರುವ ಅಸಭ್ಯ ವರ್ತನೆಯ ಬಗ್ಗೆ ದೊಡ್ಡ ಚರ್ಚೆ ಆರಂಭವಾಗಿದೆ. ನೀಲಿ ಬಣ್ಣದ ಸೀರೆಯನ್ನು ಧರಿಸಿದ ನಿಶಾ ಉಪಾಧ್ಯಾಯ ಆ್ಯಂಕರ್ ಬಳಿ ತೆರಳಿ ಹಲ್ಲೆಗೆ ಮುಂದಾಗುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ.
ವೈರಲ್ ವಿಡಿಯೊ ನೋಡಿ:
ಮುಂಬೈಯಲ್ಲಿ ನಡೆದ ಭೋಜ್‌ಪುರಿ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಈ ಸಂಘರ್ಷ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ ನಿಶಾ ಉಪಾಧ್ಯಾಯ್ ನಿರೂಪಕನೊಂದಿಗೆ ತೀವ್ರವಾಗಿ ವಾಗ್ವಾದ ನಡೆಸುತ್ತಿರುವುದು ಕಂಡು ಬಂದಿದೆ. ಗಾಯಕಿ ಕಾರ್ಯಕ್ರಮಕ್ಕೆ ಎಷ್ಟು ಹಣ ಪಡೆಯುತ್ತಾರೆ ಎಂಬ ವಿಷಯದ ಬಗ್ಗೆ ನಿರೂಪಕ ಮಾತನಾಡಿದ್ದರಿಂದ ನಿಶಾ ಸಿಟ್ಟಿಗೆದ್ದಿದ್ದಾರೆ ಎನ್ನಲಾಗಿದೆ.
ಬೆರಳಿನ ತುದಿಯಲ್ಲೇ ಉರಿದ ಗ್ಯಾಸ್ ಸ್ಟೌವ್: ಇದು ಪವಾಡವಲ್ಲ ವಿಜ್ಞಾನ!
ಸಿಟ್ಟಿಗೆದ್ದ ಕೂಡಲೇ ಗಾಯಕಿ ಚಪ್ಪಲಿಯಲ್ಲಿ ಬಾರಿಸಿದ್ದಾರೆ. ಈ ಕೃತ್ಯವು ಹತ್ತಿರ ನಿಂತಿದ್ದವರನ್ನು ದಿಗ್ಭ್ರಮೆಗೊಳಿಸಿದೆ. ಕೆಲವರು ತಕ್ಷಣ ಮುಂದಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸಿದ್ದಾರೆ. ಒಬ್ಬ ವ್ಯಕ್ತಿ ಆಕೆಯ ತೋಳನ್ನು ಹಿಡಿದಿದ್ದರೆ, ಇನ್ನೊಬ್ಬ ವ್ಯಕ್ತಿ ನಿರೂಪಕನನ್ನು ಸ್ಥಳದಿಂದ ದೂರ ಕರೆದೊಯ್ಯಲು ಪ್ರಯತ್ನಿಸಿದ್ದಾನೆ.
ಫೆಬ್ರವರಿ 23ರಂದು ಹಂಚಿಕೊಳ್ಳಲಾದ ವಿವೀಡಿಯೊ ಇದುವರೆಗೆ 62,000 ವೀಕ್ಷಣೆಗಳನ್ನು ಮತ್ತು ಹಲವು ಕಮೆಂಟ್‌ಗಳನ್ನು ಪಡೆದಿದೆ. ʼʼಭೋಜ್‌ಪುರಿ ಗಾಯಕಿಯೊಂದಿಗಿನ ಇಂತಹ ದೌರ್ಜನ್ಯ ಸಂಪೂರ್ಣವಾಗಿ ತಪ್ಪು. ಇದರಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು" ಎಂದು ಒಬ್ಬರು ಹೇಳಿದ್ದಾರೆ. 2023ರಲ್ಲಿ ಭೋಜ್‌ಪುರಿ ಜಾನಪದ ಗಾಯಕಿ ನಿಶಾ ಉಪಾಧ್ಯಾಯ ಬಿಹಾರದ ಸರನ್ ಜಿಲ್ಲೆಯಲ್ಲಿ ಪ್ರದರ್ಶನ ನೀಡುತ್ತಿದ್ದಾಗ ನಡೆದ ಗುಂಡಿನ ದಾಳಿಯಲ್ಲಿ ಗುಂಡು ತಗುಲಿ ಗಾಯಗೊಂಡಿದ್ದರು.