ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಹೊಡಿ ಮಗ ಹೊಡಿ ಮಗ...: ಕಾಲೇಜಿನಲ್ಲಿ ತಾರಕಕ್ಕೇರಿದ ಜಡೆ ಜಗಳ; ಯುವತಿಯರ ಕಾಳಗದ ವಿಡಿಯೊ ವೈರಲ್‌

Viral Video: ಕಾಲೇಜೊಂದರಲ್ಲಿ ಯುವತಿಯರ ಎರಡು ಗುಂಪಿನ ನಡುವೆ ಭೀಕರ ಜಗಳ ನಡೆದಿರುವ ಘಟನೆ ನಡೆದಿದೆ. ಸ್ಥಳದಲ್ಲಿದ್ದ ಯುವಕನೊಬ್ಬ ಈ ದೃಶ್ಯ ರೆಕಾರ್ಡ್ ಮಾಡಿದ್ದಾರೆ. ಘರ್ಷಣೆ ತಾರಕಕ್ಕೇರುವ ಮೊದಲು ಎರಡು ಗುಂಪುಗಳು ತೀವ್ರ ವಾಗ್ವಾದದಲ್ಲಿ ತೊಡಗಿರುವುದನ್ನು ಕಂಡು ಬಂದಿದೆ.

ಪುಣೆಯ ಕಾಲೇಜಿನ ಹೊರಗೆ ಯುವತಿಯರ ನಡುವೆ ಕಿತ್ತಾಟ

ಮುಂಬೈ, ಆ. 12: ಮಹಾರಾಷ್ಟ್ರದ ಪುಣೆಯ ಕಾಲೇಜೊಂದರಲ್ಲಿ ಯುವತಿಯರ ಎರಡು ಗುಂಪಿನ ನಡುವೆ ಭೀಕರ ಜಗಳ ನಡೆದಿರುವ ಘಟನೆ ವರದಿಯಾಗಿದೆ. ಸ್ಥಳದಲ್ಲಿದ್ದ ಯುವಕನೊಬ್ಬ ಈ ದೃಶ್ಯ (Viral News) ರೆಕಾರ್ಡ್ ಮಾಡಿದ್ದು, ಘರ್ಷಣೆ ಆರಂಭವಾಗುವ ಮೊದಲು ಎರಡು ಗುಂಪುಗಳು ತೀವ್ರ ವಾಗ್ವಾದದಲ್ಲಿ ತೊಡಗಿರುವುದು ಕಂಡು ಬಂದಿದೆ. ಈ ದೃಶ್ಯ ನೋಡಿದ ಅನೇಕರು ವಿದ್ಯಾರ್ಥಿಗಳ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ. ಯಾವ ಕಾರಣಕ್ಕಾಗಿ ಜಗಳ ಆರಂಭವಾಯ್ತು ಎನ್ನುವುದು ತಿಳಿದು ಬಂದಿಲ್ಲ.

ಪುಣೆಯಲ್ಲಿರುವ ಅಬಾಸಾಹೇಬ್ ಗಾರ್ವೇರ್ ಕಾಲೇಜಿನ ಹೊರಗಡೆ ಈ ಘಟನೆ ನಡೆದಿದೆ. ಯುವತಿಯರು ಮೊದಲು ಮಾತಿನ ಚಕಮಕಿಯಲ್ಲಿ ತೊಡಗಿದ್ದು ನಂತರ ಪರಸ್ಪರ ಕೈಕೈ ಮಿಲಾಯಿಸಿ ಹೊಡೆದಾಡಿಕೊಂಡಿದ್ದಾರೆ. ಈ ಘಟನೆಯು ಕಾಲೇಜಿನ ಹೊರಗೆ ಗೊಂದಲದ ಪರಿಸ್ಥಿತಿಯನ್ನು ಸೃಷ್ಟಿಸಿದ್ದು, ಜಗಳ ಮುಂದುವರೆದಂತೆ ಜನರು ಗುಂಪುಗಳು ಸುತ್ತಲೂ ಜಮಾಯಿಸಿತು.

ವಿಡಿಯೊ ನೋಡಿ:



ವೈರಲ್ ವಿಡಿಯೊ ಘರ್ಷಣೆಯಲ್ಲಿ ಭಾಗಿಯಾಗಿರುವ ಹಲವು ಯುವತಿಯರನ್ನು ತೋರಿಸಿದೆ. ಒಬ್ಬರಿಗೊಬ್ಬರು ಹೊಡೆದಾಡುತ್ತಾ ನೂಕಾಟ ನಡೆಸಿದ್ದಾರೆ. ಅಲ್ಲಿದ್ದವರು ಈಘಟನೆಯನ್ನು ವೀಕ್ಷಿಸುತ್ತ ನಿಂತಿರುವುದು ಕಂಡು ಬಂದಿದೆ. ಆದರೆ ಈ ಘಟನೆ ಕಾಲೇಜಿನ ಹೊರಗೆ ನಡೆದಿದ್ದು, ಭಾಗಿಯಾಗಿರುವವರೆಲ್ಲರೂ ಅಬಾಸಾಹೇಬ್ ಗರ್ವಾರೆ ಕಾಲೇಜಿನ ವಿದ್ಯಾರ್ಥಿಗಳೇ ಎಂಬುದು ದೃಢಪಟ್ಟಿಲ್ಲ.

1.9 ಕೋಟಿ ರುಪಾಯಿಯ ಮೈಕ್ರೋಸಾಫ್ಟ್ ಉದ್ಯೋಗ ತ್ಯಜಿಸಿ ಅವಲತ್ತುಕೊಂಡ ಯುವಕ

ಕಾಲೇಜಿನ ಹೊರಗೆ ನಡೆದ ಈ ಘಟನೆಯಿಂದಾಗಿ ಸಾರ್ವಜನಿಕ ಸ್ಥಳದಲ್ಲಿ ಕೆಲಕಾಲ ಗೊಂದಲ ಮತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ವಿಡಿಯೊಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು, ಹಲವರು ಇಂದಿನ ವಿದ್ಯಾರ್ಥಿಗಳಲ್ಲಿ ಶಿಸ್ತಿನ ಕೊರತೆ ಇದೆ ಎಂದು ಕಿಡಿಕಾರಿದ್ದಾರೆ. ಮತ್ತೊಬ್ಬರು ಇವರ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತ ದೂರು ದಾಖಲಾಗಿದೆಯೇ ಅಥವಾ ಪೊಲೀಸರು ಕ್ರಮ ಕೈಗೊಂಡಿದ್ದಾರೆಯೇ ಎಂಬುದರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.