ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಗುಗೆ ಎಚ್ಚರವಾಗಬಹುದೆಂದು ಡೈಪರ್ ಆರ್ಡರ್ ಮಾಡಿದ ಮಹಿಳೆಯ ಮನೆಯ ಡೋರ್ ಬೆಲ್ ಮಾಡದ ಫ್ಲಿಪ್‌ಕಾರ್ಟ್ ಡೆಲಿವರಿ ಬಾಯ್; ನೆಟ್ಟಿಗರ ಮನಗೆದ್ದ ವಿಡಿಯೊ ಇಲ್ಲಿದೆ

Viral Video: ಯಾವುದೇ ಕಾರಣ ಇಲ್ಲದೆ ಅಪರಿಚಿತರು ಕಾಳಜಿ ವಹಿಸುತ್ತಾರೆ ಅಂದಾಗ ನಮಗಾಗುವ ತೃಪ್ತಿ ಭಾವನೆಯೇ ಬೇರೆ. ಯಾವುದೇ ಸಣ್ಣ ಪುಟ್ಟ ಘಟನೆಯೇ ಆಗಿರಲಿ ಅದು ನಮ್ಮನ್ನು ಇಡೀ ದಿನವನ್ನು ಖುಷಿಯಾಗಿ ಇರಿಸುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರಿನಲ್ಲಿ ಫ್ಲಿಪ್‌ಕಾರ್ಟ್ ಡೆಲಿವರಿ ಬಾಯ್ ಒಬ್ಬ ತೋರಿಸಿದ ಕಾಳಜಿಗೆ ಮಹಿಳೆಯೊಬ್ಬರು ಫಿದಾ ಆಗಿದ್ದಾರೆ. ತಡರಾತ್ರಿ ಮಗುವಿನ ಡೈಪರ್ ಆರ್ಡರ್ ತಲುಪಿಸಲು ಬಂದ ಡೆಲಿವರಿ ಏಜೆಂಟ್‌ನ ಹೃದಯವಂತಿಕೆ ಎಲ್ಲರ ಹೃದಯ ಗೆದ್ದಿದೆ. ಈ ಘಟನೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ ಮಹಿಳೆ, ಇದನ್ನು "ಅತ್ಯಂತ ಸಿಹಿ ಅನುಭವ" ಎಂದು ಕರೆದಿದ್ದಾರೆ. ಅಷ್ಟಕ್ಕೂ ಆಗಿದ್ದೇನೆಂದರೆ...

ಫ್ಲಿಪ್‌ಕಾರ್ಟ್ ಡೆಲಿವರಿ ಬಾಯ್

ಬೆಂಗಳೂರು, ಜು. 20: ವೇಗದ ಗತಿಯಲ್ಲಿ ಬದುಕು ಸಾಗುವ ಮಧ್ಯೆ ಯಾವುದೇ ಕಾರಣ ಇಲ್ಲದೆ ಅಪರಿಚಿತರು ಕಾಳಜಿ ವಹಿಸುತ್ತಾರೆ ಅಂದಾಗ ನಮಗಾಗುವ ತೃಪ್ತಿ ಭಾವನೆಯೇ ಬೇರೆ. ಯಾವುದೋ ಸಣ್ಣ ಘಟನೆಯೇ ಆಗಿರಲಿ ಅದು ನಮ್ಮನ್ನು ಇಡೀ ದಿನವನ್ನು ಖುಷಿಯಾಗಿ ಇರಿಸುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರಿನಲ್ಲಿ ಫ್ಲಿಪ್‌ಕಾರ್ಟ್ ಡೆಲಿವರಿ ಬಾಯ್ ಒಬ್ಬ ತೋರಿಸಿದ ಕಾಳಜಿಗೆ ಮಹಿಳೆಯೊಬ್ಬರು ಫಿದಾ ಆಗಿದ್ದಾರೆ. ತಡರಾತ್ರಿ ಮಗುವಿನ ಡೈಪರ್ ಆರ್ಡರ್ ತಲುಪಿಸಲು ಬಂದ ಡೆಲಿವರಿ ಏಜೆಂಟ್‌ನ ಹೃದಯವಂತಿಕೆ ಎಲ್ಲರ ಹೃದಯ ಗೆದ್ದಿದೆ. ಈ ಘಟನೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ (Viral News) ಮಾಡಿದ ಮಹಿಳೆ, ʼʼಅತ್ಯಂತ ಸಿಹಿ ಅನುಭವʼʼ ಎಂದು ಕರೆದಿದ್ದಾರೆ.

ಬೆಂಗಳೂರಿನ ಮಹಿಳೆಯೊಬ್ಬರು ರಾತ್ರಿ 10 ಗಂಟೆಗೆ ಮಗುವಿನ ಡೈಪರ್‌ ಖಾಲಿಯಾಗಿದೆ ಎಂದು ನೆನಪಿಸಿಕೊಂಡಿದ್ದಾರೆ. ಹೀಗಾಗಿ ರಾತ್ರಿಗೆ ಬೇಕಾಗಬಹುದು ಎಂದು ಫ್ಲಿಪ್‌ಕಾರ್ಟ್ ಮಿನಿಟ್ಸ್‌ನಲ್ಲಿ ಆರ್ಡರ್ ಮಾಡಿದ್ದಾರೆ. ರಾತ್ರಿ 10:30ರ ಸುಮಾರಿಗೆ, ಡೆಲಿವರಿ ಬಾಯ್ ಅವರ ಮನೆ ಬಾಗಿಲಿಗೆ ತಲುಪಿದ್ದಾರೆ‌. ಆದರೆ ಅವರು ಡೋರ್‌ಬೆಲ್ ಬಾರಿಸುವ ಬದಲು, ಮಹಿಳೆಗೆ ಕರೆ ಮಾಡಿ, 'ʼಮೇಡಂ, ದಯವಿಟ್ಟು ಬಾಗಿಲು ತೆರೆಯಿರಿ'ʼ ಎಂದು ತಿಳಿಸಿದ್ದಾರೆ.

ವಿಡಿಯೊ ನೋಡಿ:



ಕೂಡಲೇ ಹೊರಗೆ ಬಂದು ಬಾಗಿಲು ತೆರೆದ ಮಹಿಳೆ, "ಏಕೆ ಡೋರ್‌ಬೆಲ್ ಬಾರಿಸಲಿಲ್ಲ?" ಎಂದು ಪ್ರಶ್ನಿಸಿದರು. ಆಗ ಡೆಲಿವರಿ ಬಾಯ್ ನೀಡಿದ ಪ್ರತಿಕ್ರಿಯೆ ಅವರನ್ನು ಬಹಳಷ್ಟು ಭಾವುಕರನ್ನಾಗಿ ಮಾಡಿತು. ʼʼಡೈಪರ್ ಆರ್ಡರ್ ಆಗಿದ್ದರಿಂದ ಮನೆಯಲ್ಲಿ ಸಣ್ಣ ಮಗು ಇರಬಹುದು, ಈ ಸಯಮದಲ್ಲಿ ಮಗು ಮಲಗಿದ್ದರೆ ಎಚ್ಚರಗೊಳ್ಳಬಹುದು ಎಂದು ಡೋರ್ ಬೆಲ್ ಬಾರಿಸಿಲ್ಲʼʼ ಎಂಬುದಾಗಿ ಡೆಲಿವರಿ ಬಾಯ್‌ ತಿಳಿಸಿದರು. “ಆ ಒಂದು ಮಾತು ನನ್ನ ಹೃದಯವನ್ನು ಸಂಪೂರ್ಣವಾಗಿ ಕರಗಿಸಿತು. ಎಲ್ಲರೂ ಆತುರದಲ್ಲಿರುವ ಜಗತ್ತಿನಲ್ಲಿ, ತಾವು ಎಂದಿಗೂ ಭೇಟಿಯಾಗದ, ನಿದ್ರಿಸುತ್ತಿರುವ ಮಗುವಿನ ಬಗ್ಗೆ ಯೋಚಿಸಿದ್ದಾರೆ. ನಿಜಕ್ಕೂ ಇಷ್ಟೊಂದು ಕಾಳಜಿವಹಿಸಿದ್ದು ನನ್ನ ಹೃದಯವನ್ನು ಕರಗಿಸಿತುʼʼ ಎಂದು ಮಹಿಳೆ ಭಾಔುಕರಾಗಿ ಹೇಳಿದ್ದಾರೆ.

ನೆರೆಮನೆಯ ಯುವಕನಿಂದನೇ ಕಿರುಕುಳ; ವಿಡಿಯೊ ಮಾಡಿ ಕಣ್ಣೀರು ಹಾಕಿದ ಬಾಲಕಿ

ʼʼಕೆಲವೊಮ್ಮೆ ಅಪರಿಚಿತರು ತೋರುವ ಸಣ್ಣ ದಯೆ ನಿಮ್ಮೊಂದಿಗೆ ಶಾಶ್ವತವಾಗಿ ಉಳಿಯುತ್ತದೆʼʼ ಎಂಬ ಶೀರ್ಷಿಕೆಯೊಂದಿಗೆ ಈ ಪೋಸ್ಟ್ ಶೇರ್ ಮಾಡಿದ್ದಾರೆ. ಈ ಘಟನೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ''ಕೆಲವು ಸಂದರ್ಭವನ್ನು ಅರ್ಥೈಸಿಕೊಳ್ಳುವುದು, ಸಣ್ಣ ಪುಟ್ಟ ಕಾಳಜಿ ವಹಿಸುವುದು ನಿಜಕ್ಕೂ ನಮಗೆ ಖುಷಿ ನೀಡುತ್ತದೆ'' ಎಂದು ಒಬ್ಬರು ಹೇಳಿದ್ದಾರೆ. "ಕೆಲವೇ ಅಪರೂಪದ ಮತ್ತು ಒಳ್ಳೆಯವರಲ್ಲಿ ಇವರು ಕೂಡ ಒಬ್ಬರು” ಎಂದು ಇನ್ನೊಬ್ಬರು ಕಮೆಂಟ್‌ ಮಾಡಿದ್ದಾರೆ.