ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಆ್ಯಪಲ್ ಕಂಪನಿಯ ಮೊದಲ ಫೋಲ್ಡಬಲ್ ಐಫೋನ್ ಲಾಂಚ್: ಬೆಲೆ ನೋಡಿ "ಎರಡೂ ಕಿಡ್ನಿ ಮಾರಬೇಕಾಗುತ್ತೆ" ಎಂದ ನೆಟ್ಟಿಗರು!

Viral News: ಇದೀಗ ​ಆಪಲ್ ಸಂಸ್ಥೆ ತನ್ನ ಮತ್ತೊಂದು ಬಹುನಿರೀಕ್ಷಿತ ಹೊಸ ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಮೊದಲ ಫೋಲ್ಡಬಲ್‌ ಅಂದರೆ ಮಡಚಬಹುದಾದ ಸ್ಮಾರ್ಟ್‌ಫೋನ್ iPhone Duo ಬಿಡುಗಡೆ ಮಾಡಿದೆ. ಆದರೆ ಇದರ ವೈಶಿಷ್ಟ್ಯದ ಬಗ್ಗೆ ಜನ ಆಕರ್ಷಿತರಾದರೂ ಬೆಲೆ ಬಗ್ಗೆ ವ್ಯಾಪಕ ಚರ್ಚೆ ಹಾಗೂ ಮೀಮ್ ಗಳ ಮಹಾಪೂರವೇ ಹರಿದು ಬರುತ್ತಿದೆ‌.

ಫೋಲ್ಡೆಬಲ್‌ ಐಫೋನ್ ಬಿಡುಗಡೆ-ಬೆಲೆ ಕಂಡು ಅಸಮಾಧಾನ ಹೊರಹಾಕಿದ ನೆಟ್ಟಿಗರು

ನವದೆಹಲಿ, ಸೆ.10: ಇಂದು ವಿವಿಧ ತಂತ್ರಜ್ಞಾನದ ಮೊಬೈಲ್ ಫೋನ್ ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಅದರಲ್ಲೂ ದುಬಾರಿ ಫೋನ್ ಅಂತ ಬಂದಾಗ ಆಪಲ್ ಸಂಸ್ಥೆಯ ಐಫೋನ್ ಮುಂದಿದೆ. ಇದೀಗ ​ಆಪಲ್ ಸಂಸ್ಥೆ ತನ್ನ ಮತ್ತೊಂದು ಬಹುನಿರೀಕ್ಷಿತ ಹೊಸ ಸರಣಿಯ ಸ್ಮಾರ್ಟ್‌ಫೋನ್‌ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಮೊದಲ ಫೋಲ್ಡಬಲ್‌ ಅಂದರೆ ಮಡಚಬಹುದಾದ ಸ್ಮಾರ್ಟ್‌ಫೋನ್ (iPhone Duo) ಬಿಡುಗಡೆ ಮಾಡಿದೆ. ಆದರೆ ಇದರ ವೈಶಿಷ್ಟ್ಯದ ಬಗ್ಗೆ ಜನ ಆಕರ್ಷಿತರಾದರೂ ಬೆಲೆ ಬಗ್ಗೆ ವ್ಯಾಪಕ ಚರ್ಚೆ ಹಾಗೂ ಮೀಮ್ ಗಳ ಮಹಾಪೂರವೇ ಹರಿದು ಬರುತ್ತಿದೆ‌.

ಆಪಲ್ ತನ್ನ ಇತ್ತೀಚಿನ ಸರಣಿ ಬಿಡುಗಡೆಯ ನಂತರ ಮತ್ತೊಮ್ಮೆ ಇಂಟರ್ನೆಟ್‌ನಲ್ಲಿ ಭಾರೀ ಸುದ್ದಿಯಾಗಿದೆ. ಆದರೆ ಈ ಬಾರಿ, ಎಲ್ಲರ ಗಮನ ಸೆಳೆದಿರುವುದು ವೈಶಿಷ್ಟ್ಯಗಳು ಮಾತ್ರವಲ್ಲ. ಹೊಸದಾಗಿ ಬಿಡುಗಡೆಯಾದ ಸಾಧನಗಳ ಬೆಲೆಗಳು, 'ಐಫೋನ್ ಡುಯೋ' ಮಾದರಿಯ ಬೆಲೆ ಕಂಡು ಗ್ರಾಹಕರು ಅಚ್ಚರಿಗೆ ಒಳಗಾಗಿದ್ದಾರೆ.

ವಿಡಿಯೋ ನೋಡಿ:



ಆಪಲ್ ಸಂಸ್ಥೆ ನಿನ್ನೆ ತನ್ನ ಐಫೋನ್, ಆಪಲ್ ವಾಚ್ ಮತ್ತು ಏರ್‌ಪಾಡ್ಸ್ ಸಾಲಿನಲ್ಲಿ ಐದು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ.​ ಆಪಲ್ ಬಿಡುಗಡೆ ಮಾಡಿರುವ ಐಫೋನ್ 18 ಪ್ರೋದ ಆರಂಭಿಕ ಬೆಲೆ ಭಾರತದಲ್ಲಿ 1,64,900 ಹಾಗೂ ಐಫೋನ್ 18 ಪ್ರೋ ಮ್ಯಾಕ್ಸ್ ಬೆಲೆ 1,79,900 ದಿಂದ ಆರಂಭವಾಗುತ್ತಿದೆ. ಎರಡೂ ಮಾದರಿಗಳು 256GB, 512GB, 1TB ಮತ್ತು 2TB ಸ್ಟೋರೇಜ್ ಆಯ್ಕೆಗಳೊಂದಿಗೆ ಲಭ್ಯವಿರುತ್ತವೆ. ಸೆಪ್ಟೆಂಬರ್ 12 ರಿಂದ ಪೂರ್ವ-ಆರ್ಡರ್‌ಗಳು ಪ್ರಾರಂಭವಾಗಿ ಸೆಪ್ಟೆಂಬರ್ 18 ರಿಂದ ಫೋನ್‌ಗಳು ಮಾರಾಟಕ್ಕೆ ಬರಲಿವೆ.

Viral Video: ಪೊಲೀಸ್ ಬೈಕ್‌ನಲ್ಲಿ ರ‍್ಯಾಪಿಡೋ ಸೇವೆ? ಸರ್ಕಾರಿ ವಾಹನ ದುರುಪಯೋಗ ಪಡಿಸಿಕೊಂಡ ಸಬ್ ಇನ್ಸ್‌ಪೆಕ್ಟರ್‌ ವಿರುದ್ಧ ಕ್ರಮ

ಆದರೆ ನಿಜವಾಗಿಯೂ ಇಂಟರ್ನೆಟ್‌ನಲ್ಲಿ ಚರ್ಚಿಸುವಂತೆ ಮಾಡಿದ್ದು ಐಫೋನ್ ಡ್ಯುಯೊದ ಬೆಲೆ, ಆಪಲ್‌ನ ಮಡಿಚ ಬಹುದಾದ ಐಫೋನ್ 256GB ರೂಪಾಂತರಕ್ಕೆ 2,99,900 ರಿಂದ ಪ್ರಾರಂಭ ವಾಗುತ್ತದೆ. 512GB ಮಾದರಿಯ ಬೆಲೆ 3,24,900, 1TB ಆವೃತ್ತಿಯ ಬೆಲೆ 3,74,900ಟಾಪ್-ಎಂಡ್ 2TB ರೂಪಾಂತರವು 4,49,900 ಬೆಲೆಯಲ್ಲಿ ಮಾರಾಟವಾಗಲಿದೆ.

ಸೋಷಿಯಲ್ ಮೀಡಿಯಾದಲ್ಲಿ ಈ ದುಬಾರಿ ಬೆಲೆಯ ಕುರಿತು ಹಾಸ್ಯಸ್ಪದ ಪ್ರಕ್ರಿಯೆಗಳು ವ್ಯಕ್ತವಾಗುತ್ತಿವೆ. ಬಳಕೆದಾರರು ಎರಡೂ ಕಿಡ್ನಿ ಮಾರಿದರೆ ಈ ಫೋನ್ ಖರೀದಿ ಮಾಡಬಹುದು. ಹಿಂದೆಲ್ಲಾ ಐಫೋನ್ ಕೊಳ್ಳಲು ಒಂದು ಕಿಡ್ನಿ ಮಾರಬೇಕಿತ್ತು ಈಗ ಎರಡನ್ನು ಮಾರಬೇಕಿದೆ ಎಂದು ತಮಾಷೆ ಮಾಡಿದ್ದಾರೆ. ಬಳಕೆದಾರರೊಬ್ಬರು ​ಐಫೋನ್ ಮೇಲೆ ಸರ್ಕಾರ ವಿಧಿಸಿದ ಜಿಎಸ್‌ಟಿ ಪ್ರಮಾಣವೇ ನನ್ನ ಒಂದು ತಿಂಗಳ ಸಂಬಳಕ್ಕಿಂತ ಹೆಚ್ಚಾಗಿದೆ ಎಂದು ಕಾರ್ಪೊರೇಟ್ ಉದ್ಯಮಿಯೊಬ್ಬರು ಹೇಳಿದ್ದಾರೆ.