ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʼʼಇಂತಹ ವ್ಯವಸ್ಥೆ ನಮ್ಮ ದೇಶಕ್ಕೂ ಬೇಕುʼʼ: ಗೋವಾದಲ್ಲಿ ಆರ್ಡರ್‌ ಮಾಡಿದ ಕೇವಲ 20 ನಿಮಿಷದಲ್ಲೇ ದಿನಸಿ ಪಡೆದ ಇಂಗ್ಲೆಂಡ್‌ ಯುವತಿಗೆ ಅಚ್ಚರಿಯೋ ಅಚ್ಚರಿ

Viral Video: ವಿದೇಶಿ ಯುವತಿಯೊಬ್ಬಳು ಭಾರತದ ವೇಗದ ಡೆಲಿವರಿ ವ್ಯವಸ್ಥೆಯನ್ನು ಕೊಂಡಾಡಿದ್ದಾರೆ. ಗೋವಾಕ್ಕೆ ಪ್ರವಾಸಕ್ಕೆಂದು ಬಂದಿದ್ದ ಇಂಗ್ಲೆಂಡ್‌ನ ಕ್ಲೋ ಇನ್‌ಸ್ಟಾಮಾರ್ಟ್‌ನಲ್ಲಿ ದಿನಸಿ ಆರ್ಡರ್ ಮಾಡಿದ್ದಾರೆ. ಕೇವಲ 20 ನಿಮಿಷದಲ್ಲೇ ಆರ್ಡರ್‌ ಕೈ ಸೇರಿದ್ದು, ಈ ಅಚ್ಚರಿಯ ವಿಚಾರವನ್ನು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ.

ಇಂಗ್ಲೆಂಡ್‌ ನಿವಾಸಿ ಕ್ಲೋ

ಪಣಜಿ, ಮಾ. 30: ಇಂದು ಯಾವುದೇ ಅಗತ್ಯ ವಸ್ತು ಬೇಕೆಂದಾಗ ಆನ್‌ಲೈನ್ ಮೂಲಕ ಸುಲಭವಾಗಿ ಖರೀದಿಸುತ್ತೇವೆ. ಅದರಲ್ಲೂ ಬ್ಲಿಂಕ್‌ಇಟ್‌, ಜಿಯೋ ಮಾರ್ಟ್‌ನಂತಹ ಆನ್‌ಲೈನ್ ಆ್ಯಪ್‌ಗಳ ಬಳಕೆ ಇಂದು ಹೆಚ್ಚಾಗಿದೆ. ಇದೀಗ ವಿದೇಶಿ ಯುವತಿಯೊಬ್ಬಳು ಭಾರತದ ವೇಗದ ಡೆಲಿವರಿ ವ್ಯವಸ್ಥೆ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಗೋವಾಕ್ಕೆ ಪ್ರವಾಸಕ್ಕೆಂದು ಬಂದಿದ್ದ ಇಂಗ್ಲೆಂಡ್‌ನ ಕ್ಲೋ ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಲ್ಲಿ ದಿನಸಿ ಆರ್ಡರ್ ಮಾಡಿದ್ದಾರೆ. 20 ನಿಮಿಷದಲ್ಲೇ ಅವರು ಆರ್ಡ್‌ರ್‌ ಮಾಡಿದ ವಸ್ತು ಅವರ ಕೈ ಸೇರಿದೆ. ಈ ವಿಶಿಷ್ಟ ಅನುಭವವನ್ನು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ (Viral News) ಮಾಡಿದ್ದಾರೆ.

ಕ್ಲೋ ಗೋವಾದಲ್ಲಿದ್ದಾಗ ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಮೂಲಕ ದಿನಸಿ ವಸ್ತುಗಳನ್ನು ಆರ್ಡರ್ ಮಾಡಿರುವುದಾಗಿ ಬಹಿರಂಗಪಡಿಸಿದ್ದಾರೆ. ಈ ಆರ್ಡರ್ ಸುಮಾರು 20 ನಿಮಿಷಗಳಲ್ಲಿ ಮನೆ ಬಾಗಿಲಿಗೆ ತಲುಪಿದೆ ಎಂದು ಅವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ವಿಡಿಯೊ ನೋಡಿ:



ವಿಡಿಯೊದಲ್ಲಿ ಕ್ಲೋ ಕೊತ್ತಂಬರಿ, ಬೆಳ್ಳುಳ್ಳಿ, ಚೆರ್ರಿ, ಟೊಮೆಟೊ, ಸೌತೆಕಾಯಿ, ಫೆಟಾ ಚೀಸ್ ಮತ್ತು ಬ್ರ್ಯಾಂಡೆಡ್‌ ಡಾಗ್ ಫುಡ್ ಮುಂತಾದ ವಸ್ತು ಆರ್ಡರ್ ಮಾಡಿರುವುದು ಕಂಡು ಬಂದಿದೆ. ತಾಜಾ ಉತ್ಪನ್ನಗಳು ಮತ್ತು ಸಾಕುಪ್ರಾಣಿಯ ಆಹಾರ ಕೂಡ ಇಷ್ಟು ಸುಲಭವಾಗಿ ತಲುಪಿಸಿರುವ ಬಗ್ಗೆ ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ʼʼಒಟ್ಟು 822 ರುಪಾಯಿಯ ವಸ್ತು ಖರೀದಿಸಿದೆ. ಮೂರು ಪ್ಯಾಕೆಟ್ ನಾಯಿ ಆಹಾರಕ್ಕೆ ಅಂದಾಜು 439‌ ರುಪಾಯಿ ಆಗಿದೆ. ಇದು ಬ್ರಿಟನ್‌ಗೆ ಹೋಲಿಸಿದರೆ ಅತ್ಯಂತ ಅಗ್ಗʼʼ ಎಂದು ಅವರು ತಿಳಿಸಿದ್ದಾರೆ. "ಇಂಗ್ಲೆಂಡ್‌ ಈ ವಿಷಯದಲ್ಲಿ ಭಾರತವನ್ನು ನೋಡಿ ಕಲಿಯಬೇಕು" ಎಂಬ ಶೀರ್ಷಿಕೆ ಬರೆದ ಅವರು ವಿಡಿಯೊ ಹಂಚಿಕೊಂಡಿದ್ದಾರೆ.

ಭಾರತದಲ್ಲಿ ಈಗ ಬ್ಲಿಂಕ್‌ಇಟ್‌ ಮತ್ತು ಸ್ವಿಗ್ಗಿ ಇನ್‌ ಸ್ಟಾಮಾರ್ಟ್‌ನಂತಹ ಆ್ಯಪ್‌ಗಳು ಕೆಲವೇ ನಿಮಿಷಗಳಲ್ಲಿ ಡೆಲಿವರಿ ನೀಡುತ್ತಿವೆ. ವಿದೇಶಗಳಲ್ಲಿ ಇಂತಹ ಸೇವೆಗಳು ಇದ್ದರೂ ಭಾರಿ ದುಬಾರಿಯಾಗುತ್ತಿದೆ.