ಶಿಮ್ಲಾ, ಜೂ. 5: ಇತ್ತೀಚೆಗೆ ಭಾರತೀಯರು ಪ್ರವಾಸಿ ಸ್ಥಳಗಳಲ್ಲಿ, ವಿದೇಶಗಳಲ್ಲಿ ನಾಗರಿಕ ಪ್ರಜ್ಞೆಯನ್ನು ಮರೆಯುತ್ತಿದ್ದಾರೆ ಎನ್ನುವ ಹಲವು ದೂರುಗಳು ಕೇಳಿ ಬರುತ್ತಲೇ ಇದೆ. ವಿದೇಶಿ ಪ್ರೇಕ್ಷಣೀಯ ಸ್ಥಳದಲ್ಲಿ ರೀಲ್ಸ್ ಮಾಡುವುದು, ಸಾಲಿನಲ್ಲಿ ನಿಲ್ಲದೆ ಅಶಿಸ್ತಿನಿಂದ ವರ್ತಿಸುವುದು ಹೀಗೆ ಅನೇಕ ಘಟನೆ (Viral News) ವರದಿಯಾಗಿವೆ. ಈ ಬಗ್ಗೆ ಟೀಕೆಗಳು ಕೂಡ ಕೇಳಿ ಬಂದಿದೆ. ಆದರೆ ಇದೀಗ ನೇರ ವಿರುದ್ಧ ರೀತಿಯ ಘಟನೆ ನಡೆದಿದೆ. ಭಾರತಕ್ಕೆ ಬಂದ ವಿದೇಶಿ ಪ್ರವಾಸಿ ರಂಪಾಟ ಮಾಡಿದ್ದಾನೆ. ಹಿಮಾಚಲ ಪ್ರದೇಶದ ಧರ್ಮಶಾಲಾಗೆ ಭೇಟಿ ನೀಡಿದ ವಿದೇಶಿ ಪ್ರವಾಸಿಗ ಸಾರ್ವಜನಿಕವಾಗಿ ಅನುಚಿತವಾಗಿ ವರ್ತಿಸಿದ್ದಾನೆ. ಈಗ ʼನಾಗರಿಕ ಪ್ರಜ್ಞೆʼ ಹೊಂದಿರುವ ವಿದೇಶಿಗರು ಎಲ್ಲಿದ್ದಾರೆ ಎಂದು ನೆಟ್ಟಿಗರು ಈ ಘಟನೆಯನ್ನು ಉಲ್ಲೇಖಿಸಿ ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ಭಾರತೀಯರು ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ ಎನ್ನುವ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಇಂತಹ ಘಟನೆಯ ವಿಡಿಯೊಗಳನ್ನು ಹೆಕ್ಕಿ ವೈರಲ್ ಮಾಡಲಾಗುತ್ತಿದೆ. ಆ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತೀಯ ಮಾನ ಹರಾಜು ಹಾಕುವ ಪ್ರಯತ್ನ ನಡೆಯುತ್ತಿದೆ. ಆದರೆ ಇದೀಗ ಭಾರತಕ್ಕೆ ಬಂದ ವಿದೇಶಿ ಪ್ರವಾಸಿ ಬೇಕಾಬಿಟ್ಟಿಯಾಗಿ ವರ್ತಿಸಿದ್ದಾನೆ. ಹಿಮಾಚಲ ಪ್ರದೇಶದ ಧರ್ಮಶಾಲಾದ ತರಕಾರಿ ಅಂಗಡಿಯೊಂದರ ಬಳಿ ನಿಂತು ರಂಪಾಟ ಮಾಡಿದ್ದಾನೆ. ವ್ಯಾಪಾರಿ ತರಕಾರಿ ತೂಗುತ್ತಿದ್ದಾಗ ಈ ವಿದೇಶಿಗ ಟೊಮೆಟೊಗಳನ್ನು ಎಸೆದು, ಕ್ಯಾಚ್ ಹಿಡಿದು ಆಟವಾಡಿದ್ದಾನೆ. ಆತ ಪದೇ ಪದೆಟೊಮೆಟೊಗಳನ್ನು ಗಾಳಿಗೆ ಎಸೆದು ಅವುಗಳನ್ನು ಹಿಡಿಯುತ್ತಿದ್ದಾನೆ. ಮತ್ತೊಂದು ತರಕಾರಿಯನ್ನು ಎಸೆಯುವಾಗ ಅದು ಕೈತಪ್ಪಿ ರಸ್ತೆಗೆ ಬಿದ್ದಿದೆ. ಅಷ್ಟೇ ಅಲ್ಲಿದ್ದ ಅಲ್ಲಿದ ಜನರನ್ನು ಕಾರಣವಿಲ್ಲದೆ ಅವ್ಯಾಚ ಶಬ್ದದಿಂದ ನಿಂದಿಸಿದ್ದಾನೆ.
ವಿಡಿಯೊ ನೋಡಿ:
ಈತ ತರಕಾರಿ ಅಂಗಡಿಯಲ್ಲಷ್ಟೇ ಅಲ್ಲದೆ, ಸಾರ್ವಜನಿಕ ವಸ್ತುಗಳಿಗೆ ಹಾನಿ ಮಾಡಿ, ಮಹಿಳಾ ಪೊಲೀಸ್ ಜತೆಗೂ ಅಸಭ್ಯವಾಗಿ ವರ್ತಿಸಿದ್ದಾನೆ. ಸದ್ಯ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆತನ ವರ್ತನೆ ಬಗ್ಗೆ ನೆಟ್ಟಿಗರು ಕಿಡಿಕಾರಿದ್ದು, ಓರ್ವ ಭಾರತೀಯ ವಿದೇಶದಲ್ಲಿ ಅನುಚಿತವಾಗಿ ವರ್ತಿಸಿದಾಗ ಇದು ದೇಶದ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ. ಆದರೆ ಭಾರತದಲ್ಲಿ ಒಬ್ಬ ವಿದೇಶಿ ಪ್ರವಾಸಿಗ ಅನುಚಿತವಾಗಿ ವರ್ತಿಸಿದಾಗ ಯಾವುದೇ ಸಮಸ್ಯೆಯಾಗುವುದಿಲ್ಲವೇ? ಎಂದು ಅನೇಕರು ಪ್ರಶ್ನಿಸಿದ್ದಾರೆ.
ಶ್ರಾದ್ಧದ ದಿನ ಭಜನೆ ಬದಲು ರಾತ್ರಿಯಿಡೀ ನಡೆದದ್ದು ಅಶ್ಲೀಲ ನೃತ್ಯ
ಒಬ್ಬರು, ʼʼಪ್ರವಾಸಿಗ ಮಾದಕ ದ್ರವ್ಯಗಳನ್ನು ಸೇವಿಸುತ್ತಿರುವಂತೆ ತೋರುತ್ತಿದೆʼʼ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬರು, ʼʼಭಾರತೀಯರಿಗೆ ಮಾತ್ರ ನಾಗರಿಕ ಪ್ರಜ್ಞೆಯ ಕೊರತೆ ಅಲ್ಲ. ವಿದೇಶಿಗರಿಗೂ ಇಲ್ಲʼʼ ಎಂದು ಕಮೆಂಟ್ ಮಾಡಿದ್ದಾರೆ.