ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪುಣೆಯ ಧಾರ್ಮಿಕ ಕಾರ್ಯಕ್ರಮದಲ್ಲಿ ಕೊಂಡ ಬೆಡ್‌ಶೀಟ್‌ನಲ್ಲಿ ಸಿಕ್ತು'ಮೇಡ್ ಇನ್ ಪಾಕಿಸ್ತಾನ್' ಟ್ಯಾಗ್; ತನಿಖೆಗೆ ಆದೇಶ

Viral News: ಸ್ಥಳೀಯ ಧಾರ್ಮಿಕ ಕಾರ್ಯಕ್ರಮದಲ್ಲಿ ಖರೀದಿಸಿದ ಬೆಡ್ ಶೀಟ್‌ನಲ್ಲಿ ಮೇಡ್ ಇನ್ ಪಾಕಿಸ್ತಾನ್ ಎಂಬ ಲೇಬಲ್ ಪತ್ತೆಯಾಗಿದೆ. ಸದ್ಯ ಈ ದೃಶ್ಯ ನೋಡಿದ ಅನೇಕರು ಆತಂಕ ವ್ಯಕ್ತ ಪಡಿಸಿದ್ದಾರೆ. ಹೀಗೆ ಲೇಬಲ್ ಮಾಡಿದ ವಸ್ತು ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಹೇಗೆ ಸಿಕ್ಕಿದೆ ಎಂಬುದು ನೆಟ್ಟಿಗರ ಪ್ರಶ್ನೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ಬೆಡ್‌ಶೀಟ್‌ನಲ್ಲಿ ಕಂಡುಬಂದ ʼಮೇಡ್ ಇನ್ ಪಾಕಿಸ್ತಾನʼ ಟ್ಯಾಗ್ ತೋರಿಸಿದ ಮಹಿಳೆ

ಮುಂಬೈ, ಜೂ. 6: ಪಾಕಿಸ್ತಾನ ಹಾಗೂ ಭಾರತಕ್ಕೆ ಆಗಾಗ ವಿವಾದಗಳು ಆಗುತ್ತಲೇ ಇರುತ್ತವೆ. ಅಲ್ಲಿನ ಜನರಿಂದ ಹಿಡಿದು ವಸ್ತುಗಳವರೆಗೆ ಭಾರತೀಯರು ದ್ವೇಷಿಸುತ್ತಾರೆ. ಇದೀಗ ಮಹಾರಾಷ್ಟ್ರದ ಪುಣೆಯ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಖರೀದಿಸಿದ ಬೆಡ್ ಶೀಟ್‌ನಲ್ಲಿ ಮೆಡ್ ಇನ್ ಪಾಕಿಸ್ತಾನ್ ಎಂಬ ಲೇಬಲ್ ಪತ್ತೆಯಾಗಿದ್ದು ಸಂಚಲನ ಮೂಡಿಸಿದೆ. ಸದ್ಯ ಈ ದೃಶ್ಯ ನೋಡಿದ ಅನೇಕರು ಆತಂಕ ವ್ಯಕ್ತಪಡಿಸಿದ್ದಾರೆ. ಹೀಗೆ ಲೇಬಲ್ ಮಾಡಿದ ವಸ್ತು ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಸಿಕ್ಕಿದ್ದು ಹೇಗೆ ಎನ್ನುವುದು ನೆಟ್ಟಿಗರ ಪ್ರಶ್ನೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗಿದೆ.

ಪುಣೆಯ ಮಹಿಳೆಯೊಬ್ಬರು ಈ ವಿಡಿಯೊ ಶೇರ್ ಮಾಡಿದ್ದಾರೆ. ಪಾಕಿಸ್ತಾನದ ವಸ್ತುಗಳ ಆಮದಿಗೆ ನಿರ್ಬಂಧ ವಿಧಿಸಲಾಗಿದೆ. ಅದರ ಹೊರತಾಗಿಯೂ ಈ ಉತ್ಪನ್ನ ಮಾರುಕಟ್ಟೆಗೆ ಹೇಗೆ ತಲುಪಿತು ಎನ್ನುವುದನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಪೂಜಾ ಸರಾಫ್ ಎನ್ನುವವರು ಸಂಕಷ್ಟಿ ಚತುರ್ಥಿಯ ಸಂದರ್ಭದಲ್ಲಿ ಪಿಂಪ್ರಿ- ಚಿಂಚ್‌ವಾಡ್‌ನ ಮೊರಾಯ ಗೋಸಾವಿ ದೇವಸ್ಥಾನದ ಬಳಿ ನಡೆದ ಜಾತ್ರೆಯ ಸಂದರ್ಭದಲ್ಲಿ ಬೆಡ್‌ಶೀಟ್ ಖರೀದಿಸಿದ್ದಾಗಿ ಹೇಳಿದ್ದಾರೆ.

ವಿಡಿಯೊ ನೋಡಿ:



ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾರಾಟಗಾರರಿಂದ ಹಲವು ಗೃಹೋಪಯೋಗಿ ವಸ್ತುಗಳನ್ನು ಖರೀದಿಸಿರುವುದಾಗಿ ವಿವರಿಸಿದ್ದಾರೆ. ಅವರ ಪ್ರಕಾರ ಬೆಡ್‌ಶೀಟ್ ತೊಳೆಯಲು ತಯಾರಿ ನಡೆಸುತ್ತಿದ್ದಾಗ ಈ ಲೇಬಲ್ ಗಮನಕ್ಕೆ ಬಂದಿದೆ.

ಸೆಲ್ಫಿಗಾಗಿ ವಿದೇಶಿ ಮಹಿಳೆ ಹಿಂದೆ ಬಿದ್ದ ಯುವಕರು

ʼʼಪ್ರತಿ ತಿಂಗಳು ಸಂಕಷ್ಟಿ ಚತುರ್ಥಿ ಇದ್ದಾಗ, ಒಂದು ಸಣ್ಣ ಜಾತ್ರೆ ಇರುತ್ತದೆ. ಆ ಜಾತ್ರೆಗೆ ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡುವ ಸಾಕಷ್ಟು ವ್ಯಾಪಾರಿಗಳು ಆಗಮಿಸುತ್ತಾರೆ. ಅಲ್ಲಿಂದ ನಾನು ಎರಡರಿಂದ ಮೂರು ವಸ್ತುಗಳನ್ನು ಖರೀದಿಸಿದೆ. ಅದರಲ್ಲಿ ಈ ಬೆಡ್‌ಶೀಟ್ ಕೂಡ ಒಂದುʼʼ ಎಂದು ಅವರು ಹೇಳಿದ್ದಾರೆ. ಯಾವುದೇ ಅಧಿಕೃತ ದೂರು ದಾಖಲಾಗಿಲ್ಲವಾದರೂ, ಪಿಂಪ್ರಿ-ಚಿಂಚ್‌ವಾಡ್ ಪೊಲೀಸರು ವೈರಲ್ ವಿಡಿಯೊವನ್ನು ಗುರುತಿಸಿ, ಸೂಕ್ತವಾಗಿ ಪರಿಶೀಲಿಸಲು ಮತ್ತು ಉತ್ಪನ್ನದ ಮೂಲವನ್ನು ಪತ್ತೆಹಚ್ಚಲು ವಿಶೇಷ ತಂಡವನ್ನು ರಚಿಸಿದ್ದಾರೆ.

ಈ ಟ್ಯಾಗ್ ಅನ್ನು ಕ್ಯಾಮರಾ ಮುಂದೆ ತೋರಿಸಿದ ಪೂಜಾ, ʼʼನಾವು ಎಲ್ಲಿ ವಾಸಿಸುತ್ತಿದ್ದೇವೆ? ನಾವು ಗಡಿಯಲ್ಲೂ ವಾಸಿಸುತ್ತಿಲ್ಲ. ಆದರೂ ಪಾಕಿಸ್ತಾನಿ ವಸ್ತು ಇಲ್ಲಿಗೆ ಬಂದಿದೆʼʼ ಎಂದು ಕಿಡಿಕಾರಿದ್ದಾರೆ. ಮೇಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾರಾಟಗಾರರನ್ನು ಪರೀಕ್ಷಿಸಲು ಮತ್ತು ಯಾವುದೇ ಉಲ್ಲಂಘನೆಗಳು ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳಲು ಪಿಂಪ್ರಿ-ಚಿಂಚ್‌ವಾಡ್ ಮುನ್ಸಿಪಲ್ ಕಾರ್ಪೊರೇಷನ್‌ಗೆ ಅಧಿಕಾರಿಗಳು ತಿಳಿಸಿದ್ದಾರೆ.