ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸ್ನೇಹಕ್ಕೆ ಧರ್ಮವಿಲ್ಲ: ಭಾರತ- ಪಾಕಿಸ್ತಾನ ವಿಭಜನೆಯ 78 ವರ್ಷದ ನಂತರ ಭೇಟಿಯಾದ ವೃದ್ಧ ಸ್ನೇಹಿತರು

Viral News: 78 ವರ್ಷಗಳ ನಂತರ ಇಬ್ಬರು ವೃದ್ಧರ ಭಾವನಾತ್ಮಕ ಭೇಟಿಯ ವಿಡಿಯೊವೊಂದು ವೈರಲ್ ಆಗಿದೆ. ಭಾರತ- ಪಾಕಿಸ್ತಾನ ವಿಭಜನೆ ಸಂದರ್ಭದಲ್ಲಿ ಬೇರ್ಪಟ್ಟಿದ್ದ ಇಬ್ಬರು ವಯೋವೃದ್ದ ಸ್ನೇಹಿತರು ಮತ್ತೆ ಒಂದಾಗಿದ್ದಾರೆ...ಯಾವುದೇ ಗಡಿ ವಿಭಜನೆಗಳಿದ್ದರೂ ಜನರ ಮನಸ್ಸಿನಲ್ಲಿದ್ದ ಪ್ರೀತಿ- ಭಾಂದವ್ಯವನ್ನು ಮರೆಯಲು ಸಾಧ್ಯವೇ ಇಲ್ಲ ಅನ್ನೋದಕ್ಕೆ ಈ ಘಟನೆ ಸಾಕ್ಷಿಯಾಗಿದೆ..

78 ವರ್ಷದ ನಂತರ ಭೇಟಿಯಾದ ಸ್ನೇಹಿತರು

ನವದೆಹಲಿ: ಧರ್ಮದ ಆಧಾರದ ಮೇಲೆ ಭಾರತ ಮತ್ತು ಪಾಕಿಸ್ತಾನ ಎಂದು ಎರಡು ಸ್ವತಂತ್ರ ರಾಷ್ಟ್ರಗಳಾಗಿ ಮಾಡಿದ್ದು ನಿಮಗೆಲ್ಲಾ ತಿಳಿದೆ ಇದೇ. ಇದು ಕೇವಲ ಭೂಮಿಯ ವಿಭಜನೆ ಮಾತ್ರವಾಗಿರಲಿಲ್ಲ. ಒಟ್ಟಾಗಿ ಕೂಡಿ ಬಾಳುತ್ತಿದ್ದು ಲಕ್ಷಾಂತರ ಹೃದಯಗಳನ್ನು ಕೂಡ ದೂರ ಮಾಡಿತ್ತು. ಇದಕ್ಕೆ ಸಾಕ್ಷಿ ಎಂಬಂತೆ 78 ವರ್ಷಗಳ ನಂತರ ಇಬ್ಬರು ವೃದ್ಧರ ಭಾವನಾತ್ಮಕ ಭೇಟಿಯ ವಿಡಿಯೊ ವೊಂದು ವೈರಲ್ (Viral News) ಆಗಿದೆ. ಭಾರತ- ಪಾಕಿಸ್ತಾನ ವಿಭಜನೆ ಸಂದರ್ಭದಲ್ಲಿ ಬೇರ್ಪಟ್ಟಿದ್ದ ಇಬ್ಬರು ವಯೋವೃದ್ದ ಸ್ನೇಹಿತರು ಮತ್ತೆ ಒಂದಾಗಿದ್ದಾರೆ.

ಯಾವುದೇ ಗಡಿ ವಿಭಜನೆಗಳಗಿದ್ದರೂ ಜನರ ಮನಸ್ಸಿನಲ್ಲಿದ್ದ ಪ್ರೀತಿ- ಭಾಂದವ್ಯವನ್ನು ಮರೆಯಲು ಸಾಧ್ಯವೇ ಇಲ್ಲ ಅನ್ನೋದಕ್ಕೆ ಈ ಘಟನೆ ಸಾಕ್ಷಿಯಾಗಿದೆ. 78 ವರ್ಷಗಳ ನಂತರವೂ ಈ ವೃದ್ಧ ಸ್ನೇಹಿತರ ಸ್ನೇಹ ಹಾಗೆಯೇ ಉಳಿದಿದ್ದು ಮಾನವೀಯತೆಯೇ ನಿಜವಾದ ಬಂಧ ಎಂದು ತೋರಿಸುತ್ತದೆ.

ವಿಡಿಯೋ ನೋಡಿ:



ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾದ ವಿಡಿಯೋ ನೆಟ್ಟಿಗರ ಕಣ್ಣಾಲಿಗಳನ್ನು ಒದ್ದೆಯಾಗಿಸಿದೆ. ಇಬ್ಬರು ವೃದ್ಧರು ಎದುರು ನಿಂತಕೊಂಡು ಬಾಲ್ಯದ ಗೆಳೆಯನನ್ನು ಗುರುತು ಹಿಡಿಯಲು ಪ್ರಯತ್ನಿಸುತ್ತಿರುವುದು ಕಾಣಿಸುತ್ತದೆ. ಪರಿಚಿತ ಮುಖಗಳನ್ನು ಗುರುತಿಸಲು ನೆನಪಿಸಿಕೊಳ್ಳುತ್ತಾ ನಿಂತಿದ್ದಾರೆ.

Viral News: ಬೆಳಗ್ಗೆ 6:30ಕ್ಕೆ ಆಫೀಸ್‌ಗೆ ಹಾಜರಾಗಬೇಕು ಎಂಬ ಆದೇಶಕ್ಕೆ ಜೆನ್‌ ಝೀ ಉದ್ಯೋಗಿಯ ಖಡಕ್ ರೆಸ್ಪಾನ್ಸ್

ಸ್ವಲ್ಪ ವಿರಾಮದ ಬಳಿಕ ಇಬ್ಬರು ಕೂಡ ಮುಂದೆ ಹೆಜ್ಜೆ ಹಾಕಿ ಪರಸ್ಪರ ಬಿಗಿಯಾಗಿ ಅಪ್ಪಿಕೊಳ್ಳುತ್ತಾರೆ. ಸುತ್ತಮುತ್ತಲಿನ ಜನರು ಮೌನವಾಗಿ ನೋಡುತ್ತಿದ್ದಾರೆ. ಒಬ್ಬ ವ್ಯಕ್ತಿ ಹಳೆಯ ನೆನಪುಗಳನ್ನು ನೆನಪಿಸಿಕೊಳ್ಳುತ್ತ ಗುರುದೇವ್ ಸಿಂಗ್ ಮತ್ತು ರಂಜಿತ್ ಸಿಂಗ್ ಅವರಂತಹ ಹೆಸರುಗಳನ್ನು ಉಲ್ಲೇಖಿಸುತ್ತಾರೆ "ನಾವೆಲ್ಲರೂ ಒಟ್ಟಿಗೆ ಓದುತ್ತಿದ್ದೆವು" ಎಂದು ಹಳೆಯ ನೆನಪುಗಳನ್ನು ಬಿಚ್ಚಿಟ್ಟಾಗ ಅಲ್ಲಿ ನೆರೆದಿದ್ದವರು ಭಾವುಕರಾಗಿದ್ದಾರೆ.

ಸುದೀರ್ಘ 8 ದಶಕಗಳ ಕಾಲ ದೂರವಿದ್ದರೂ ಇಬ್ಬರ ನಡುವಿನ ಒಡನಾಟ ಮತ್ತು ಪ್ರೀತಿ ಕಿಂಚಿತ್ತೂ ಕಡಿಮೆಯಾಗದೆ ಸ್ನೇಹ ಗಟ್ಟಿಯಾಗಿ ಉಳಿದಿತ್ತು. ಇವರ ಸ್ನೇಹಕ್ಕೆ ವೀಕ್ಷಕರು ಮೆಚ್ಚುಗೆ ನೀಡಿದ್ದಾರೆ. ಪ್ರೀತಿಯ ಸ್ನೇಹಕ್ಕೆ ಯಾವುದೇ ಧರ್ಮವಿಲ್ಲ" ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ. ಮತ್ತೊಬ್ಬರು, "ನನ್ನ ತಂದೆ ವಿಭಜನೆಯ ಸಮಯದಲ್ಲಿ ಅನೇಕ ಸ್ನೇಹಿತರನ್ನು ಕಳೆದುಕೊಂಡರು. ಅವರು ಅದರ ಬಗ್ಗೆ ಬಹಳ ದುಃಖದಿಂದ ಮಾತನಾಡುತ್ತಾರೆ ಎಂದು ಅನುಭವ ಹಂಚಿಕೊಂಡಿದ್ದಾರೆ.