ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಭೋಪಾಲ್‌ನಲ್ಲಿ ʼಕಾಂತಾರʼ ಚಿತ್ರ ವೈಭವ: ‌ಗುಳಿಗ, ಪಂಜುರ್ಲಿ ದೈವದೊಂದಿಗೆ ಗಣಪತಿ ವಿಗ್ರಹವಿಟ್ಟು ಚೌತಿ ಆಚರಣೆ

Viral News: ಈ ಬಾರಿಯ ಮಧ್ಯ ಪ್ರದೇಶದ ಗಣೇಶೋತ್ಸವದಲ್ಲಿ ʼಕಾಂತಾರ ಚಾಪ್ಟರ್-1ʼ ಕಾನ್ಸೆಪ್ಟ್‌ ಆಧಾರಿತ ಅದ್ದೂರಿ ಸೆಟಪ್ ಮಾಡಲಾಗಿದ್ದು, ಗಮನ ಸೆಳೆದಿದೆ. ʼಕಾಂತಾರʼ ಸಿನಿಮಾದ ದೈವಾರಾಧನೆಯ ಸಾಂಸ್ಕೃತಿಕ ಹಿನ್ನೆಲೆಯಿಂದ ಪ್ರೇರಿತಗೊಂಡು ವಿಶೇಷ ಪೆಂಡಲ್ ಸಿದ್ಧಪಡಿಸಲಾಗಿದೆ. ಗಣೇಶನ ವಿಗ್ರಹ ಜತೆಗೆ ಗುಳಿಗ ಮತ್ತು ಪಂಜುರ್ಲಿ ದೈವದ ವಿಗ್ರಹವನ್ನು ಕೂರಿಸಲಾಗಿದೆ.

ಭೋಪಾಲ್‌ನಲ್ಲಿ ಗುಳಿಗ ಮತ್ತು ಪಂಜುರ್ಲಿ ದೈವದೊಂದಿಗೆ ಕಂಗೊಳಿಸುತ್ತಿರುವ ಗಣಪ

ಭೋಪಾಲ್, ಸೆ.16: ಕನ್ನಡದ ʼಕಾಂತಾರʼ ಸಿನಿಮಾವು ಕೇವಲ ಕರಾವಳಿ ಅಲ್ಲದೆ ಜಾಗತಿಕ ಮಟ್ಟದಲ್ಲೂ ಹೆಸರು ಮಾಡಿದೆ. ಇದಕ್ಕೆ ಸಾಕ್ಷಿಯಾಗಿ ಈ ಬಾರಿಯ ಮಧ್ಯ ಪ್ರದೇಶದ ಗಣೇಶೋತ್ಸವದಲ್ಲಿ ʼಕಾಂತಾರ ಚಾಪ್ಟರ್-1ʼ ಕಾನ್ಸೆಪ್ಟ್‌ ಆಧಾರಿತ ಅದ್ದೂರಿ ಪೆಂಡಾಲ್‌ ಮಾಡಿಕೊಳ್ಳಲಾಗಿದೆ. ʼಕಾಂತಾರʼ ಸಿನಿಮಾದ ದೈವಾರಾಧನೆಯ ಸಾಂಸ್ಕೃತಿಕ ಹಿನ್ನೆಲೆಯಿಂದ ಪ್ರೇರಿತಗೊಂಡು ವಿಶೇಷ ಪೆಂಡಲ್ ಸಿದ್ಧಪಡಿಸಲಾಗಿದೆ. ಗಣೇಶನ ವಿಗ್ರಹ ಜತೆಗೆ ಗುಳಿಗ ಮತ್ತು ಪಂಜುರ್ಲಿ ದೈವದ ವಿಗ್ರಹವನ್ನು ರಚಿಸಲಾಗಿದೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗಿದೆ.

ಮಧ್ಯ ಪ್ರದೇಶದ ಭೋಪಾಲ್‌ನ ಇಂದ್ರಪುರಿ ಭಾಗದಲ್ಲಿಈ ಬಾರಿಯ ಗಣೇಶೋತ್ಸವವನ್ನು ಅತ್ಯಂತ ವಿಶೇಷವಾಗಿ ಆಚರಿಸಲಾಗಿದೆ. ಗಣೇಶನ ವಿಗ್ರಹ ಜತೆಗೆ ʼಕಾಂತಾರʼ ಸಿನಿಮಾದಲ್ಲಿ ತೋರಿಸಲಾದ ದೈವಾರಾಧನೆಯ ಪೆಂಡಾಲ್ ಸಿದ್ಧಪಡಿಸಲಾಗಿದೆ. ಗಣೇಶನ ಮಧ್ಯದಲ್ಲಿ ಕಂಗೊಳಿಸುತ್ತಿದ್ದರೆ ಗುಳಿಗ ಮತ್ತು ಪಂಜುರ್ಲಿ ದೈವಗಳ ವಿಗ್ರಹ ಅಕ್ಕ-ಪಕ್ಕದಲ್ಲಿ ಕಂಡು ಬಂದಿದೆ.

ವಿಡಿಯೊ ನೋಡಿ:



ಮಧ್ಯ ಭಾಗದಲ್ಲಿ ಚಿನ್ನದ ಆಭರಣಗಳು ಮತ್ತು ಸಾಂಪ್ರದಾಯಿಕ ಉಡುಪಿನಿಂದ ಅಲಂಕೃತನಾದ ಗಜಮುಖ ಗಣಪತಿಯನ್ನು ಪ್ರತಿಷ್ಠಾಪಿಸಲಾಗಿದೆ. ಗಣೇಶನ ಒಂದು ಭಾಗದಲ್ಲಿ ಉಗ್ರ ಸ್ವರೂಪದ ಅಲಂಕಾರ ಹಾಗೂ ಕೆಂಪು ಹೂವುಗಳಿಂದ ಕಂಗೊಳಿಸುತ್ತಿರುವ ಗುಳಿಗ ದೈವ ಮತ್ತು ಇನ್ನೊಂದು ಬದಿಯಲ್ಲಿ ರಾಜಸಿಕ ರೂಪದಲ್ಲಿ ಪಂಜುರ್ಲಿ ದೈವದ ವಿಗ್ರಹಗಳನ್ನು ಕೆತ್ತಲಾಗಿದೆ. ವಿಗ್ರಹಗಳ ಸುತ್ತಲಿನ ವಿನ್ಯಾಸ, ಕಂಬಗಳು ಮತ್ತು ಅಲಂಕಾರಿಕ ಅಂಶಗಳನ್ನು ಥೀಮ್‌ಗೆ ಪೂರಕವಾಗಿ ವಿನ್ಯಾಸಗೊಳಿಸಲಾಗಿದೆ,

ಸ್ಕೂಟರ್ ಸವಾರರನ್ನು ಉಳಿಸಲು ಹೋಗಿ ಬಸ್ ಪಲ್ಟಿ; 20 ಮಂದಿಗೆ ಗಾಯ

ತುಳುನಾಡಿನ ದೈವಾರಾಧನೆಯ ಸೌಂದರ್ಯವನ್ನು ಇಲ್ಲಿ ಪ್ರತಿಬಿಂಬಿಸಲಾಗಿದೆ. ದೈವಿಕ ಗಣೇಶನ ವಿಗ್ರಹಗಳ ಅದ್ಧೂರಿ ಆಗಮನ, ವಿಶೇಷ ಡಿಜೆ ಪ್ರದರ್ಶನ ಹಾಗೂ ಮಹಾಮಂಗಳಾರತಿ ಮೂಲಕ ಅದ್ದೂರಿಯಾಗಿ ಆಚರಿಸಲಾಗಿದೆ. ಒಟ್ಟಿನಲ್ಲಿ ಈ ಬಾರಿ ಗಣೇಶೋತ್ಸವದಲ್ಲಿ ಕರಾವಳಿಯ ದೈವಾರಾಧನೆಯ ಸಂಸ್ಕೃತಿಯನ್ನು ಕಣ್ತುಂಬಿಕೊಳ್ಳುವ ಅಪರೂಪದ ಅವಕಾಶ ಭೋಪಾಲ್‌ನಲ್ಲಿದೆ.