ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬೆಂಗಳೂರಿನ ಸಿಇಒಗೆ ಸಾಕ್ಷಿ ತೋರಿಸಿದ ಜೆಮಿನಿ: ರೋಡ್ ರೇಜ್ ಗಲಾಟೆಯ ಬಳಿಕ ಕ್ಷಮೆ ಕೇಳಿದ ಬೈಕ್ ಸವಾರ!

Viral News: ರೋಡ್ ರೇಜ್ ಘಟನೆಯೊಂದರಲ್ಲಿ ಎಐ ಉಪಕರಣ 'ಜೆಮಿನಿ' ನೀಡಿದ ಸಲಹೆಯಿಂದ ಬೆಂಗಳೂರು ಸಿಇಒ ವೊಬ್ಬರು ಪೊಲೀ ಸರಿಗೆ ದೂರು ನೀಡಿದ್ದಾರೆ‌. ತಮ್ಮ ಕಾರಿಗೆ ಡಿಕ್ಕಿ ಹೊಡೆದ ಬೈಕ್ ಸವಾರನ ವಿರುದ್ಧ ದೂರು ನೀಡಲು ಅವರಿಗೆ ಜೆಮಿನಿ ಸಹಾಯ ಮಾಡಿದೆ. ಸದ್ಯ ಈ ಘಟನೆಯೂ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ

ಇಂಟರ್ ನೆಟ್ ಚಿತ್ರ

ಬೆಂಗಳೂರು,ಸೆ.21: ಆಧುನಿಕ ಜಗತ್ತಿನಲಿ ತಂತ್ರಜ್ಞಾನ ಎನ್ನುವುದು ಇಂದು ಅಭಿವೃದ್ಧಿಯಾಗಿದೆ. ಅದರಲ್ಲೂ ಇಂದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅನ್ನೋದು ನಮ್ಮ ಜೀವನದಲ್ಲೂ ಸಾಮಾನ್ಯವಾಗಿ ಬಿಟ್ಟಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ರೋಡ್ ರೇಜ್ ಘಟನೆಯೊಂದರಲ್ಲಿ ಎಐ ಉಪಕರಣ 'ಜೆಮಿನಿ'  ನೀಡಿದ ಸಲಹೆಯಿಂದ ಬೆಂಗಳೂರು ಸಿಇಒ ವೊಬ್ಬರು ಪೊಲೀ ಸರಿಗೆ ದೂರು ನೀಡಿದ್ದಾರೆ‌. ತಮ್ಮ ಕಾರಿಗೆ ಡಿಕ್ಕಿ ಹೊಡೆದ ಬೈಕ್ ಸವಾರನ ವಿರುದ್ಧ ದೂರು ನೀಡಲು ಅವರಿಗೆ ಜೆಮಿನಿ ಸಹಾಯ ಮಾಡಿದೆ. ಸದ್ಯ ಈ ಘಟನೆಯೂ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗುತ್ತಿದೆ.

ಬೈಕ್ ಸವಾರನೊಬ್ಬ ತನ್ನ ಕಾರಿಗೆ ಹಾನಿ ಮಾಡಿದ ನಂತರ, ಪೊಲೀಸ್ ದೂರು ಸಿದ್ಧಪಡಿಸಲು 'ಜೆಮಿನಿ' ಟೂಲ್ ಸಹಾಯ ಮಾಡಿದೆ ಎಂದು ಬೆಂಗಳೂರಿನ ಸಿಇಒ ಒಬ್ಬರು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಜೊತೆಗೆ, ಡ್ಯಾಶ್‌ಕ್ಯಾಮ್ ದೃಶ್ಯಾವಳಿಗಳು ಪೊಲೀಸರಿಗೆ ಒದಗಿಸಲು ಕೂಡ ನೆರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



ಸಿದ್ದಾರ್ಥ್ ಡಿಯಾಲಾನಿ ಎಂಬ ಕಂಪನಿಯ ಸಿಇಒ, ಕೋರಮಂಗಲದ ಸೋನಿ ಸಿಗ್ನಲ್ ಹಾಗೂ ಈಜಿಪುರ ಸಿಗ್ನಲ್ ನಡುವೆ ಕಾರಿನಲ್ಲಿ ಪ್ರಯಾಣ ಮಾಡುವಾಗ ಈ ಘಟನೆ ನಡೆದಿದೆ. ಬೈಕ್ ಸವಾರನೊಬ್ಬ ವೇಗವಾಗಿ ಪ್ರಯಾಣಿಸಿದ್ದು ಸಿದ್ದಾರ್ಥ್ ಅವರ ಕಾರ್ ಗೆ ಬೈಕ್ ತಾಗಿದೆ ಎಂದು ಭಾವಿಸಿ ಕಾರನ್ನು ತಡೆದಿದ್ದಾನೆ. ಬಳಿಕ ಕೋಪದಿಂದ ಕಾರಿನ ಪಕ್ಕದ ಡೋರ್‌ಗೆ ಬಲವಾಗಿ ಹೊಡೆದು ನಂತರ ಹಿಂಬದಿಯಿಂದ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ.

Viral Video: ಸೂರತ್ ರೈಲ್ವೆ ನಿಲ್ದಾಣದಲ್ಲಿ ಕಳಪೆ ಆಹಾರ; ಫುಡ್ ಕೌಂಟರ್‌ನಲ್ಲಿ ಪ್ರಯಾಣಿಕರಿಗಾಗಿ ತಯಾರಿಸಿದ ಪಫ್ ತಿಂದ ಇಲಿ

ಆದರೆ, ಈ ಸಂಪೂರ್ಣ ದೃಶ್ಯ ಕಾರಿನ ಡ್ಯಾಶ್‌ಕ್ಯಾಮ್‌ನಲ್ಲಿ ರಕಾರ್ಡ್ ಆಗುತ್ತಿರುವುದು ಬೈಕ್ ಸವಾರನಿಗೆ ತಿಳಿದಿರಲಿಲ್ಲ. ಮೊದಲಿಗೆ ಈ ಘಟನೆಯನ್ನು ನಿರ್ಲಕ್ಷಿಸಲು ಸಿದ್ದಾರ್ಥ್ ಬಯಸಿದ್ದರೂ, ದೂರು ಪ್ರತಿಯನ್ನು ಸಿದ್ಧಪಡಿಸಲು 'ಜೆಮಿನಿ' ಎಐ ಬಳಸಿದ್ದಾರೆ‌. ಈ ಬಗ್ಗೆ ಬರೆದುಕೊಂಡ ಅವರು ಬೆಂಗಳೂರಿನಲ್ಲಿ ನಡೆದ ರೋಡ್ ರೇಜ್‌ಗೆ ನಾನು ಬಲಿಯಾಗಿದ್ದೆ. ಆದರೆ ಪೊಲೀಸ್ ಠಾಣೆಗೆ ಕಟ್ಟುನಿಟ್ಟಾದ ಭಾಷೆಯಲ್ಲಿ ದೂರು ಪತ್ರ ಬರೆಯಲು ಜೆಮಿನಿ ನನಗೆ ಸಲಹೆ ನೀಡಿತು.

ಪೊಲೀಸರು ಘಟನೆಗೆ ಕಾರಣನಾದ ಬೈಕ್ ಸವಾರನನ್ನು ಹುಡುಕಿ ಕರೆತಂದರು. ಆತನಿಂದ ಕ್ಷಮಾಪಣಾ ಪತ್ರ ಬರೆಸಿ, ಕಾರಿಗೆ ಆದ ನಷ್ಟವನ್ನು ಭರಿಸುವಂತೆ ಮಾಡಿದ್ದಾರೆ. ಜೆಮಿನಿ ನಿಜಕ್ಕೂ ತನಗೆ ಬಹಳಷ್ಟು ನೆರವಾಗಿದೆ ಎಂದು ಹೇಳಿದ್ದಾರೆ.