ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Viral News: ಈ ದೇಶದ ಮಹಿಳೆಯರಿಗೆ ಬಾಡಿಗೆ ಗಂಡ ಬೇಕಂತೆ! ಸರ್ಕಾರವೇ ವಿದೇಶಿ ಹುಡುಗರಿಗೆ ಆಹ್ವಾನ ನೀಡುತ್ತೆ, ಎಲ್ಲಿದೆ ಈ ಕಂಟ್ರಿ?

ಲಾಟ್ವಿಯಾ ದೇಶದಲ್ಲಿ ಗಂಭೀರ ಲಿಂಗ ಅಸಮತೋಲನ ಉಂಟಾಗಿದ್ದು, ಪುರುಷರಿಗಿಂತ ಮಹಿಳೆಯರ ಸಂಖ್ಯೆ ಹೆಚ್ಚಿರುವ ಕಾರಣ ಕೆಲ ಮಹಿಳೆಯರು ಮನೆ ಕೆಲಸಗಳಿಗೆ ತಾತ್ಕಾಲಿಕವಾಗಿ “ಗಂಡನನ್ನು ಬಾಡಿಗೆಗೆ” ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಯುರೋಸ್ಟಾಟ್ ಮಾಹಿತಿ ಪ್ರಕಾರ, ಲಾಟ್ವಿಯಾದಲ್ಲಿ ಮಹಿಳೆಯರು ಪುರುಷರಿಗಿಂತ 15.5% ಹೆಚ್ಚು ಇದ್ದು, ಇದು ಯುರೋಪಿಯನ್ ಯೂನಿಯನ್‌ನ ಸರಾಸರಿಗಿಂತ ಹೆಚ್ಚಿನದು. ವರ್ಲ್ಡ್ ಅಟ್ಲಾಸ್ ವರದಿ ಪ್ರಕಾರ, 65 ವರ್ಷ ಮೇಲ್ಪಟ್ಟ ವಯೋವರ್ಗದಲ್ಲಿ ಮಹಿಳೆಯರ ಸಂಖ್ಯೆ ಪುರುಷರಿಗಿಂತ ಸುಮಾರು ಎರಡು ಪಟ್ಟು ಹೆಚ್ಚಾಗಿದೆ.

ಸಾಂದರ್ಭಿಕ ಚಿತ್ರ

ಲಾಟ್ವಿಯಾ: ಇಲ್ಲೊಂದು ದೇಶವಿದೆ. ಇಲ್ಲಿನ ಮಹಿಳೆಯರು ಬಾಡಿಗೆಗೆ ಗಂಡನನ್ನು ನೇಮಿಸಿಕೊಳ್ಳುತ್ತಾರಂತೆ. ವಿಚಿತ್ರವಾಗಿ ಕಂಡರೂ ಇದು ಸತ್ಯ. ಲಾಟ್ವಿಯಾ (Latvia) ದೇಶದಲ್ಲಿ ಗಂಭೀರ ಲಿಂಗತ್ವ ಸಮಾನತೆ (gender imbalance) ತೀವ್ರ ಕುಸಿದಿದ್ದು, ಅನೇಕ ಮಹಿಳೆಯರು ಮನೆ ಕೆಲಸಗಳಿಗೆ ತಾತ್ಕಾಲಿಕವಾಗಿ “ಗಂಡನನ್ನು ಬಾಡಿಗೆಗೆ” ಪಡೆಯುತ್ತಿದ್ದಾರೆ ಎಂದು 'ದಿ ನ್ಯೂಯಾರ್ಕ್ ಪೋಸ್ಟ್ (The New York Post) ವರದಿ ಮಾಡಿದೆ. ಯುರೋಸ್ಟಾಟ್‌ (Eurostat) ಮಾಹಿತಿಯ ಪ್ರಕಾರ, ಲಾಟ್ವಿಯಾದಲ್ಲಿ ಪುರುಷರಿಗಿಂತ ಮಹಿಳೆಯರು 15.5% ಹೆಚ್ಚು ಇದ್ದಾರೆ. ಇದು ಯುರೋಪಿಯನ್ ಯೂನಿಯನ್‌(European Union)ನ ಸರಾಸರಿ ಲಿಂಗ ಅಂತರಕ್ಕಿಂತ 3ರಷ್ಟು ಅಧಿಕವಾಗಿದೆ.

ವರ್ಡ್ ಅಟ್ಲಾಸ್(World Atlas) ವರದಿಯ ಪ್ರಕಾರ, ಇಲ್ಲಿ 65 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯೋವರ್ಗದಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆ ಸುಮಾರು ಎರಡು ಪಟ್ಟು ಹೆಚ್ಚು ಇದೆ. ದಿ ಪೋಸ್ಟ್ (The Post) ವರದಿಯಂತೆ, ಪುರುಷರ ಕೊರತೆ ಕೆಲಸದ ಸ್ಥಳಗಳಲ್ಲಿ ಮತ್ತು ದೈನಂದಿನ ಜೀವನದಲ್ಲಿಯೂ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಮಹಿಳೆಯರು ಹೇಳುತ್ತಾರೆ. ಹಬ್ಬಗಳಲ್ಲಿ ಕೆಲಸ ಮಾಡುವ ಡೇನಿಯಾ ಎಂಬ ಮಹಿಳೆ, ತನ್ನ ಸಹೋದ್ಯೋಗಿಗಳಲ್ಲಿ ಬಹುತೇಕ ಎಲ್ಲರೂ ಮಹಿಳೆಯರೇ ಆಗಿದ್ದಾರೆ. ಅವರೊಂದಿಗೆ ಕೆಲಸ ಮಾಡುವುದೂ ನನಗೆ ಇಷ್ಟ, ಆದರೆ ಲಿಂಗತ್ವ ಸಮತೋಲನ ಇದ್ದರೆ ಸಾಮಾಜಿಕ ಸಂವಹನ ಇನ್ನಷ್ಟು ಆಸಕ್ತಿದಾಯಕವಾಗುತ್ತಿತ್ತು ಎಂದು ಹೇಳಿದ್ದಾರೆ. ದೇಶದಲ್ಲೇ ಸಂಗಾತಿಗಳು ಸಿಗುವುದು ಕಷ್ಟ ಆಗಿರುವುದರಿಂದ ಅನೇಕ ಮಹಿಳೆಯರು ವಿದೇಶಗಳಿಗೆ ತೆರಳಿ ಸಂಗಾತಿಯನ್ನು ಹುಡುಕುತ್ತಿದ್ದಾರೆ ಎಂದು ಆಕೆಯ ಸ್ನೇಹಿತೆ ಝಾನೆ ತಿಳಿಸಿದಳು.

ಅಯ್ಯೊಯ್ಯೋ ಹಸಿಯಾಗಿ ಇದೆಲ್ಲಾ ತಿಂತಾರಾ? ರೈಲಿನಲ್ಲಿ ವಿಚಿತ್ರ ಆಹಾರ ಸೇವನೆ ಮಾಡಿದ ವ್ಯಕ್ತಿ! ವಿಡಿಯೋ ನೋಡಿ

ಪುರುಷರ ಕೊರತೆಯಿಂದಾಗಿ ದೈನಂದಿನ ಮನೆ ಕೆಲಸಗಳನ್ನು ನಿಭಾಯಿಸಲು, ಅನೇಕ ಲಾಟ್ವಿಯನ್ ಮಹಿಳೆಯರು ಕೈಗಾರಿಕಾ ಕೆಲಸಗಾರರನ್ನು (ಹ್ಯಾಂಡಿಮೆನ್) ಬಾಡಿಗೆಗೆ ನೀಡುವ ಸೇವೆಗಳತ್ತ ಮುಖ ಮಾಡುತ್ತಿದ್ದಾರೆ. Komanda24 ಎಂಬ ವೇದಿಕೆ “ಗೋಲ್ಡನ್ ಹ್ಯಾಂಡ್ಸ್ ಇರುವ ಪುರುಷರು” ಎಂಬ ಸೇವೆಯನ್ನು ನೀಡುತ್ತಿದ್ದು, ಪ್ಲಂಬಿಂಗ್, ಮರಕೆಲಸ, ರಿಪೇರಿ, ಟಿವಿ ಇನ್‌ಸ್ಟಾಲೇಷನ್ ಮುಂತಾದ ಕೆಲಸಗಳಲ್ಲಿ ಸಹಾಯ ಮಾಡುತ್ತಾರೆ. ಮತ್ತೊಂದು ಸೇವೆಯಾದ Remontdarbi.lv ನಲ್ಲಿ ಮಹಿಳೆಯರು “ಒಂದು ಗಂಟೆಗೆ ಗಂಡ” ಎಂಬ ಸೇವೆಯನ್ನು ಆನ್‌ಲೈನ್ ಅಥವಾ ಫೋನ್ ಮೂಲಕ ಬುಕ್ ಮಾಡಬಹುದು. ಈ ಕಾರ್ಮಿಕರು ತ್ವರಿತವಾಗಿ ಬಂದು ಬಣ್ಣ ಹಚ್ಚುವುದು, ಪರದೆ ಸರಿಪಡಿಸುವುದು, ಇನ್ನಿತರೆ ಕೆಲಸಗಳನ್ನು ಮಾಡುತ್ತಾರೆ.

ತಜ್ಞರ ಪ್ರಕಾರ, ಪುರುಷರ ಆಯಸ್ಸಿ ಕಡಿಮೆ ಆಗಿರುವುದೇ ಲಾಟ್ವಿಯಾದಲ್ಲಿನ ಲಿಂಗತ್ವ ಅಸಮತೋಲನಕ್ಕೆ ಪ್ರಮುಖ ಕಾರಣ. ಇದಕ್ಕೆ ಹೆಚ್ಚು ಧೂಮಪಾನ ಮತ್ತು ಜೀವನಶೈಲಿ ಸಂಬಂಧಿತ ಆರೋಗ್ಯ ಸಮಸ್ಯೆಗಳು ಕಾರಣವಾಗಿವೆ. ವರ್ಡ್ ಅಟ್ಲಾಸ್ ಮಾಹಿತಿ ಪ್ರಕಾರ, ಲಾಟ್ವಿಯಾದ ಪುರುಷರಲ್ಲಿ 31% ಜನ ಧೂಮಪಾನ ಮಾಡುತ್ತಾರೆ, ಮಹಿಳೆಯರಲ್ಲಿ ಇದು ಕೇವಲ 10% ಮಾತ್ರ. ಅಲ್ಲದೆ, ಅಧಿಕ ತೂಕ ಅಥವಾ ಸ್ಥೂಲಕಾಯ ಸಮಸ್ಯೆಗಳೂ ಪುರುಷರಲ್ಲಿ ಹೆಚ್ಚು ಕಂಡುಬರುತ್ತವೆ.

ಗಂಡನನ್ನು ಬಾಡಿಗೆಗೆ ಪಡೆಯುವ ಪ್ರವೃತ್ತಿ ಲಾಟ್ವಿಯಾದಲ್ಲಷ್ಟೇ ಸೀಮಿತವಾಗಿಲ್ಲ. ಯುಕೆಯಲ್ಲಿ, 2022ರಲ್ಲಿ ಲೌರಾ ಯಂಗ್ ತಮ್ಮ ಗಂಡ ಜೇಮ್ಸ್‌ನನ್ನು ಸಣ್ಣ-ಪುಟ್ಟ ಕೆಲಸಗಳಿಗೆ ಬಾಡಿಗೆಗೆ ನೀಡುವ “Rent My Handy Husband” ಎಂಬ ಬಿಸಿನೆಸ್ ಆರಂಭಿಸಿ ಗಮನ ಸೆಳೆದಿದ್ದರು. ಜೇಮ್ಸ್ ಗಂಟೆ ಅಥವಾ ದಿನದ ಆಧಾರದ ಮೇಲೆ ಶುಲ್ಕ ಪಡೆದು ವಿವಿಧ ಮನೆ ಕೆಲಸಗಳನ್ನು ಮಾಡುತ್ತಿದ್ದು, ಇಂದಿಗೂ ಅವರ ಸೇವೆಗೆ ಭಾರೀ ಬೇಡಿಕೆ ಇದೆ.