Viral Video: ಬಾಲಕಿಗೆ ಕರೆಂಟ್ ಶಾಕ್! ಪ್ರಾಣವನ್ನೇ ಪಣಕ್ಕಿಟ್ಟು ಕಾಪಾಡಿದ ಮಾವ- ಇಲ್ಲಿದೆ ವಿಡಿಯೊ
electrocution in Uttar Pradesh: ವಿದ್ಯುತ್ ಶಾಕ್ ಹೊಡೆದಿರುವ ಬಾಲಕಿಯನ್ನು ಆಕೆಯ ಮಾವ ರಕ್ಷಿಸಿರುವ ಘಟನೆ ಉತ್ತರ ಪ್ರದೇಶದ ಶಾಮ್ಲಿಯ ರೈಲ್‌ಪಾರ್ ಪ್ರದೇಶದಲ್ಲಿ ನಡೆದಿದೆ. ಆಘಾತಕಾರಿ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೊ ವೈರಲ್ ಆಗಿದೆ.


ಲಖನೌ: ವಿದ್ಯುತ್ ಶಾಕ್ ಹೊಡೆದ ಬಾಲಕಿಯನ್ನು ಆಕೆಯ ಮಾವ ಪ್ರಾಣ ಪಣಕ್ಕಿಟ್ಟು ರಕ್ಷಿಸಿರುವ ಘಟನೆ ನಡೆದಿದೆ. ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದ್ದು, ವಿಡಿಯೊ ವೈರಲ್(Viral Video) ಆಗಿದೆ. ಉತ್ತರ ಪ್ರದೇಶದ ಶಾಮ್ಲಿಯ ರೈಲ್‌ಪಾರ್ ಪ್ರದೇಶದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಆ ವ್ಯಕ್ತಿಯ ಸಮಯಪ್ರಜ್ಞೆಯಿಂ ಜೀವವೊಂದು ಉಳಿದಿದೆ. ಕ್ಯಾಮರಾದಲ್ಲಿ ಸೆರೆಹಿಡಿಯಲಾದ ಈ ಘಟನೆಯ ದೃಶ್ಯ ವೈರಲ್ ಆಗಿದ್ದು, ಲೈವ್ ಕರೆಂಟ್ ಹರಿಯುತ್ತಿದ್ದ ಐಜಿಎಲ್ ಗ್ಯಾಸ್ ಪೈಪ್‌ಲೈನ್ ಸಂಪರ್ಕಕ್ಕೆ ಬಂದ ನಂತರ ಬಾಲಕಿ ವಿದ್ಯುತ್ ಆಘಾತಕ್ಕೊಳಗಾಗುತ್ತಿದ್ದಾಳೆ ಎಂಬುದನ್ನು ತೋರಿಸಿದೆ.
ವಿಡಿಯೊದಲ್ಲಿ, ಬಾಲಕಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆಕಸ್ಮಿಕವಾಗಿ ಪೈಪ್‌ಲೈನ್ ಅನ್ನು ಮುಟ್ಟಿದ್ದಾಳೆ. ಅವಳನ್ನು ಬಿಡಿಸಲು ಆಕೆಯ ತಾಯಿ ಹತಾಶ ಪ್ರಯತ್ನದಲ್ಲಿ ಅವಳನ್ನು ದೂರ ಎಳೆಯಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅವಳೂ ವಿದ್ಯುತ್ ಆಘಾತಕ್ಕೊಳಗಾದಳು. ಈ ವೇಳೆ ಸಮಯಕ್ಕೆ ಸರಿಯಾಗಿ, ಹುಡುಗಿಯ ಮಾವ ಸ್ಥಳಕ್ಕೆ ಆಗಮಿಸಿ, ತನ್ನ ಪ್ರಾಣವನ್ನೇ ಪಣಕ್ಕಿಟ್ಟು, ತನ್ನ ಸೊಸೆಯನ್ನು ಹಿಡಿದು, ಪೈಪ್‌ಲೈನ್‌ನಿಂದ ದೂರ ಎಳೆದಿದ್ದಾರೆ. ಈ ಮೂಲಕ ಸಂಭಾವ್ಯ ಸಾವಿನಿಂದ ಬಾಲಕಿಯನ್ನು ರಕ್ಷಿಸಿದರು.
ವಿಡಿಯೊ ಇಲ್ಲಿದೆ:
A heart-wrenching accident was averted in the Railpaar locality of Shamli in Uttar Pradesh. An innocent girl walking on the road came in contact with the current flowing in the IGL gas pipeline and got stuck to the wall and suffered the current for about 16 seconds. While trying… pic.twitter.com/E1Rm1LU9YE
— Matrize News Communications Pvt. Ltd (@Matrize_NC) July 24, 2025
ಅದೃಷ್ಟವಶಾತ್, ಬಾಲಕಿ ಪ್ರಸ್ತುತ ಅಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಳೆ. ಐಜಿಎಲ್ ವ್ಯವಸ್ಥಾಪಕರು ಕರೆಂಟ್ ಪೈಪ್‌ಲೈನ್‌ನಿಂದ ಅಲ್ಲ, ಮನೆಯಲ್ಲಿನ ದೋಷಪೂರಿತ ವೈರಿಂಗ್‌ನಿಂದ ಈ ಸಮಸ್ಯೆಯಾಗಿದೆ ಎಂದು ಹೇಳಿದ್ದು, ಇದೀಗ ಲೈನ್ ಸಂಪರ್ಕ ಕಡಿತಗೊಳಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Viral Video: ಇಸ್ಕಾನ್‌ನೊಳಗೆ ಚಿಕನ್ ತಿಂದ ಕಿಡಿಗೇಡಿ- ಭಕ್ತರ ರಿವೇಂಜ್ ಹೇಗಿತ್ತು ಗೊತ್ತಾ? ವಿಡಿಯೊ ಫುಲ್ ವೈರಲ್
ವಿಡಿಯೊದಲ್ಲಿ ಬಾಲಕಿ ಪೈಪ್‌ಲೈನ್‌ಗೆ ಸಿಲುಕಿಕೊಂಡಿರುವುದನ್ನು, ಆಕೆಯ ತಾಯಿ ಆಕೆಯನ್ನು ಎಳೆದುಕೊಂಡು ಹೋಗಲು ಪ್ರಯತ್ನಿಸುತ್ತಿರುವುದನ್ನು ನೋಡಬಹುದು. ಈ ವೇಳೆ ಬಾಲಕಿಯ ಮಾವ ಸಹಾಯಕ್ಕೆ ಧಾವಿಸಿದ್ದು ಆಕೆಯನ್ನು ಕಾಪಾಡಿದ್ದಾರೆ. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಆಘಾತಕಾರಿ ಅಲೆಗಳನ್ನು ಸೃಷ್ಟಿಸಿದ್ದು, ಅನೇಕರು ಅವರ ಧೈರ್ಯ ಮತ್ತು ತ್ವರಿತ ಚಿಂತನೆಯನ್ನು ಶ್ಲಾಘಿಸಿದ್ದಾರೆ.