ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಬಸ್‌ನಲ್ಲೇ ವಾಸ, ದೇಶಾದ್ಯಂತ ಸುತ್ತಾಟ.. ಸಾಕ್ಷರತೆ ಉತ್ತೇಜಿಸಲು ಮಹಿಳೆಯ ಹೋರಾಟ

ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಈಗ ಆಸ್ತಿ ಬೆಲೆ (Property rate) ಗಗನಕ್ಕೇರಿದೆ. ಹೀಗಾಗಿ ಹೆಚ್ಚಿನವರಿಗೆ ಮನೆ ಖರೀದಿ (Buying a house) ಒಂದು ಕನಸಾಗಿದೆ. ಹೆಚ್ಚಿನವರು ಈಗ ಬಜೆಟ್ ಫ್ರೆಂಡ್ಲಿ ಮನೆಗಳಿಗೆ ಮೊರೆ ಹೋಗುತ್ತಿದ್ದಾರೆ. ಯುಕೆಯ ಮಹಿಳೆಯೊಬ್ಬರು ಸೆಕೆಂಡ್ ಹ್ಯಾಂಡ್ ಡಬಲ್ ಡೆಕ್ಕರ್ ಬಸ್ (Double-Decker Bus) ಖರೀದಿಸಿ ಅದನ್ನು ತಮ್ಮ ಕನಸಿನ ಮನೆಯಾಗಿ (Dream House) ಮಾಡಿಕೊಂಡಿದ್ದಾರೆ.

ಡಬಲ್ ಡೆಕ್ಕರ್ ಬಸ್ ಅನ್ನು ಮನೆಯಾಗಿ ಮಾಡಿದ ಯುಕೆ ಮಹಿಳೆ

ಲಂಡನ್: ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಈಗ ಆಸ್ತಿ ಬೆಲೆ (Property rate) ಗಗನಕ್ಕೇರಿದೆ. ಹೀಗಾಗಿ ಹೆಚ್ಚಿನವರಿಗೆ ಮನೆ ಖರೀದಿ (Buying a house) ಒಂದು ಕನಸಾಗಿದೆ. ಹೆಚ್ಚಿನವರು ಈಗ ಬಜೆಟ್ ಫ್ರೆಂಡ್ಲಿ ಮನೆಗಳಿಗೆ ಮೊರೆ ಹೋಗುತ್ತಿದ್ದಾರೆ. ಯುಕೆಯ ಮಹಿಳೆಯೊಬ್ಬರು ಸೆಕೆಂಡ್ ಹ್ಯಾಂಡ್ ಡಬಲ್ ಡೆಕ್ಕರ್ ಬಸ್ (Double-Decker Bus) ಖರೀದಿಸಿ ಅದನ್ನು ತಮ್ಮ ಕನಸಿನ ಮನೆಯಾಗಿ (Dream House) ಮಾಡಿಕೊಂಡಿದ್ದಾರೆ. ಆ ಮನೆಯಲ್ಲೇ ವಾಸವಾಗಿರುವ ಅವರು ಈಗ ಅದರಲ್ಲೇ ತಮ್ಮ ದೇಶವನ್ನೂ ಸುತ್ತುತ್ತಿದ್ದಾರೆ. ಯುಕೆಯ 38 ವರ್ಷದ ಲಿಂಡ್ಜಿ ಕೇವಲ 21 ಲಕ್ಷ ರೂ. ಗೆ ಸೆಕೆಂಡ್ ಹ್ಯಾಂಡ್ ಡಬಲ್ ಡೆಕ್ಕರ್ ಬಸ್ ಖರೀದಿಸಿ ಅದನ್ನು ತಮ್ಮ ಮನೆಯಾಗಿ ಪರಿವರ್ತಿಸಿಕೊಂಡಿದ್ದಾರೆ.

ಯುಕೆಯಲ್ಲಿ ಮನೆಯೊಂದರ ಸರಾಸರಿ ಮನೆ ಬೆಲೆ 3 ಕೋಟಿ ರೂ. ತಲುಪಿದ್ದು, ಇದರಿಂದ ಅನೇಕರಿಗೆ ಮನೆ ಹೊಂದುವುದು ಕನಸಾಗಿದೆ. ಹೀಗಾಗಿ ಕೆಲವರು ಬೇರೆಬೇರೆ ರೀತಿಯ ಆಯ್ಕೆಗಳನ್ನು ನೋಡುತ್ತಿದ್ದಾರೆ.

bus1

ಲಿಂಡ್ಜಿ ಅವರು ಮನೆ ಖರೀದಿಸುವ ಬದಲು ಕೇವಲ 21 ಲಕ್ಷ ರೂ. ಗೆ ಸೆಕೆಂಡ್ ಹ್ಯಾಂಡ್ ಡಬಲ್ ಡೆಕ್ಕರ್ ಬಸ್ ಖರೀದಿಸಿ ಅದನ್ನೇ ತಮ್ಮ ಕನಸಿನ ಮನೆಯಾಗಿ ಮಾಡಿಕೊಂಡಿದ್ದಾರೆ. ಇದೀಗ ಅವರು ಈ ವಿಶಿಷ್ಟವಾದ ಚಲಿಸುವ ಮನೆಯಲ್ಲಿ ವಾಸಿಸುತ್ತಿದ್ದಾರೆ ಜೊತೆಗೆ ಇದೇ ಬಸ್ ನಲ್ಲಿ ಅವರು ಯುಕೆಯಾದ್ಯಂತ ಪ್ರಯಾಣಿಸುತ್ತಾರೆ.

ಅವರಿಗೆ ಬಾಲ್ಯದಲ್ಲಿ ಬಸ್ ಚಾಲಕಿಯಾಗಬೇಕು ಎನ್ನುವ ಕನಸಿತ್ತು. ಆದರೆ ಒಂದು ದಿನ ಅವರು ಬಸ್ ಖರೀದಿ ಮಾಡಿ ಅದರಲ್ಲೇ ವಾಸ ಮಾಡುತ್ತಾರೆ ಎನ್ನುವ ಊಹೆಯನ್ನೂ ಕೂಡ ಅವರು ಮಾಡಿರಲಿಲ್ಲವಂತೆ. ಈ ಕುರಿತು ಸಾಮಾಜಿಕ ಮಾಧ್ಯಮವಾದ ಇನ್ ಸ್ಟಾಗ್ರಾಮ್ ನಲ್ಲಿ ತಮ್ಮ ಕಥೆಯನ್ನು ಹೇಳಿಕೊಂಡಿರುವ ಅವರು, ಮನೆ ಮಾರಾಟ ಮಾಡಿ ಬಂದ ಹಣದಿಂದ ನಾನು ಡಬಲ್ ಡೆಕ್ಕರ್ ಬಸ್ ಖರೀದಿಸಲು ನಿರ್ಧರಿಸಿದೆ. ಬಸ್‌ನಲ್ಲಿ ವಾಸಿಸಬೇಕು ಎನ್ನುವ ಹುಚ್ಚು ಕಲ್ಪನೆ ಯಾವಾಗಲೂ ನನ್ನ ಮನದಲ್ಲಿ ಇತ್ತು ಎಂದು ಅವರು ತಿಳಿಸಿದ್ದಾರೆ.

ಈ ಬಸ್ ನವೀಕರಣಕ್ಕೆ ನನ್ನಲ್ಲಿದ್ದ ಎಲ್ಲವನ್ನೂ ಕೊಟ್ಟೆ. ಇದು ನನ್ನ ರಕ್ತ, ಬೆವರು ಮತ್ತು ಕಣ್ಣೀರಿನಿಂದ ತುಂಬಿದೆ ಎಂದು ಅವರು ಹೇಳಿದರು.

ಬಸ್‌ನಲ್ಲಿ ಸುಮಾರು ಒಂದು ವರ್ಷ ಕೆಲಸ ಮಾಡಿರುವ ಲಿಂಡ್ಜಿ ಇದಕ್ಕಾಗಿ 50 ಲಕ್ಷ ರೂ. ಗೂ ಹೆಚ್ಚು ಹೂಡಿಕೆ ಮಾಡಿದ್ದರು. ಅವರ ಬಸ್ ನಲ್ಲಿ ಸೌರ ಫಲಕಗಳು, ಕಾರ್ಯನಿರ್ವಹಿಸುವ ಒಲೆ ಮತ್ತು ಮನೆಯ ಒಳಾಂಗಣಗಳಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಮೇಲಿನ ಡೆಕ್ ಅವರ ವೈಯಕ್ತಿಕ ವಾಸಸ್ಥಳವಾಗಿದ್ದು, ಕೆಳಗಿನ ಹಂತದಲ್ಲಿ ಜನರೊಂದಿಗೆ ಬೆರೆಯಲು, ಉಚಿತ ಪುಸ್ತಕ ವಿನಿಮಯ ಗ್ರಂಥಾಲಯವಾಗಿ ಮಾರ್ಪಡಿಸಿದ್ದಾರೆ. ಗ್ರಂಥಾಲಯಗಳು ಇಲ್ಲದ ಸ್ಥಳಗಳಲ್ಲಿ ಸಾಕ್ಷರತೆಯನ್ನು ಉತ್ತೇಜಿಸಲು ಬಯಸುವುದಾಗಿ ಹೇಳಿರುವ ಅವರು ಇದು ತಾನು ಜನರನ್ನು ಸಂಪರ್ಕಿಸುವ ಮಾರ್ಗ ಎಂದು ಹೇಳಿದ್ದಾರೆ.

bus2

2025ರ ಮೇ ತಿಂಗಳಲ್ಲಿ ಸಾರಿಗೆ ಸಚಿವಾಲಯದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಲಿಂಡ್ಜಿ ರಸ್ತೆಯಲ್ಲಿ ಬಸ್‌ನಲ್ಲಿ ಪ್ರಯಾಣಿಸುವ ಅವಕಾಶ ಪಡೆದಿದ್ದರೆ. ಅವರು ಡಬಲ್ ಡೆಕ್ಕರ್, ಸಿಂಗಲ್ ಡೆಕ್ಕರ್ ಮತ್ತು ಬೆಂಡಿ ಬಸ್‌ಗಳಂತಹ ದೊಡ್ಡ ವಾಹನಗಳನ್ನು ಚಲಾಯಿಸುವ ಪರವಣಿಗೆಯನ್ನೂ ಕೂಡ ಪಡೆದಿದ್ದಾರೆ.

ಇದನ್ನೂ ಓದಿ: Viral Video: ಭಾರಿ ಮಳೆಗೆ ಕೊಚ್ಚಿ ಹೋದ ರಸ್ತೆ; ಮಾನವ ಸೇತುವೆ ನಿರ್ಮಿಸಿ 35 ಮಕ್ಕಳ‌ ರಕ್ಷಣೆ!

bus3

ಅವರು ತಮ್ಮ ಬಸ್ ನಲ್ಲಿ ಮೊದಲ ಬಾರಿಗೆ ಜೂನ್ 21ರಂದು ಪ್ರವಾಸ ಮಾಡಿದ್ದರು. ಈ ನಡುವೆ ಅವರಿಗೆ ಎದುರಾಗಿರುವ ಬಹುದೊಡ್ಡ ಸವಾಲು ಎಂದರೆ ಇಂಧನ ವೆಚ್ಚ. ಸುಮಾರು 150 ಮೈಲುಗಳ ಪ್ರಯಾಣಕ್ಕೆ ಅವರಿಗೆ 10,700 ರೂ. ವೆಚ್ಚವಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇವರ ಕಥೆ ವೈರಲ್ ಆಗಿದ್ದು, ಸಾಕಷ್ಟು ಮೆಚ್ಚುಗೆಗಳು ವ್ಯಕ್ತವಾಗಿವೆ.