ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಮುದ್ರ ಮಧ್ಯದಲ್ಲಿ ಸಿಲುಕಿದ್ದ ಫಾರ್ಚೂನರ್ ಕಾರಿನ ಪ್ರಕರಣಕ್ಕೆ ಟ್ವಿಸ್ಟ್‌; ಮಾಲೀಕನಿಗೆ ತಿಳಿಸದೆ ಹೊಟೆಲ್‌ ಸಿಬ್ಬಂದಿ ಮಾಡಿದ್ದೇನು?

Viral Video: ಟೊಯೋಟಾ ಫಾರ್ಚೂನರ್ ವ್ಯಾಗೇಟರ್ ಕಾರೊಂದು ಬೀಚ್‌ನಲ್ಲಿ ಅಲೆಗಳ ನಡುವೆ ಸಿಲುಕಿಕೊಂಡಿದ್ದ ವಿಡಿಯೊವೊಂದು ಭಾರೀ ವೈರಲ್ ಆಗಿತ್ತು. ಗುಜರಾತ್ ನೋಂದಣಿಯ ಕಾರು ಇದಾಗಿದ್ದು ಅಲೆಗಳ ಹೊಡೆತಕ್ಕೆ ಸಿಲುಕಿಕೊಂಡಿತ್ತು., ನಂತರ ಜೆಸಿಬಿ (JCB) ಸಹಾಯದಿಂದ ಹೊರ ತೆಗೆಯಲಾಗಿತ್ತು. ಇದೀಗ ಈ ಪ್ರಕರಣಕ್ಕೆ ಒಂದು ಪ್ರಮುಖ 'ಟ್ವಿಸ್ಟ್' ವೊಂದು ಸಿಕ್ಕಿದೆ.

ಗೋವಾ ಬೀಚ್ ನಲ್ಲಿ ಕೊಚ್ಚಿ ಹೋದ ಫಾರ್ಚೂನರ್ ಕಾರು

ಗೋವಾ,ಮಾ.25: ಐಷಾರಾಮಿ ಟೊಯೋಟಾ ಫಾರ್ಚೂನರ್ ವ್ಯಾಗೇಟರ್ ಕಾರೊಂದು ಬೀಚ್‌ ನಲ್ಲಿ ಅಲೆಗಳ ನಡುವೆ ಸಿಲುಕಿಕೊಂಡಿದ್ದ ವಿಡಿಯೊವೊಂದು ಭಾರೀ ವೈರಲ್ (Viral Video) ಆಗಿತ್ತು. ಗುಜರಾತ್ ನೋಂದಣಿಯ ಕಾರು ಇದಾಗಿದ್ದು ಅಲೆಗಳ ಹೊಡೆತಕ್ಕೆ ಸಿಲುಕಿಕೊಂಡಿತ್ತು., ನಂತರ ಜೆಸಿಬಿ (JCB) ಸಹಾಯದಿಂದ ಹೊರೆತೆಗೆಯಲಾಗಿತ್ತು. ಇದೀಗ ಈ ಪ್ರಕರಣಕ್ಕೆ ಒಂದು ಪ್ರಮುಖ 'ಟ್ವಿಸ್ಟ್'ವೊಂದು ಸಿಕ್ಕಿದೆ.

ಗುಜರಾತ್ ಮೂಲದ ವ್ಯಕ್ತಿಯೊಬ್ಬರು ತಮ್ಮ ಫಾರ್ಚೂನರ್ ಕಾರನ್ನು ಬೀಚ್ ಪ್ರದೇಶಕ್ಕೆ ತೊಳೆಯಲು ತೆಗೆದುಕೊಂಡು ಹೋಗಿದ್ದರು. ಆದರೆ ತೀವ್ರ ಅಲೆಯಿಂದಾಗಿ ಮಧ್ಯದಲ್ಲೇ ಸಿಲುಕಿಕೊಂಡಿತ್ತು ಎಂದು ಸುದ್ದಿಯಾಗಿತ್ತು. ಇದೀಗ ಈ ಘಟನೆಯ ಬಗ್ಗೆ ಹೋಟೆಲ್ ಸಿಬ್ಬಂದಿಯೊಬ್ಬರು ಹೇಳಿಕೆಯನ್ನು ನೀಡಿದ್ದಾರೆ.

ವಿಡಿಯೋ ನೋಡಿ:



ಕಾರೀನ ಮಾಲೀಕರೊಬ್ಬರು ಕಾರನ್ನು ಕ್ಲೀನ್ ಮಾಡಲು ಕೀ ನೀಡಿದ್ದರು. ಆದರೆ ತಾನು ಅವರ ಅನುಮತಿ ಪಡೆಯದೆ ಕಾರನ್ನು ತೊಳೆಯಲು ಸಮುದ್ರದ ದಡಕ್ಕೆ ಹೋಗಿದ್ದೆ‌. ಗುಜರಾತ್‌ನ ಕಾರು ಮಾಲೀಕರಿಗೆ ಈ ವಿಚಾರ ತಿಳಿದೇ ಇರಲಿಲ್ಲ. ದಯವಿಟ್ಟು ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಬೇಡಿ ತಪ್ಪು ಮಾಡಿದ್ದು ತಾನೇ ಎಂದು ಹೇಳಿದ್ದಾರೆ.

Viral Video: ಬೆರಳಿನ ತುದಿಯಲ್ಲೇ ಉರಿದ ಗ್ಯಾಸ್ ಸ್ಟೌವ್: ಇದು ಪವಾಡವಲ್ಲ ವಿಜ್ಞಾನ! ಹೇಗೆ ಗೊತ್ತಾ?

ಎಸ್‌ಯುವಿ ಮಾಲೀಕ ಅರ್ಜುನ್ ಸಿಂಗ್ ರಾವತ್ ಎಂದು ಗುರುತಿಸಲ್ಪಟ್ಟ ಅವರು, ಕಾರನ್ನು ಸ್ವಚ್ಛಗೊಳಿಸಲು ಹೋಟೆಲ್ ಸಿಬ್ಬಂದಿಗೆ ಕೀಲಿಗಳನ್ನು ಹಸ್ತಾಂತರಿಸಿರುವುದಾಗಿ ಈ ಹಿಂದೆ ಹೇಳಿದ್ದರು. ಸಿಬ್ಬಂದಿ ತಾನೇ ತಪ್ಪು ಮಾಡಿದ್ದೇನೆ ಎಂದು ಹೇಳುತ್ತಿದ್ದರೂ ಜನರು ನಂಬಿಲ್ಲ. ಮಾಲೀಕರು ಜೈಲು ಶಿಕ್ಷೆಯಿಂದ ಹಾಗೂ ದಂಡದಿಂದ ತಪ್ಪಿಸಿಕೊಳ್ಳಲು ಹೋಟೆಲ್ ಸಿಬ್ಬಂದಿಯ ಮೇಲೆ ಹಾಕಿರಬಹುದು ಎಂದು ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಫಾರ್ಚೂನರ್ ಸಮುದ್ರದ ನೀರಿನಲ್ಲಿ ಭಾಗಶಃ ಮುಳುಗಿರುವುದನ್ನು ಮತ್ತು ನೀರು ಒಳಗೆ ನುಗ್ಗುತ್ತಿದ್ದಂತೆ ಅಲ್ಲಿದ್ದ ಜನರು ಅದರ ಬಾಗಿಲುಗಳನ್ನು ತೆರೆಯುತ್ತಿರುವ ದೃಶ್ಯಗಳು ವೈರಲ್ ಆಗಿತ್ತು. ಸದ್ಯ ಸಿಬ್ಬಂದಿಯ ತಪ್ಪೊಪ್ಪಿಗೆಯ ಹೊರತಾಗಿಯೂ, ಕಾನೂನು ಕ್ರಮ ಕೈಗೊಳ್ಳ ಲಾಗುತ್ತಿದೆ. ಪೊಲೀಸರು ವಾಹನವನ್ನು ವಶಪಡಿಸಿಕೊಂಡಿದ್ದು ಭಾರತೀಯ ನ್ಯಾಯ ಸಂಹಿತಾ ನಿಬಂಧನೆಗಳ ಅಡಿಯಲ್ಲಿ ನಿರ್ಲಕ್ಷ್ಯದ ನಡವಳಿಕೆ ಮತ್ತು ಬೀಚ್ ಚಾಲನಾ ಮಾನದಂಡಗಳ ಉಲ್ಲಂಘನೆಗಾಗಿ ಪ್ರಕರಣ ದಾಖಲಿದ್ದಾರೆ.