ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

84ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ವಿಮಾನ ಪ್ರಯಾಣ: ಅಜ್ಜಿಯ ಆಸೆ ಈಡೇರಿಸಿದ ಮೊಮ್ಮಗ: ಹೃದಯಸ್ಪರ್ಶಿ ಕ್ಷಣ ಇಲ್ಲಿದೆ

Viral Video: ವೃದ್ಧೆಯೊಬ್ಬರು ಮೊದಲ ಬಾರಿ ವಿಮಾನ ಪ್ರಯಾಣ ಮಾಡಿದ ಹೃದಯಸ್ಪರ್ಶಿ ವಿಡಿಯೊ ಎಲ್ಲರ ಹೃದಯ ಗೆದ್ದಿದೆ. 84ನೇ ವಯಸ್ಸಿನಲ್ಲಿ ಅಜ್ಜಿಯ ಮೊದಲ ಬಾರಿಗೆ ವಿಮಾನ ಪ್ರಯಾಣದ ಅನುಭವ ಪಡೆದಿದ್ದು, ಅಜ್ಜಿಯ ಆಸೆಯನ್ನು ಈಡೇರಿಸಲು ಮೊಮ್ಮಗ ಸಾಥ್ ನೀಡಿದ್ದಾನೆ. ಸದ್ಯ ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಅಜ್ಜಿಯ ವಿಮಾನ ಪ್ರಯಾಣದ ಆಸೆ ಈಡೇರಿಸಿದ ಮೊಮ್ಮಗ

ನವದೆಹಲಿ, ಮೇ 17: ವಯಸ್ಸು ಅನ್ನೋದು ಕೇವಲ ನಂಬರ್ ಅಷ್ಟೇ. ಶ್ರಮ ಪಟ್ಟರೆ, ಮನಸ್ಸು ಮಾಡಿದರೆ ತಮ್ಮ ಕನಸನ್ನು ಕೂಡ ಈಡೇರಿಸಿಕೊಳ್ಳಬಹುದು ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. 84 ವರ್ಷದ ವೃದ್ಧೆಯೊಬ್ಬರು ಮೊದಲ ವಿಮಾನ ಪ್ರಯಾಣವನ್ನು ಅನುಭವಿಸಿದ ಹೃದಯಸ್ಪರ್ಶಿ ವಿಡಿಯೊ (Viral News) ಎಲ್ಲರ ಹೃದಯ ಗೆದ್ದಿದೆ. 84ನೇ ವಯಸ್ಸಿನಲ್ಲಿ ಅಜ್ಜಿ ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸಿದ್ದು, ಅಜ್ಜಿಯ ಆಸೆಯನ್ನು ಈಡೇರಿಸಲು ಮೊಮ್ಮಗ ಸಾಥ್ ನೀಡಿದ್ದಾನೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ಕೆಲವು ದಶಕಗಳಿಂದ ಅಜ್ಜಿಗೆ ವಿಮಾನದಲ್ಲಿ ಪ್ರಯಾಣ ಮಾಡಬೇಕು ಎನ್ನುವ ಆಸೆ ಇತ್ತು. ಈ ಕನಸನ್ನು ಕೊನೆಗೂ ಅವರ ಮೊಮ್ಮಗ ಅರ್ನಬ್ ಈಡೇರಿಸಿದ್ದಾನೆ. ಈ ಮರೆಯಲಾಗದ ಕ್ಷಣವನ್ನು ಅನರ್ಬ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾನೆ. ವಿಡಿಯೊದ ಆರಂಭದಲ್ಲಿ ಅಜ್ಜಿ ಏರ್‌ಪೋರ್ಟ್‌ನಲ್ಲಿ ನಿಂತಿರುವುದು ಕಂಡು ಬಂದಿದೆ. ಆದರೆ ಮುಂದೆ ಇಷ್ಟು ದೊಡ್ಡ ಸರ್‌ಪ್ರೈಸ್ ಇದೆ ಎಂದು ಅಜ್ಜಿಗೆ ತಿಳಿದಿರಲಿಲ್ಲ.

ವಿಡಿಯೊ ನೋಡಿ:



ವಿಡಿಯೊಕ್ಕೆ ʼʼಅಜ್ಜಿಯ ಕನಸು ಈಡೇರಿಸಲು 22 ವರ್ಷ ಬೇಕಾಯ್ತುʼʼ ಎಂದು ಶೀರ್ಷಿಕೆ ನೀಡಲಾಗಿದೆ. ಅಜ್ಜಿ ಮೆಲ್ಲಗೆ ವಿಮಾನದ ಮೆಟ್ಟಿಲು ಹತ್ತುತ್ತಿರುವ ದೃಶ್ಯ ಇದೆ. ಆದರೆ ಫ್ಲೈಟ್ ಹತ್ತುವಾಗ ಯಾವುದೇ ಆತಂಕ ಹಾಗೂ ಭಯ ಅವರಿಗೆ ಕಾಡಿಲ್ಲ.

ಶಿಕ್ಷಕಿಗೆ ಬೀಸಣಿಕೆಯಿಂದ ಗಾಳಿ ಹಾಕಿದ ವಿದ್ಯಾರ್ಥಿ: ಸರ್ಕಾರಿ ಶಾಲೆಯ ಶಿಕ್ಷಣ ಗುಣಮಟ್ಟ ಬಗ್ಗೆ ಪ್ರಶ್ನೆ ಮಾಡಿದ ನೆಟ್ಟಿಗರು!

ಅವರು ವಿಮಾನ ಟೇಕ್-ಆಫ್‌ಗಾಗಿ ಕಾಯುತ್ತಿರುವಾಗ ಆರಾಮವಾಗಿ ಮಖಾನಾ ಸೇವಿಸಿದ್ದಾರೆ. ವಿಮಾನವು ಆಕಾಶಕ್ಕೆ ಜಿಗಿಯುತ್ತಿದ್ದಂತೆ, ಅವರು ಕಿಟಕಿಯ ಮೂಲಕ ಹೊರಗಿನ ದೃಶ್ಯ ಆನಂದಿಸಿದ್ದಾರೆ. ಅಜ್ಜಿ ವಿಮಾನದ ಬಳಿ ಆತ್ಮವಿಶ್ವಾಸದಿಂದ ನಗುತ್ತಾ, ಹೆಮ್ಮೆಯಿಂದ ಪೋಸ್ ನೀಡಿದ್ದಾರೆ. ಈ ಬಗ್ಗೆ ನೆಟ್ಟಿಗರು ಕೂಡ ನಾನಾ ಬಗೆಯ ಕಮೆಂಟ್ ಮಾಡಿದ್ದಾರೆ. ಒಬ್ಬರು "ಇದನ್ನು ನೋಡಿದ ನಂತರ ನಾನು ನನ್ನ ಅಜ್ಜಿಯನ್ನು ಮಿಸ್ ಮಾಡಿಕೊಳ್ಳುತ್ತೇನೆ" ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು, ʼʼಅದೃಷ್ಟಶಾಲಿ ಅಜ್ಜಿʼʼ ಎಂದು ಹೇಳಿದ್ದಾರೆ.