Viral Video: ಜೊತೆಗೆ ಡಾನ್ಸ್ ಮಾಡೋಕೆ ಬಾ ಅಂದ್ರೆ ಈ ವರ ಹೀಗಾ ಮಾಡೋದು? ವಿಡಿಯೊ ನೋಡಿದ್ರೆ ಶಾಕ್ ಆಗುತ್ತೆ!
Groom pulled bride: ಈ ಜೋಡಿಯೊಂದರ ಮದುವೆಯ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಯಾರೂ ಈ ರೀತಿಯ ತಿರುವು ನಿರೀಕ್ಷಿಸಿರಲಿಕ್ಕಿಲ್ಲ. ಈಗ ವೈರಲ್ ಆಗಿರುವ ವಿವಾಹದ ವಿಡಿಯೊದಲ್ಲಿ, ವಧುವು ಮದುವೆಯ ಸಂಜೆಯನ್ನು ರೊಮ್ಯಾಂಟಿಕ್ ಆಗಿ ಆಚರಿಸಲು ಮುಂದಾದರು. ಆದರೆ, ವಧು ಮತ್ತು ವರನ ನಡುವಿನ ಸಿಹಿ ಕ್ಷಣವಾಗಿ ಪ್ರಾರಂಭವಾದದ್ದು ಕಹಿಯಾಗಿ ಮಾರ್ಪಟ್ಟಿತು.


ನವದೆಹಲಿ: ಮದುವೆ ಅಂದ್ರೆ ಅನೇಕರಿಗೆ ತಮ್ಮದೇ ಆದ ಕನಸುಗಳಿರುತ್ತವೆ. ಮದುವೆ ದಿನವು ಮಧುರ ನೆನಪುಗಳಿಂದ ತುಂಬಿರಬೇಕು ಎಂದು ಬಹುತೇಕರು ಬಯಸುತ್ತಾರೆ. ಬಹಳಷ್ಟು ಮದುವೆ ವೈರಲ್ ವಿಡಿಯೊಗಳನ್ನು ನೋಡಿರಬಹುದು. ಅದರಲ್ಲಿ ಕೆಲವು ಹಾಸ್ಯಮಯವಾಗಿರುತ್ತವೆ. ಆದರೀಗ ಈ ಒಂದು ಜೋಡಿಯ ಮದುವೆಯಲ್ಲಿ ನಡೆದಂತಹ ಘಟನೆ ವೈರಲ್(Viral Video) ಆಗುತ್ತಿದೆ.
ಹೌದು, ಈ ಜೋಡಿಯ ಮದುವೆಯ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಯಾರೂ ಈ ರೀತಿಯ ತಿರುವು ನಿರೀಕ್ಷಿಸಿರಲಿಕಿಲ್ಲ. ಈಗ ವೈರಲ್ ಆಗಿರುವ ವಿವಾಹದ ವಿಡಿಯೊದಲ್ಲಿ, ವಧುವು ಮದುವೆಯ ಸಂಜೆಯನ್ನು ರೊಮ್ಯಾಂಟಿಕ್ ಆಗಿ ಆರಿಸಲು ಮುಂದಾದರು. ಆದರೆ, ವಧು ಮತ್ತು ವರನ ನಡುವಿನ ಸಿಹಿ ಕ್ಷಣವಾಗಿ ಪ್ರಾರಂಭವಾದದ್ದು ಕಹಿಯಾಗಿ ಮಾರ್ಪಟ್ಟಿತು.
ವಧು ತನ್ನ ವರನನ್ನು ನೃತ್ಯ ಮಾಡಲು ಎಳೆದುಕೊಂಡು ಬಂದಿದ್ದಾಳೆ. ಮೊದಲಿಗೆ, ವರನು ಸ್ವಲ್ಪ ಹಿಂಜರಿದನು. ಆದರೆ ಮುಗುಳ್ನಗುತ್ತಾ ಜೊತೆಯಾಗಿ ನೃತ್ಯವನ್ನಾಡಿದ್ದಾನೆ. ಆದರೆ ನಂತರ, ನಡೆದದ್ದು ನಾಟಕ. ವಧುವಿನ ಕೈಗಳನ್ನು ಬಿಗಿಯಾಗಿ ಹಿಡಿದು ಗಿರಗಿರನೆ ತಿರುಗಿಸಿದ್ದಾನೆ. ವಧು ಮೇಲೆ ವರ ಆಕ್ರಮಣಕಾರಿಯಾಗಿ ವರ್ತಿಸಿದ್ದು, ನೆರೆದವರಲ್ಲಿ ಗೊಂದಲಕ್ಕೀಡು ಮಾಡಿತು. ಆತನ ಪ್ರದರ್ಶನ ಎಷ್ಟು ತೀವ್ರವಾಗಿತ್ತೆಂದರೆ ವಧು ನೆಲಕ್ಕಪ್ಪಳಿಸಿದ್ದಾಳೆ. ಇದರಿಂದ ಮದುವೆಗೆ ಬಂದ ಅತಿಥಿಗಳು ಅರೆಕ್ಷಣ ದಿಗ್ಭ್ರಾಂತರಾದರು.
ದಿಗ್ಭ್ರಮೆಗೊಂಡ ವಧು ಮತ್ತೆ ಎದ್ದೇಳಲು ಪ್ರಯತ್ನಿಸಿದಳು. ಆದರೆ ಅದು ಅಲ್ಲಿಗೆ ನಿಲ್ಲಲಿಲ್ಲ. ವರನು ಅವಳನ್ನು ಎತ್ತಿಕೊಂಡು ಮತ್ತೆ ಗಿರಗಿರನೆ ತಿರುಗಿಸಿದ್ದಾನೆ. ಪರಿಣಾಮ ವಧು ಮತ್ತೆ ಬಿದ್ದಿದ್ದಾಳೆ. ಇನ್ನು ತನ್ನನ್ನು ನೃತ್ಯಕ್ಕೆ ಕರೆದರೆ ಹುಷಾರ್.. ಎನ್ನುವಂತಿತ್ತು ವರನ ವರ್ತನೆ. ಆತಂಕಗೊಂಡ ಅತಿಥಿಗಳು ಧಾವಿಸಿ ಬಂದು ಅವನನ್ನು ಪಕ್ಕಕ್ಕೆ ಎಳೆದುಕೊಂಡು ನೃತ್ಯ ಪ್ರದರ್ಶನವನ್ನು ನಿಲ್ಲಿಸಿದ್ದಾರೆ. ಸಂಜೆಯ ಸಂತೋಷದಾಯಕ ಕ್ಷಣವಾಗಬೇಕಿದ್ದದ್ದು ವಿಚಿತ್ರವಾದ ಮೌನಕ್ಕೆ ತಿರುಗಿತು.
ವಿಡಿಯೊ ಇಲ್ಲಿದೆ:
ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇಲ್ಲಿಯವರೆಗೆ, ಪೋಸ್ಟ್ 1.1 ಮಿಲಿಯನ್ ವ್ಯೂವ್ಸ್ ಪಡೆದುಕೊಂಡಿದೆ. ಬಳಕೆದಾರರು ವರನ ವಿರುದ್ಧ ಟೀಕೆ ಮಾಡಿದ್ದಾರೆ. ನೀವು ನಿಜವಾಗಿಯೂ ಮದುವೆಯಾಗಬೇಕೇ? ಹೋಗಿ ಮನೆಯಲ್ಲಿ ಕುಳಿತುಕೊಳ್ಳಿ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಅವನು ಈಗಲೇ ಅವಳನ್ನು ಹೀಗೆ ನಡೆಸಿಕೊಳ್ಳುತ್ತಿದ್ದರೆ, ಮುಂದೆ ಹೇಗೆ ಜೀವನ ಎಂದು ಮತ್ತೊಬ್ಬ ಬಳಕೆದಾರರು ವಧುವಿನ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: ಅರಶಿನ ಶಾಸ್ತ್ರದ ವೇಳೆ ಕುಸಿದುಬಿದ್ದು ವಧು ಸಾವು; ಹೃದಯ ವಿದ್ರಾವಕ ವಿಡಿಯೊ ವೈರಲ್!
ಇದು ರೀಲ್‌ಗಳಿಗಾಗಿ ಸ್ಕ್ರಿಪ್ಟ್ ಮಾಡಲಾಗಿರಬಹುದು ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ. ಅವನು ಮದುವೆಯಾಗಲು ಅರ್ಹನಲ್ಲ, ಅವನನ್ನು ಶಾಂತಗೊಳಿಸಲು ಚಪ್ಪಲಿ ಬಳಸಿ ಎಂದು ಬಳಕೆದಾರರೊಬ್ಬರು ಟೀಕಿಸಿದ್ದಾರೆ. ನಿಜವಾಗಿಯೂ ಇದು ಸ್ಕ್ರಿಪ್ಟ್ ಆಗಿಲ್ಲದಿದ್ದರೆ, ನೀವು ತಪ್ಪು ಜೀವನ ಸಂಗಾತಿಯನ್ನು ಆರಿಸಿಕೊಂಡಿದ್ದೀರಿ ಎಂದು ಮಗದೊಬ್ಬ ಬಳಕೆದಾರ ವಧುವಿನ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ.