Viral News: ನೀವು ಹೀಗೆ ರಾತ್ರಿ 12 ಗಂಟೆಯ ನಂತರ ತಿರುಗಾಡಿದರೆ ಕಿರುಕುಳ ಆಗುತ್ತೆ; ಚನ್ನೈ ಪೊಲೀಸರಿಂದ ಮಹಿಳೆಗೆ ತರಾಟೆ!
ರಾತ್ರಿ ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದ ಮಹಿಳೆಯೊಬ್ಬರಿಗೆ ತಮಿಳುನಾಡಿನ ಪೊಲೀಸರಿಬ್ಬರು ಬೆದರಿಸಿದ ಘಟನೆ ನಡೆದಿದೆ. ರಾತ್ರಿ 12 ಗಂಟೆಯ ನಂತರ ನೀವು ಹೀಗೆ ತಿರುಗಾಡುವುದರಿಂದ ಕಿರುಕುಳ ಸಂಭವಿಸುತ್ತದೆ. ಜಗಳ ಹೆಚ್ಚಾಗುತ್ತಿದ್ದಂತೆ, ಮಹಿಳೆ ಮತ್ತು ಪೊಲೀಸ್ ಇಬ್ಬರೂ ಸಂಭಾಷಣೆಯನ್ನು ರೆಕಾರ್ಡ್ ಮಾಡಲು ಪ್ರಾರಂಭಿಸಿದ್ದಾರೆ.


ಚೆನ್ನೈ: ರಾತ್ರಿ ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದ ಮಹಿಳೆಯೊಬ್ಬರಿಗೆ ತಮಿಳುನಾಡಿನ ಪೊಲೀಸರಿಬ್ಬರು ಬೆದರಿಸಿದ ಘಟನೆ ನಡೆದಿದೆ. ರಾತ್ರಿ 12 ಗಂಟೆಯ ನಂತರ ನೀವು ಹೀಗೆ ತಿರುಗಾಡುವುದರಿಂದ ಕಿರುಕುಳ ( Viral News) ಸಂಭವಿಸುತ್ತದೆ. ತಿರುವನ್ಮಿಯೂರಿನಲ್ಲಿ ಈ ಘಟನೆ ನಡೆದಿದ್ದು, ಕಳೆದ 20 ವರ್ಷಗಳಿಂದ ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದ ಮಹಿಳೆಯನ್ನು ತಡರಾತ್ರಿ ಇಬ್ಬರು ಪೊಲೀಸರು ತರಾಟೆಗೆ ತೆಗೆದುಕೊಂಡಿದ್ದಾರೆ. ಅದರಲ್ಲಿ ಓರ್ವ ನಿಮ್ಮ ಈ ರೀತಿಯ ವರ್ತನೆಗಳೇ ನಿಮಗೆ ಅಪಾಯ ತರುತ್ತದೆ ಎಂದು ಹೇಳಿದ್ದಾರೆ. ಮಹಿಳೆ ಹಾಗೂ ಪೊಲೀಸರು ನಡುವಿನ ವಾಗ್ವಾದ ವೈರಲ್ ಆಗಿದೆ.
ಜಗಳ ಹೆಚ್ಚಾಗುತ್ತಿದ್ದಂತೆ, ಮಹಿಳೆ ಮತ್ತು ಪೊಲೀಸ್ ಇಬ್ಬರೂ ಸಂಭಾಷಣೆಯನ್ನು ರೆಕಾರ್ಡ್ ಮಾಡಲು ಪ್ರಾರಂಭಿಸಿದರು. ವೀಡಿಯೊದಲ್ಲಿ, ಮಹಿಳೆ ಅವನ ನಡವಳಿಕೆಯನ್ನು ಪ್ರಶ್ನಿಸುತ್ತಿರುವುದು ಕೇಳಿಸುತ್ತದೆ. ಪೊಲೀಸರೊಬ್ಬರನ್ನು ಕಾರ್ತಿಕ್ ಎಂದು ಗುರುತಿಸಲಾಗಿದೆ. ನಂತರ ಕಾರ್ತಿಕ್ ತಾನು "ಬಂಧನ" ಎಂಬ ಪದವನ್ನು ಬಳಸಿದ್ದೇನೆಯೇ ಹೊರತು "ಕಿರುಕುಳ" ಎಂಬ ಪದವನ್ನು ಬಳಸಿಲ್ಲ ಎಂದು ಹೇಳಿಕೊಂಡಿರೆ. ಆದರೆ ವೀಡಿಯೊ ಸ್ಪಷ್ಟವಾಗಿ ಬೇರೆಯದೇ ರೀತಿ ತೋರಿಸುತ್ತದೆ. ಮಧ್ಯರಾತ್ರಿಯ ನಂತರ ಮಹಿಳೆ ಹೊರಗೆ ಬರದಂತೆ ಸಲಹೆ ನೀಡಿದ್ದಾಗಿ ಮತ್ತು ಬಂಧನವನ್ನು ಎದುರಿಸಬೇಕಾಗಬಹುದು ಎಂದು ಎಚ್ಚರಿಸಿದ್ದಾಗಿ ತನಿಖಾ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ದೆಹಲಿ ಹಾಗೂ ಎನ್ಸಿಆರ್ನಲ್ಲಿ ಬೀದಿ ನಾಯಿಗಳ ಕಾಟ ವಿಪರೀಚತ ವಾದ ಹಿನ್ನಲೆಯಲ್ಲಿ ಬೀದಿನಾಯಿಗಳ ತೆರವಿಗೆ ಆದೇಶ ನೀಡಿದ್ದ ಸುಪ್ರೀಂ ಕೋರ್ಟ್ ಕೊನೆಗೂ ತನ್ನ ಆದೇಶವನ್ನು ಸಡಿಲಿಸಿದ್ದು, ಸಂತಾನಹರಣ ಚಿಕಿತ್ಸೆ ಮಾಡಿಸಿ ಹೊರಗೆ ಬಿಡಬಹುದು ಎಂದು ಹೇಳಿದೆ. ದೆಹಲಿ-ಎನ್‌ಸಿಆರ್‌ನ ಸುತ್ತಮುತ್ತಲಿನಲ್ಲಿ ಬೀದಿ ನಾಯಿಗಳನ್ನು ಹಿಡಿದು ಆಶ್ರಯ ತಾಣಗಳಿಗೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ಕೆಲ ದಿನಗಳ ಹಿಂದೆ ನಿರ್ದೇಶಿಸಿತ್ತು.
ಈ ಸುದ್ದಿಯನ್ನೂ ಓದಿ: Supreme Court: ವಿಕಲಚೇತನರ ಅಪಹಾಸ್ಯ ಬೇಡ; ನಿಮ್ಮದೇ ಪ್ಲಾಟ್‌ಫರ್ಮ್‌ನಲ್ಲಿ ಕ್ಷಮೆಯಾಚಿಸಿ, ಕಾಮಿಡಿಯನ್ಸ್‌ಗೆ ಸುಪ್ರೀಂ ಖಡಕ್ ಆದೇಶ
ಈ ನಿರ್ದೇಶನದ ವಿರುದ್ಧ ಶ್ವಾನ ಪ್ರಿಯರು ಮತ್ತು ಪ್ರಾಣಿ ಸಂಘಟನೆಗಳು ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಶುಕ್ರವಾರ ಬೀದಿ ನಾಯಿಗಳಿಗೆ ಲಸಿಕೆ, ಸಂತಾನ ಹರಣ ಚಿಕಿತ್ಸೆ ಮಾಡಿಸಿ ಬಳಿಕ ಹೊರಗೆ ಬಿಡಬಹುದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.