ಅಹಮದಾಬಾದ್: ಅಹಮದಾಬಾದ್‌ನಿಂದ ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಗುರುವಾರ (ಜೂನ್ 12)ರಂದು ದುರಂತವಾಗಿ ಪತನವಾಗಿತ್ತು. ನವವಧುವೊಬ್ಬಳು ಲಂಡನ್‍ನಲ್ಲಿದ್ದ ತನ್ನ ಪತಿಯನ್ನು ಭೇಟಿ ಮಾಡಲು ೀ ವಿಮಾನವೇರಿದ್ದಳು.ಆದರೆ ಈ ಭೀಕರ ಅಪಘಾತದಿಂದ ಆಕೆ ಸಾವನ್ನಪ್ಪಿದ್ದಾಳೆ. ರಾಜಸ್ಥಾನದ ಬಲೋತ್ರಾ ಜಿಲ್ಲೆಯ ತನ್ನ ಮನೆಯಿಂದ ಹೊರಡುವ ಮೊದಲು ಆಕೆ ಮಾಡಿದ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.
ವರದಿಗಳ ಪ್ರಕಾರ, ಅಹಮದಾಬಾದ್‌ನಿಂದ ಲಂಡನ್‌ಗೆ ತೆರಳುತ್ತಿದ್ದ AI 171 ವಿಮಾನದಲ್ಲಿ ರಾಜಸ್ಥಾನದ ಸುಮಾರು ಹತ್ತು ಪ್ರಯಾಣಿಕರಿದ್ದರು. ಈ ಪ್ರಯಾಣಿಕರಲ್ಲಿ ನಾಲ್ವರು ಉದಯಪುರದವರಾಗಿದ್ದು, ನವವಿವಾಹಿತ ಮಹಿಳೆ ಬಲೋತ್ರಾ ಮೂಲದವಳು. ಭೀಕರ ಅಪಘಾತದಲ್ಲಿ ಒಬ್ಬ ಪ್ರಯಾಣಿಕನು ಮಾತ್ರ ಬದುಕುಳಿದಿದ್ದಾನೆ. ಅವನ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ವಿಡಿಯೊ ಇಲ್ಲಿದೆ ನೋಡಿ...
ಮಾಜಿ ಸಚಿವ ಮತ್ತು ಬೈಟು ಶಾಸಕ ಹರೀಶ್ ಚೌಧರಿ ಅವರು ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ನವವಧುವಿನ ನಿಧನದ ಸುದ್ದಿಯನ್ನು ದೃಢಪಡಿಸಿದ್ದಾರೆ. "ಥಾರ್ ಕುಟುಂಬದ ನಮ್ಮ ಮಗಳು ಖುಷ್ಬೂ ರಾಜ್‌ಪುರೋಹಿತ್ ಅಹಮದಾಬಾದ್‌ನಲ್ಲಿ ನಡೆದ ವಿಮಾನ ಅಪಘಾತದಲ್ಲಿ ನಿಧನಳಾಗಿದ್ದು ಅತ್ಯಂತ ದುಃಖಕರ ಮತ್ತು ದುರದೃಷ್ಟಕರ. ದೇವರು ಅಗಲಿದ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಈ ನಷ್ಟವನ್ನು ಸಹಿಸಿಕೊಳ್ಳುವ ಧೈರ್ಯವನ್ನು ಕುಟುಂಬಕ್ಕೆ ನೀಡಲಿ" ಎಂದು ಅವರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಐಸ್‌ಕ್ರೀಂ, ರೋಟಿ ಬಳಿಕ ಸಲಾಡ್‍ನಲ್ಲಿ ಸತ್ತ ಹುಳ ಪತ್ತೆ; ಐಎಎಸ್ ಅಧಿಕಾರಿ ಫುಲ್ ಗರಂ
ಬಲೋತ್ರಾ ಜಿಲ್ಲೆಯ ಮದನ್ ಸಿಂಗ್ ರಾಜ್‌ಪುರೋಹಿತ್ ಅವರ ಪುತ್ರಿ ಖುಷ್ಬು ಲಂಡನ್‌ನಲ್ಲಿ ವಾಸಿಸುವ ವೈದ್ಯ ವಿಪುಲ್ ಸಿಂಗ್ ರಾಜ್‌ಪುರೋಹಿತ್ ಜೊತೆ ವಿವಾಹವಾಗಿದ್ದಳೆ.ಪತಿಯನ್ನು ಭೇಟಿಯಾಗಲು ಖುಷ್ಬು ಲಂಡನ್‌ಗೆ ಪ್ರಯಾಣಿಸುತ್ತಿದ್ದಳು. ಆದರೆ ವಿಮಾನ ಟೇಕ್ ಆಫ್ ಆದ 30 ಸೆಕೆಂಡುಗಳ ನಂತರ ಅಪಘಾತಕ್ಕೀಡಾಯಿತು. ಖುಷ್ಬು ಅವಳ ಕುಟುಂಬ ಸದಸ್ಯರಿಗೆ ಅವಳ ಸ್ಥಿತಿಯ ಬಗ್ಗೆ ತಿಳಿದಿಲ್ಲ ಎನ್ನಲಾಗಿದೆ.