ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರೈಲು ಊಟಕ್ಕಿಂತ ಮನೆ ಅಡುಗೆಯೇ ಬೆಸ್ಟ್: ಪ್ರಯಾಣದ ಮಧ್ಯೆ ಪಾತ್ರೆ ತೆರೆದು ಚಿಕನ್ ಊಟ ಬಡಿಸಿದ ಮಹಿಳೆ!

Viral News: ಭಾರತೀಯ ರೈಲು ಪ್ರಯಾಣ ಅಂದಾಗ ಅಲ್ಲಿ ಕೇವಲ ಪ್ರಯಾಣಕ್ಕೆ ಮಾತ್ರ ಸೀಮಿತ ಇರುವುದಿಲ್ಲ. ತರಹೇವಾರಿ ಖಾದ್ಯಗಳು, ಮನೆಯವರ ಜೊತೆ ಸೇರಿ ತಿನ್ನುವ ಸಂಭ್ರಮ ಕೂಡ ಇರುತ್ತದೆ. ಇದಕ್ಕೆ ಸಾಕ್ಷಿಯಾಗಿ ಮಹಿಳೆಯೊಬ್ಬರು ಅನ್ನದ ಪಾತ್ರೆ, ಘಮ- ಘಮಿಸುವ ಚಿಕನ್ ಸಾರಿನ ಪಾತ್ರೆಯನ್ನೇ ತಂದಿದ್ದಾರೆ‌. ಅವರು ರೈಲಿನಲ್ಲಿ ಕುಳಿತುಕೊಂಡ ತನ್ನ ಕುಟುಂಬಕ್ಕೆ ಆಹಾರವನ್ನು ಬಡಿಸುತ್ತಿದ್ದಾರೆ.

ರೈಸ್ ,ಚಿಕನ್ ಸಾಂಬಾರು ತಂದು ರೈಲಿನ ಅಪ್ಪರ್ ಬರ್ತ್‌ನಿಂದಲೇ ಊಟ ಬಡಿಸಿದ ಮಹಿಳೆ

ನವದೆಹಲಿ,ಸೆ.10: ಇತ್ತೀಚೆಗೆ ರೈಲ್ವೆ ನಿಲ್ದಾಣದಲ್ಲಿ ಕಳಪೆ ಆಹಾರ ನೀಡುತ್ತಿರುವ ಅನೇಕ ಘಟನೆಗಳು ಕಂಡು ಬಂದಿವೆ‌. ಇದಕ್ಕೆ ಪರಿಹಾರವಾಗಿ ಮಹಿಳೆಯೊಬ್ಬರು ಮನೆಯಿಂದಲೇ ದೊಡ್ಡ ಪಾತ್ರೆಗಳಲ್ಲೇ ಆಹಾರ ಸಿದ್ದಪಡಿಸಿ ತಂದಿದ್ದಾರೆ. ವೈರಲ್ ಆದ ವಿಡಿಯೊದಲ್ಲಿ ಮಹಿಳೆಯೊಬ್ಬರು ರೈಲಿನ ಅಪ್ಪರ್ ಬರ್ತ್‌ನಲ್ಲಿ ಕುಳಿತು, ತಮ್ಮೊಂದಿಗೇ ತಂದಿದ್ದ ದೊಡ್ಡ ದೊಡ್ಡ ಪಾತ್ರೆಗಳನ್ನು ತೆರೆದು ಕುಟುಂಬಸ್ಥರಿಗೆ ಊಟ ಬಡಿಸುವ ದೃಶ್ಯ (Viral News) ಕಾಣಬಹುದು.

ಭಾರತೀಯ ರೈಲು ಪ್ರಯಾಣ ಅಂದಾಗ ಅಲ್ಲಿ ಕೇವಲ ಪ್ರಯಾಣಕ್ಕೆ ಮಾತ್ರ ಸೀಮಿತ ಇರುವುದಿಲ್ಲ. ತರಹೇವಾರಿ ಖಾದ್ಯಗಳು, ಮನೆಯವರ ಜೊತೆ ಸೇರಿ ತಿನ್ನುವ ಸಂಭ್ರಮ ಕೂಡ ಇರುತ್ತದೆ. ಇದಕ್ಕೆ ಸಾಕ್ಷಿಯಾಗಿ ಮಹಿಳೆಯೊಬ್ಬರು ಅನ್ನದ ಪಾತ್ರೆ, ಘಮ- ಘಮಿಸುವ ಚಿಕನ್ ಸಾರಿನ ಪಾತ್ರೆಯನ್ನೇ ತಂದಿದ್ದಾರೆ‌. ಅವರು ರೈಲಿನಲ್ಲಿ ಕುಳಿತುಕೊಂಡ ತನ್ನ ಕುಟುಂಬಕ್ಕೆ ಆಹಾರವನ್ನು ಬಡಿಸುತ್ತಿದ್ದಾರೆ. ಈ ಅದ್ದೂರಿ ಊಟದ ವ್ಯವಸ್ಥೆ ಇಂಟರ್ನೆಟ್‌ನ ಗಮನ ಸೆಳೆದಿದೆ.

ವಿಡಿಯೋ ನೋಡಿ:



ತಾನು ಕುಳಿತಿರುವ ಮೇಲಿನ ಬರ್ತ್‌ನಿಂದಲೇ ಸ್ಟೀಲ್ ತಟ್ಟೆಗೆ ಅನ್ನ ಹಾಗೂ ಚಿಕನ್ ಸಾಂಬಾರು ಹಾಕಿ ಕೆಳಗಿರುವ ಕುಟುಂಬದ ಸದಸ್ಯರಿಗೆ ನೀಡುತ್ತಿದ್ದಾರೆ. ವೈರಲ್ ವಿಡಿಯೊದಲ್ಲಿ ರೈಲಿನೊಳಗೆ ಮೇಲಿನ ಬರ್ತ್‌ನಲ್ಲಿ ಆಹಾರ ತುಂಬಿದ ಪಾತ್ರೆಗಳನ್ನು ತೋರಿಸಲಾಗಿದೆ. ಇಂಟರ್ನೆಟ್ ಬಳಕೆದಾರರು ರೈಲಿನ ಊಟವನ್ನು ತಿನ್ನುವುದಕ್ಕಿಂತ ಮನೆಯಲ್ಲಿ ಬೇಯಿಸಿದ ಆಹಾರವನ್ನು ಕೊಂಡೊಯ್ಯುವುದು ಉತ್ತಮ ಎಂದು ಹೇಳುತ್ತಿದ್ದಾರೆ.

Viral Video: ರಸ್ತೆಗೆ ಮದ್ಯದ ಬಾಟಲ್‌ ಎಸೆದ ಕಿಡಿಗೇಡಿ; ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರಿ ದುರಂತ

ಬಹುತೇಕರು ಮಹಿಳೆಯ ಈ ಉಪಾಯವನ್ನು ಬೆಂಬಲಿಸಿದ್ದಾರೆ. "ಸ್ವಾವಲಂಬಿ ಭಾರತ ಎಂದರೆ ಇದೇ. ರೈಲಿನಲ್ಲಿ ಕೊಡುವ ಆಹಾರಕ್ಕಿಂತ ಇದು ಬೆಸ್ಟ್ ಆಯ್ಕೆ'' ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಆದರೆ ಮತ್ತೊಬ್ಬರು ಮನೆಯಿಂದ ಊಟ ತರುವುದು ತಪ್ಪಲ್ಲ, ಆದರೆ ಸಾರ್ವಜನಿಕ ಸಾರಿಗೆಯಾದ ರೈಲಿನ್ನು ಅಡುಗೆಮನೆಯಂತೆ ಬಿಂಬಿಸುವುದು ತಪ್ಪು ಎಂದರು.