ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Viral video: ಉಚಿತ ಪ್ರಯಾಣ ನಿರಾಕರಿಸಿದ ಆಟೋ ಚಾಲಕನನ್ನು ನಿಂದಿಸಿದ ಹೋಮ್ ಗಾರ್ಡ್ ಸಿಬ್ಬಂದಿ ಅಮಾನತು

Viral Video: ಆಟೋ ರಿಕ್ಷಾ ಚಾಲಕನೊಬ್ಬ ಉಚಿತವಾಗಿ ಲಿಫ್ಟ್ ನೀಡಲು ನಿರಾಕರಿಸಿದ್ದಾನೆ ಎಂಬ ಕಾರಣಕ್ಕೆ ಹರಿಯಾಣದ ಗುರುಗ್ರಾಮ್‌ನ ಹೋಮ್ ಗಾರ್ಡ್ ಸಿಬ್ಬಂದಿ ಸಾರ್ವಜನಿಕವಾಗಿ ಆಟೋ ಚಾಲಕನನ್ನು ನಿಂದಿಸಿದ್ದಾನೆ‌. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಆಟೋ ಚಾಲಕನ ಮೇಲೆ ದೌರ್ಜನ್ಯ ಎಸಗಿದ ಹೋಮ್ ಗಾರ್ಡ್ ಸಿಬ್ಬಂದಿ

ಚಂಡೀಗಢ, ಜೂ. 27: ಸಮವಸ್ತ್ರ ಧರಿಸಿದ ಹೋಮ್‌ ಗಾರ್ಡ್‌ ಸಿಬ್ಬಂದಿಯ ಅಧಿಕಾರ ದುರುಪಯೋಗ ಮತ್ತು ಆಹಂಕಾರದ ವರ್ತನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗುತ್ತಿದೆ. ಗುರುಗ್ರಾಮ್ ಹೋಮ್ ಗಾರ್ಡ್ ಸಿಬ್ಬಂದಿ ಆಟೋ ರಿಕ್ಷಾ ಚಾಲಕನೊಬ್ಬ ಉಚಿತವಾಗಿ ಲಿಫ್ಟ್ ನೀಡಲು ನಿರಾಕರಿಸಿದ್ದಾನೆ ಎಂದು ಸಾರ್ವಜನಿಕವಾಗಿ ನಿಂದಿಸಿದ್ದಾನೆ‌, ಅವಾಚ್ಯ ಪದಗಳಿಂದ ಬೈದಿದ್ದಾನೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಿಕ್ಷಾ ಚಾಲಕನು ಉಚಿತವಾಗಿ ಲಿಫ್ಟ್ ನೀಡಲು ನಿರಾಕರಿಸಿದ್ದಾನೆ ಎಂಬ ಕಾರಣಕ್ಕೆ ಸಮವಸ್ತ್ರದಲ್ಲಿದ್ದ ಹೋಮ್ ಗಾರ್ಡ್ ಸಿಬ್ಬಂದಿ ತರಾಟೆಗೆ ತೆಗೆದುಕೊಂಡಿದ್ದಾನೆ. ವಿಡಿಯೊದಲ್ಲಿ ಕಾಣುವ ವ್ಯಕ್ತಿ ಗೃಹರಕ್ಷಕ ದಳದ ಉದ್ಯೋಗಿ ಎಂದು ಗುರುಗ್ರಾಮ್ ಪೊಲೀಸರು ದೃಢಪಡಿಸಿದ್ದು, ಆತನನ್ನು ಕರ್ತವ್ಯದಿಂದ ತೆಗೆದುಹಾಕಲಾಗಿದೆ ಎಂದು ಸ್ಪಷ್ಟ ಪಡಿಸಿದ್ದಾರೆ.

ವಿಡಿಯೊ ನೋಡಿ:



ಗುರುಗ್ರಾಮದ ಸೆಕ್ಟರ್ 57ರ ಬಳಿ ಸಮವಸ್ತ್ರದಲ್ಲಿದ್ದ ಪ್ರವೇಶ್ ಎಂಬ ಹೋಮ್ ಗಾರ್ಡ್ ಸಿಬ್ಬಂದಿ ಆಟೋ ರಿಕ್ಷಾ ಹತ್ತಿ ತನಗೆ ಉಚಿತವಾಗಿ ಡ್ರಾಪ್ ನೀಡಬೇಕು ಎಂದಿದ್ದಾನೆ. ಆದರೆ ಆಟೋ ಚಾಲಕ ಬೇರೊಬ್ಬರನ್ನು ಬುಕ್ ಮಾಡಿ ಪ್ರಯಾಣದ ಸಿದ್ದತೆಯಲ್ಲಿದ್ದರು. ಆತ ಇನ್ನೊಬ್ಬ ಪ್ರಯಾಣಿಕನನ್ನು ಪಿಕ್-ಅಪ್ ಮಾಡಲು ಹೋಗುತ್ತಿರುವುದಾಗಿ ವಿನಂತಿಸಿಕೊಂಡಿದ್ದಾನೆ. ಇದರಿಂದ ತೀವ್ರ ಕೋಪ ಗೊಂಡ ಹೋಮ್ ಗಾರ್ಡ್ ಆಟೋ ಚಾಲಕನಿಗೆ ಅವಾಚ್ಯ ಶಬ್ದದಿಂದ ಬೈದಿದ್ದಾನೆ.

ಫ್ರಾನ್ಸ್‌ನಲ್ಲಿ ಮಹಿಳೆಯರ ಸುರಕ್ಷತೆ ಆದ್ಯತೆ; ಮುಂಜಾನೆ 4:30ಕ್ಕೆ ಒಬ್ಬಂಟಿಯಾಗಿ ಓಡಾಡಿದ ಭಾರತೀಯ ಮಹಿಳೆ

ವೈರಲ್ ಆದ ವಿಡಿಯೊದಲ್ಲಿ ಗೃಹರಕ್ಷಕ ದಳದ ಉದ್ಯೋಗಿ ನಿಂದನೀಯ ಪದ ಬಳಸುತ್ತಿರುವುದು ಕಂಡುಬಂದಿದೆ. ಕೇವಲ ಉಚಿತ ಪ್ರಯಾಣ ನೀಡಿಲ್ಲ ಎಂಬ ಕಾರಣಕ್ಕೆ ತನಗೆ ಸಾರ್ವಜನಿಕವಾಗಿ ನಿಂದಿಸಿ, ಮಾನಸಿಕ ಕಿರುಕುಳ ನೀಡಿದ್ದಾನೆ ಎಂದು ಚಾಲಕ ಇಡೀ ಘಟನೆಯನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದು ನೆಟ್ಟಿಗರು ಅಧಿಕಾರಿಗಳ ದರ್ಪದ ವಿರುದ್ಧ ಕಿಡಿಕಾರಿದ್ದಾರೆ.

ಈ ಘಟನೆಯು ಆನ್‌ಲೈನ್‌ನಲ್ಲಿ ತ್ವರಿತವಾಗಿ ಗಮನ ಸೆಳೆದಿದ್ದು ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಈ ನಡವಳಿಕೆಯನ್ನು ಖಂಡಿಸಿದ್ದಾರೆ‌. ಸಾರ್ವಜನಿಕ ಸೇವಕನು ಉಚಿತ ಸಾರಿಗೆಯನ್ನು ಏಕೆ ನಿರೀಕ್ಷಿಸುತ್ತಾನೆ ಎಂದು ಹಲವರು ಪ್ರಶ್ನಿಸಿದ್ದಾರೆ‌. ಅನೇಕರು ಕಠಿಣ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಕರೆ ನೀಡಿದ್ದು, ನಾಗರಿಕರನ್ನು ಗೌರವದಿಂದ ನಡೆಸಿಕೊಳ್ಳಬೇಕು ಎಂದಿದ್ದಾರೆ.

ವಿಡಿಯೊದಲ್ಲಿ ಕಾಣಿಸಿಕೊಂಡಿರುವ ಹೋಮ್ ಗಾರ್ಡ್ ಸಿಬ್ಬಂದಿ ಪ್ರವೇಶ್ ಎಂಬಾತನನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕರ್ತವ್ಯದಿಂದ ಮುಕ್ತಗೊಳಿಸಲಾಗಿದೆ. ಪೊಲೀಸರ ಈ ತಕ್ಷಣದ ನಿರ್ಧಾರವನ್ನು ಸಾರ್ವಜನಿಕರು ಶ್ಲಾಘಿಸಿದರೂ ಇಂತಹ ಘಟನೆಗಳು ಮರುಕಳಿಸದಂತೆ ಸಮವಸ್ತ್ರಧಾರಿ ಸಿಬ್ಬಂದಿಗೆ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಬೇಕು ಎಂದು ಮನವಿ ಮಾಡಿದ್ದಾರೆ.