ಲಂಡನ್: ಹಾಟ್ ಏರ್ ಬಲೂನ್ (Hot Air Balloon) ಇಂಗ್ಲೆಂಡ್‌ನ ಬೆಡ್‌ಫೋರ್ಡ್ ಪಟ್ಟಣದಲ್ಲಿ ಅನಿರೀಕ್ಷಿತವಾಗಿ ಕೆಳಗಿಳಿದಿರುವ ಘಟನೆ ನಡೆದಿದೆ. ಶನಿವಾರ ಬೆಳಗ್ಗೆ (ಆಗಸ್ಟ್ 23) ಬೋವರ್ ಸ್ಟ್ರೀಟ್‌ನ ಮಧ್ಯದಲ್ಲಿ ಮನೆಗಳು, ಕಾರುಗಳು ಮತ್ತು ತಂತಿಗಳ ನಡುವೆ ಬಲೂನ್ ಇಳಿದಿದೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ. ವರದಿಯ ಪ್ರಕಾರ, ಸ್ಥಳೀಯ ನಿವಾಸಿ ಸ್ಯಾಮ್ ಕೋಲ್ಡ್‌ಹ್ಯಾಮ್ ಸಂಗಾತಿ ಸಿಯಾನ್ ಕಿಂಗ್ ಜತೆ ತನ್ನ ನಾಯಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಬಲೂನ್ ವೇಗವಾಗಿ ಕೆಳಗೆ ಬರುತ್ತಿರುವುದನ್ನು ಗಮನಿಸಿದರು.
ಬಲೂನ್ ಕಿರಿದಾದ ಬೀದಿಗೆ ಇಳಿಯುತ್ತಿರುವ ದೃಶ್ಯವನ್ನು ಕಿಂಗ್ ಸೆರೆಹಿಡಿದರು. ಸ್ಥಳದಲ್ಲಿದ್ದವರು ಹಗ್ಗಗಳನ್ನು ಹಿಡಿದು ಸುರಕ್ಷಿತವಾಗಿ ಕೆಳಗೆ ಇಳಿಸಲು ಮುಂದಕ್ಕೆ ತೆರಳಿದ್ದಾರೆ ಎಂದು ಅವರು ವಿವರಿಸಿದ್ದಾರೆ.
ವಿಡಿಯೊ ವೀಕ್ಷಿಸಿ:
ಬಲೂನ್ ರಸೆಲ್ ಪಾರ್ಕ್‌ನಲ್ಲಿ ಇಳಿಯಬೇಕಿತ್ತು. ಆದರೆ ಅದೇನಾಯ್ತೋ ಗೊತ್ತಿಲ್ಲ ಅದು ವಸತಿ ಬೀದಿಯ ಕಡೆಗೆ ಸಾಗಿತು. ಇದರಿಂದಾಗಿ ತುರ್ತು ಕ್ರಮ ತೆಗೆದುಕೊಳ್ಳಬೇಕಾಯಿತು. ಒಳಗಿದ್ದ ಸವಾರ ಪದೇ ಪದೆ ಬರ್ನರ್‌ಗಳನ್ನು ಉರಿಸಿದನು. ಆದರೆ ಬಲೂನ್ ಮೇಲಕ್ಕೆ ಹಾರದೆ, ಅದು ಕೆಳಕ್ಕೆ ಇಳಿಯುತ್ತಲೇ ಇತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ನಿಯಂತ್ರಣವನ್ನು ಕಳೆದುಕೊಂಡ ಹಾಟ್ ಬಲೂನ್, ಎರಡೂ ಬದಿಗಳಲ್ಲಿ ನಿಲ್ಲಿಸಲಾದ ಕಾರುಗಳ ನಡುವೆ ಇಳಿದಿದೆ. ರಸ್ತೆಯಲ್ಲಿದ್ದ ಇತರರು ಸಹ ಬಲೂನನ್ನು ರಸ್ತೆಯ ಮಧ್ಯಕ್ಕೆ ಎಳೆಯಲು ಹಗ್ಗಗಳನ್ನು ಎಳೆದರು. ಕೊನೆಗೆ ಅದು ನೆಲವನ್ನು ತಲುಪಿದೆ.
ಬಲೂನ್ ನೆಲವನ್ನು ತಲುಪುತ್ತಿದ್ದಂತೆ, ಸ್ಥಳದಲ್ಲಿದ್ದವರು ಹರ್ಷೋದ್ಗಾರ ಮಾಡಿದರು. ಇದು ಅತ್ಯಂತ ಅದ್ಭುತವಾದ ದೃಶ್ಯವಾಗಿತ್ತು ಎಂದು ಲ್ಯಾಂಡಿಂಗ್ ಅನ್ನು ಚಿತ್ರೀಕರಿಸಿದ ಸ್ಥಳೀಯ ನಿವಾಸಿ ಎಮ್ಮಾ ಫಿರ್ಮನ್ ಎಂಬುವವರು ತಿಳಿಸಿದರು. ಬಲೂನ್ ಮೇಲ್ಛಾವಣಿಗಳಿಗೆ, ಕಾರುಗಳು ಮತ್ತು ತಂತಿಗಳಿಗೆ ಡಿಕ್ಕಿ ಹೊಡೆಯಬಹುದು ಎಂದು ಭಾವಿಸಿದೆ. ಅದೃಷ್ಟವಶಾತ್ ಹಾಗಾಗಲಿಲ್ಲ ಎಂದು ಅವರು ಹೇಳಿದರು.
ಇದನ್ನೂ ಓದಿ: Viral News: ಈ ಹೋಟೆಲ್‍ಗೆ ಭೇಟಿ ನೀಡಿದರೆ ನೀವು ಒಂಟಿಯಾಗಿರಲ್ಲ; ನಿಮಗಾಗಿ ಆತ್ಮೀಯ ಸ್ನೇಹಿತನೊಬ್ಬ ಇಲ್ಲಿರ್ತಾನೆ!