ಬೆಂಗಳೂರು, ಜೂ. 25: ಒಂದು ಊರಿನ ಹೆಸರು ಹಲವು ಕಡೆ ಇರುವುದನ್ನು ನೀವು ಗಮನಿಸಿರಬಹುದು. ಒಂದೇ ಹೆಸರನ್ನು ಇಟ್ಟುಕೊಂಡಿರುವ ಹಲವು ಪಟ್ಟಣಗಳು ಮತ್ತು ಹಳ್ಳಿಗಳಿವೆ. ಆದರೆ ಮತ್ತೊಂದು ದೇಶದಲ್ಲಿ ನಮ್ಮೂರಿನ ಹೆಸರು ಇರುವುದು ಅಪರೂಪ. ಅಂತಹ ಅಚ್ಚರಿಯ ವಿಚಾರವೊಂದು ಸದ್ಯ ಸದ್ದು ಮಾಡುತ್ತಿದೆ. ಮಂಗಳೂರು ಎಂಬ ಹೆಸರು ಕರ್ನಾಟಕದಲ್ಲಿ ಮಾತ್ರವಿದೆ ಎಂದು ನೀವು ಅಂದುಕೊಂಡಿರಬಹುದು. ಆದರೆ ಈ ಹೆಸರು ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ನಮ್ಮಿಂದ ಸಾವಿರಾರು ಕಿಲೋ ಮೀಟರ್ ದೂರದ ಆಸ್ಟ್ರೇಲಿಯಾ ಖಂಡದಲ್ಲಿ ಇದೇ ಹೆಸರಿನ ಒಂದಲ್ಲ ಎರಡು ಪಟ್ಟಣಗಳಿವೆ ಎಂದರೆ ನಂಬುತ್ತೀರಾ? ಅಚ್ಚರಿಯಾದರೂ ಇದು ಸತ್ಯ. ಹೌದು, ಆಸ್ಟ್ರೇಲಿಯಾದ 2 ಪಟ್ಟಣಗಳ ಹೆಸರು ಮಂಗಳೂರು. ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗುತ್ತಿದೆ.
ಮಂಗಳೂರು ಎನ್ನುವ ಹೆಸರು ಕರ್ನಾಟಕ ಅಥವಾ ಭಾರತಕ್ಕೆ ಸೀಮಿತವಾಗಿಲ್ಲ. ಅದು ಆಸ್ಟ್ರೇಲಿಯಾಲ್ಲೂ ಇದೆ ಎನ್ನುವುದೇ ಹಲವರಿಗೆ ಅಚ್ಚರಿ ಉಂಟು ಮಾಡುತ್ತಿದೆ. ಅಲ್ಲಿನ ಎರಡು ಪಟ್ಟಣಗಳು ಇನ್ನೂ ಆ ಹೆಸರನ್ನು ಇಟ್ಟುಕೊಂಡಿವೆ. ವಿಕ್ಟೋರಿಯಾ ಮತ್ತು ಟ್ಯಾಸ್ಮೇನಿಯಾದಲ್ಲಿರುವ ಎರಡು ಪಟ್ಟಣಗಳಿಗೆ ಮಂಗಳೂರು ಎಂದು ಹೆಸರನ್ನು ಇಡಲಾಗಿದೆ ಎಂದು ತಿಳಿದು ಬಂದಿದೆ.
ಫ್ರಾನ್ಸ್‌ನಲ್ಲಿ ಮಹಿಳೆಯರ ಸುರಕ್ಷತೆ ಆದ್ಯತೆ
ವಿಕ್ಟೋರಿಯಾದಲ್ಲಿರುವ ಮಂಗಳೂರು ಬಹಳಷ್ಟು ಪ್ರಸಿದ್ಧ. ಮೆಲ್ಬೋರ್ನ್‌ನಿಂದ ಸುಮಾರು 100 ಕಿಲೋ ಮೀಟರ್ ಉತ್ತರಕ್ಕೆ ಇದೆ. ಐತಿಹಾಸಿಕ ದಾಖಲೆಗಳು ಆ ಹೆಸರನ್ನು 1830ರ ದಶಕದಲ್ಲೇ ಇತ್ತು ಎನ್ನುವುದನ್ನು ಸೂಚಿಸುತ್ತದೆ. ಆಗ ಬ್ರಿಟಿಷ್ ಸೇನಾ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಜೋಸೆಫ್ ಆಂಡರ್ಸನ್ ಈ ಪಟ್ಟಣಕ್ಕೆ ಭಾರತದ ಮಂಗಳೂರು ನಗರದ ಹೆಸರನ್ನು ಇಟ್ಟಿರು ಎಂದು ಹೇಳಲಾಗಿದೆ.
ಬ್ರಿಟಿಷ್ ಅವಧಿಯಲ್ಲಿ ಮಂಗಳೂರನ್ನು ಪ್ರಮುಖ ಕೇಂದ್ರವೆಂದು ಪರಿಗಣಿಸಲಾಗಿತ್ತು. ಜೋಸೆಫ್ ಆಂಡರ್ಸನ್ ಅವರ ಸಹೋದರ ಜಾನ್ ಆಂಡರ್ಸನ್ ಅಲ್ಲಿ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದರು ಎನ್ನುತ್ತದೆ ಇತಿಹಾಸ. ಮಿಲಿಟರಿ ಸೇವೆಯಿಂದ ನಿವೃತ್ತರಾದ ನಂತರ, ಜೋಸೆಫ್ ಆಂಡರ್ಸನ್ ಆಸ್ಟ್ರೇಲಿಯಾಕ್ಕೆ ತೆರಳಿ ದೊಡ್ಡ ಆಸ್ತಿಯನ್ನು ಸ್ವಾಧೀನ ಪಡಿಸಿಕೊಂಡರು. ತನ್ನ ಸಹೋದರ ಸೇವೆ ಸಲ್ಲಿಸಿದ್ದ ನಗರದ ನೆನಪಿಗಾಗಿ ಅವರು ಆ ಆಸ್ತಿಗೆ ಮಂಗಳೂರು ಎಂದು ಹೆಸರಿಟ್ಟರು ಎಂದು ಹೇಳಲಾಗಿದೆ.
ಮಂಗಳೂರು ಹೆಸರಿನ ಪ್ರಯಾಣ ವಿಕ್ಟೋರಿಯಾಕ್ಕೆ ಮಾತ್ರ ನಿಲ್ಲಲಿಲ್ಲ. ಆಸ್ಟ್ರೇಲಿಯಾದ ಟಾಸ್ಮೇನಿಯಾ ದ್ವೀಪದಲ್ಲಿ ಮತ್ತೊಂದು ಮಂಗಳೂರು ಇದೆ. ಹೋಬಾರ್ಟ್‌ನಿಂದ ಉತ್ತರಕ್ಕೆ ಸುಮಾರು 32 ಕಿಲೋ ಮೀಟರ್ ದೂರದಲ್ಲಿರುವ ಮಿಡ್‌ಲ್ಯಾಂಡ್ ಹೆದ್ದಾರಿಯಲ್ಲಿರುವ ಟ್ಯಾಸ್ಮೇನಿಯಾದ ಮಂಗಳೂರು ಒಂದು ಸಣ್ಣ ಮತ್ತು ಗ್ರಾಮೀಣ ಪ್ರದೇಶವಾಗಿದೆ.