ನವದೆಹಲಿ,.ಜು.9: ಕಾರ್ಪೊರೇಟ್ ಉದ್ಯೋಗ ಎಂದಾಗ ಅಲ್ಲಿ ಕೆಲಸದ ಟಾರ್ಗೆಟ್, ರಜಾ ನಿಯಮಗಳು ಇರುವುದು ಸಾಮಾನ್ಯ. ಆದರೆ ಆರೋಗ್ಯ ತೊಂದರೆ ಎಂದಾಗ ರಜೆಯೂ ಅನಿವಾರ್ಯವಾಗಿರುತ್ತದೆ. ಆದರೆ ಇಲ್ಲೊಬ್ಬ ಉದ್ಯೋಗಿ ತಮಗೆ ಹುಷಾರಿಲ್ಲ ಎಂದು ಎಚ್ ಅರ್ ಗೆ ಸಂದೇಶ ಕಳುಹಿಸಿದಾಗ ಅವರ ಪ್ರತಿಕ್ರಿಯೆ ನೋಡಿ ಬೇಸರ ವ್ಯಕ್ತ ಪಡಿಸಿದ್ದಾರೆ. ದೆಹಲಿ ಮೂಲದ ಉದ್ಯೋಗಿಯೂ ಎಚ್ ಅರ್ ನ ರೆಸ್ಪಾನ್ಸ್ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಶೇರ್ (Viral News) ಮಾಡಿಕೊಂಡಿದ್ದು ಭಾರೀ ಚರ್ಚೆಯಾಗುತ್ತಿದೆ.
ಕೆಲಸದ ಕೆಲವು ಗಂಟೆಗಳ ಮೊದಲು ಅನಾರೋಗ್ಯ ರಜೆ ವರದಿ ಮಾಡುವುದು ಸಾಕು ಎಂದು ಉದ್ಯೋಗಿಯೊಬ್ಬರು ಭಾವಿಸಿದ್ದರು, ಆದರೆ HR ನ ಅನಿರೀಕ್ಷಿತ ಉತ್ತರ ಕುರಿತು ಅವರನ್ನು ಚಿಂತೆಗೀಡು ಮಾಡಿದವು. ತಮಗೆ ಎದುರಾದ ಈ ಅನುಭವವನ್ನು ರೆಡ್ಡಿಟ್ ನಲ್ಲಿ ಯುವಕ ಬರೆದುಕೊಂಡಿದ್ದಾರೆ.
ಉದ್ಯೋಗಿಯು ತನ್ನ ಕೆಲಸದ ಶಿಫ್ಟ್ ಆರಂಭವಾಗುವ 2-3 ಗಂಟೆಗಳ ಮುಂಚಿತವಾಗಿ ಹೆಚ್‌ಆರ್‌ಗೆ ಸಂದೇಶ ಕಳುಹಿಸಿ ತನಗೆ ಆರೋಗ್ಯ ಸಮಸ್ಯೆ ಇದೆ. ಇಂದು ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಸಂದೇಶ ಕಳುಹಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಎಚ್ ಅರ್ "ಹಲೋ, ದಯವಿಟ್ಟು ರಜೆಗೆ ಸರಿಯಾದ ಕಾರಣವನ್ನು ತಿಳಿಸಿಕೊಡಿ. ಸೋಮವಾರ ಮತ್ತು ಶನಿವಾರಗಳಂದು ರಜೆ ತೆಗೆದು ಕೊಳ್ಳುವುದನ್ನು ತಪ್ಪಿಸುವಂತೆ ನಾನು ಮೊದಲೇ ಹೇಳಿದ್ದೇನೆ. ಸೂಕ್ತ ಕಾರಣವಿಲ್ಲದೆ ಈ ರಜೆಯನ್ನು ನೀಡಲು ಸಾಧ್ಯವಿಲ್ಲ" ಎಂದು ಪ್ರತಿಕ್ರಿಯೆ ಬಂದಿದೆ.
ಈ ಸ್ಕ್ರೀನ್‌ಶಾಟ್ ಶೇರ್ ಮಾಡಿದ ಉದ್ಯೋಗಿ, ಇದು ಕಂಪನಿಯ ಸರಿಯಾದ ನಿಯಮವೇ? ಅಥವಾ ಕಂಪನಿಯ ಕೆಟ್ಟ ಆಡಳಿತದ ಲಕ್ಷಣವೇ ಎಂದು ನೆಟ್ಟಿಗರನ್ನು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ ಈ ಚಾಟ್ ಬೆನ್ನಲ್ಲೇ ಕಂಪನಿಯು ತನ್ನ ಎಲ್ಲಾ ಉದ್ಯೋಗಿಗಳಿಗೆ ಇಮೇಲ್ ಕಳುಹಿಸಿದೆ. ಅದು ಸೋಮವಾರ, ಶನಿವಾರ ಅಥವಾ ಸಾರ್ವಜನಿಕ ರಜೆಗಳ ಮೊದಲು ಹಾಗೂ ನಂತರದ ದಿನಗಳಲ್ಲಿ ತೀರಾ ಅತ್ಯಗತ್ಯವಿದ್ದರೆ ಮಾತ್ರ ರಜೆ ತೆಗೆದುಕೊಳ್ಳಬೇಕು, ರಜೆ ಮಾಡುವುದಾದರೆ ವೇತನ ಕಡಿತ ಮಾಡುವುದಾಗಿ ಘೋಷಣೆ ಮಾಡಿದೆ.
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಎರಡು ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿವೆ. ಬಳಕೆದಾರರೊಬ್ಬರು ಅನಾರೋಗ್ಯ ರಜೆ ಪ್ರತಿಯೊಂದು ಉದ್ಯೋಗಿಗೂ ಮುಖ್ಯ ವಾಗುತ್ತದೆ. ಇಂತಹ ಕಂಪನಿಯಲ್ಲಿ ಇರಲು ಸೂಕ್ತ ಆಯ್ಕೆ ಅಲ್ಲ ಎಂದು ನೀಡಿದ್ದಾರೆ. ಮತ್ತೊಬ್ಬರು ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಪ್ರತಿಯೊಂದು ಕಂಪನಿಯೂ ಇದನ್ನು ಮಾಡುತ್ತದೆ ಎಂದು ಬರೆದಿದ್ದಾರೆ..