ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸ್ಯಾಂಡ್‌ವಿಚ್ ಶಾಪ್‌ನಲ್ಲಿ ಹ್ಯೂಮನಾಯ್ಡ್ ರೊಬೋಟ್ ಮಸ್ತ್ ಸ್ಟೆಪ್: ಯಾವ ಡ್ಯಾನ್ಸರ್‌ಗೂ ಕಮ್ಮಿ ಇಲ್ಲ ಎಂದ ನೆಟ್ಟಿಗರು

Viral Video: ಮಧ್ಯ ಪ್ರದೇಶದ ಉಜ್ಜಯಿನಿಯಲ್ಲಿ ಹೊಸದಾಗಿ ಆರಂಭಗೊಂಡ ಸ್ಯಾಂಡ್‌ವಿಚ್ ಶಾಪ್‌ನ ಉದ್ಘಾಟನಾ ಸಮಾರಂಭದಲ್ಲಿ ರೊಬೋಟ್ ಡ್ಯಾನ್ಸ್‌ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದೆ. ಹೌದು, ಈ ಸ್ಯಾಂಡ್‌ವಿಚ್ ಅಂಗಡಿ ಉದ್ಘಾಟನೆಯಲ್ಲಿ ಗಮನ ಸೆಳೆದಿದ್ದು ಮುಖ್ಯ ಅತಿಥಿಗಳು, ಸೆಲೆಬ್ರಿಟಿ ಅಥವಾ ವಿಐಪಿಗಳಲ್ಲ. ಬದಲಾಗಿ ಹ್ಯೂಮನಾಯ್ಡ್ ರೊಬೋಟ್.

ಮಧ್ಯ ಪ್ರದೇಶದ ​ಉಜ್ಜಯಿನಿಯಲ್ಲಿ ಸ್ಯಾಂಡ್‌ವಿಚ್ ಶಾಪ್‌ನಲ್ಲಿ ಭರ್ಜರಿ ಸ್ಟೆಪ್ ಹಾಕಿದ ರೊಬೋಟ್

ಭೋಪಾಲ್‌, ಆ. 24: ತಂತ್ರಜ್ಞಾನ ಬಹಳಷ್ಟು ಮುಂದುವರಿದಿದೆ. ಕೈಯಲ್ಲೊಂದು ಮೊಬೈಲ್ ಇದ್ದರೆ ಸಾಕು ಇಡೀ ಪ್ರಪಂಚವನ್ನೇ ಸುತ್ತಬಹುದು. ಅದರಲ್ಲೂ ಆಧುನಿಕ ತಂತ್ರಜ್ಞಾನದ ವಿಸ್ಮಯ ಎನಿಸಿರುವ ಹ್ಯೂಮನಾಯ್ಡ್ ರೊಬೋಟ್ ಬಗ್ಗೆ ನೀವು ಕೇಳಿರಬಹುದು. ಮಾನವನಂತೆ ವಿನ್ಯಾಸ ಹೊಂದಿರುವ ಈ ರೊಬೋಟ್‌ಗಳು ನಮ್ಮ ಕಾರ್ಯ ಚಟುವಟಿಕೆಗಳನ್ನು ಸುಲಭಗೊಳಿಸುತ್ತವೆ. ಇದೀಗ ಮಧ್ಯ ಪ್ರದೇಶದ ​ಉಜ್ಜಯಿನಿಯಲ್ಲಿ ಹೊಸದಾಗಿ ಆರಂಭಗೊಂಡ ಸ್ಯಾಂಡ್‌ವಿಚ್ ಶಾಪ್‌ನ ಉದ್ಘಾಟನಾ ಸಮಾರಂಭದಲ್ಲಿ ರೊಬೋಟ್ ಡ್ಯಾನ್ಸ್‌ ಮಾಡುವ ಮೂಲಕ ಎಲ್ಲರ (Viral News) ಗಮನ ಸೆಳೆದಿದೆ.

ಈ ಸ್ಯಾಂಡ್‌ವಿಚ್ ಅಂಗಡಿ ಉದ್ಘಾಟನೆಯಲ್ಲಿ ಗಮನ ಸೆಳೆದಿದ್ದು ಮುಖ್ಯ ಅತಿಥಿಗಳು, ಸೆಲೆಬ್ರಿಟಿ ಅಥವಾ ವಿಐಪಿಗಳಲ್ಲ. ಬದಲಾಗಿ ರೊಬೋಟ್. ಅದು ಹಾಡಿಗೆ ಸಖತ್ ಆಗಿ ಡ್ಯಾನ್ಸ್ ಮಾಡುವ ಮೂಲಕ ಎಲ್ಲರನ್ನು ಅಚ್ಚರಿಗೆ ದೂಡಿದೆ. ಬಾಡಿಗಾರ್ಡ್‌ಗಳ ಮಧ್ಯದಲ್ಲಿ ನಿಂತು ಭರ್ಜರಿ ಸ್ಟೆಪ್ ಹಾಕಿರುವ ವಿಡಿಯೊ ವೈರಲ್ ಆಗಿದೆ.

ವಿಡಿಯೊ ನೋಡಿ:



ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದ ಉದ್ಘಾಟನಾ ಸಮಾರಂಭಕ್ಕೆ ಯುನಿಟ್ರೀ ಹುಮನಾಯ್ಡ್ ರೊಬೋಟ್ ಅನ್ನು ಆಕರ್ಷಣೆಗಾಗಿ ತರಲಾಗಿತ್ತು. ಸಶಸ್ತ್ರ ಅಂಗರಕ್ಷಕರ ಜತೆಗೆ ಬಂದಿದ್ದ ರೊಬೋಟ್‌ಗೆ ಸಂಪ್ರದಾಯದಂತೆ ಶಾಲು ಹಾಕಿ ಪೂಜೆ ಮಾಡಿ ಹಣೆಗೆ ಕುಂಕುಮ ಹಾಕಿ ಸ್ಯಾಂಡ್‌ವಿಚ್ ನೀಡಿ ಗೌರವಿಸಲಾಯಿತು.

ಸಾರ್ವಜನಿಕರ ಮುಂದೆಯೇ ನದಿಗೆ ಕಸ ಎಸೆದ ದಂಪತಿ

ಒಂದು ಹಂತದಲ್ಲಿ, ರೊಬೋಟ್ ಇತರರ ಮೇಲೆ ಕೈ ಬೀಸುವಂತೆ ತನ್ನ ಕೈಯನ್ನು ಮೇಲಕ್ಕೆತ್ತಿದೆ. ಅಲ್ಲಿದ್ದ ವ್ಯಕ್ತಿಯೊಬ್ಬರು ರೊಬೋಟ್ ತನಗೆ ಆಶೀರ್ವಾದ ಮಾಡಿದೆ ಎಂದು ಭಾವಿಸಿ ತಲೆ ಬಗ್ಗಿಸಿ ನಿಂತಿರುವ ದೃಶ್ಯ ನಗು ತರಿಸಿದೆ. ಆದರೆ ಕೊನೆಯಲ್ಲಿ ರೊಬೋಟ್‌ ಹಿನ್ನೆಲೆ ಸಂಗೀತಕ್ಕೆ ತಕ್ಕಂತೆ ಅದ್ಭುತವಾಗಿ ಡ್ಯಾನ್ಸ್ ಮಾಡಿದೆ. ರೊಬೋಟ್‌ನ ಸ್ಟೆಪ್ ಕಂಡು ನೆರೆದಿದ್ದ ಜನರು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.

ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬರು “ನಿಮಗೆ ಇದರೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ" ಎಂದಿದ್ದಾರೆ. ಇನ್ನೊಬ್ಬರು, ʼʼನನಗೆ ತಿಳಿದಿರುವ ಡ್ಯಾನ್ಸರ್‌ಗಿಂತ ಅದ್ಭುತವಾಗಿ ಇದು ನೃತ್ಯ ಮಾಡುತ್ತದೆ” ಎಂದಿದ್ದಾರೆ.