ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವ್ಯಾಲೆಂಟೈನ್ಸ್ ಡೇ ಶಾಪಿಂಗ್ ವೇಳೆ ಸಿಕ್ಕಿಬಿದ್ದ ಪತಿರಾಯ: ಮಾಲ್‌ನಲ್ಲಿ ಜುಟ್ಟು ಹಿಡಿದು ಕಿತ್ತಾಡಿದ ಪ್ರೇಯಸಿ- ಪತ್ನಿ, ವಿಡಿಯೋ ನೋಡಿ

Viral Video: ಹೆಚ್ಚಿನ ಯುವಕ- ಯುವತಿಯರು ತಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆ ನೀಡಲು ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ. ಆದರೆ ಇಲ್ಲೊಬ್ಬ ಪ್ರೇಮಿಗಳ ದಿನಚರಣೆ ಪ್ರಯುಕ್ತ ಪ್ರೇಯಸಿಯನ್ನು ಮಾಲ್‌ಗೆ ಕರೆತಂದಿದ್ದಾನೆ. ಆದರೆ ಅಲ್ಲಿಯೇ ಆತನ ಪತ್ನಿ ಎದುರಾದಾಗ ಇಬ್ಬರ ನಡುವೆ ವಾಗ್ವಾದ ಉಂಟಾಗಿದ್ದು ದೊಡ್ಡ ಹೈಡ್ರಾಮಾವೇ ನಡೆದಿದೆ. ಸದ್ಯ ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಶಾಪಿಂಗ್ ಮಾಲ್ ನಲ್ಲಿ ಪ್ರೇಯಸಿಯ ಜೊತೆ ಸಿಕ್ಕಿಬಿದ್ದ ಪತಿ

ಸೋನಭದ್ರ,ಫೆ.10: ಫೆಬ್ರವರಿ 14ರಂದು ಆಚರಿಸಲಾಗುವ ಪ್ರೇಮಿಗಳ ದಿನಾಚರಣೆಯ ಸಿದ್ಧತೆ ಜೋರಾಗಿಯೇ ನಡೆಯುತ್ತಿದೆ. ಹೆಚ್ಚಿನ ಯುವಕ- ಯುವತಿಯರು ತಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆ ನೀಡಲು ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ. ಆದರೆ ಇಲ್ಲೊಬ್ಬ ಪ್ರೇಮಿಗಳ ದಿನಚರಣೆ ಪ್ರಯುಕ್ತ ಪ್ರೇಯಸಿಯನ್ನು ಮಾಲ್‌ಗೆ ಕರೆತಂದಿದ್ದಾನೆ. ಆದರೆ ಅಲ್ಲಿಯೇ ಆತನ ಪತ್ನಿ ಎದುರಾದಾಗಿದ್ದು ಹೈಡ್ರಾಮಾವೇ ನಡೆದಿದೆ. ಪ್ರೇಯಸಿ ಹಾಗೂ ಪತ್ನಿ ನಡುವೆ ಇಬ್ಬರ ನಡುವೆ ವಾಗ್ವಾದ ಉಂಟಾಗಿ ಕೊನೆಗೆ ಇಬ್ಬರೂ ಹೊಡೆದಾಡಿಕೊಂಡಿದ್ದಾರೆ. ಸದ್ಯ ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ಉತ್ತರ ಪ್ರದೇಶದ ಸೋನಭದ್ರದ ಸಿವಿಲ್ ಲೈನ್ಸ್ ರಸ್ತೆಯಲ್ಲಿರುವ ಶಾಪಿಂಗ್ ಮಾಲ್‌ನಲ್ಲಿ ಈ ಘಟನೆ ನಡೆದಿದೆ. ಇಬ್ಬರು ಮಹಿಳೆ ಯರ ನಡುವಿನ ವಾಗ್ವಾದದ ವಿಡಿಯೊ‌ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಾಹಿತಿ ಪ್ರಕಾರ, ಮುಂಬರುವ ಪ್ರೇಮಿಗಳ ದಿನದಂದು ಒಬ್ಬ ವ್ಯಕ್ತಿ ತನ್ನ ಗೆಳತಿ ಯೊಂದಿಗೆ ಮಾಲ್‌ನಲ್ಲಿ ಶಾಪಿಂಗ್‌ಗೆ ಹೋಗಿದ್ದಾಗ ಅವನ ಹೆಂಡತಿ ಅನಿರೀಕ್ಷಿತವಾಗಿ ಅದೇ ಸ್ಥಳಕ್ಕೆ ಬಂದಿದ್ದಾಳೆ.‌ ತನ್ನ ಗಂಡ ಇನ್ನೊಬ್ಬ ಮಹಿಳೆಯೊಂದಿಗೆ ಇರುವುದನ್ನು ನೋಡಿದ ಪತ್ನಿ ಸಿಟ್ಟಾಗಿದ್ದಾಳೆ.

ವಿಡಿಯೋ ನೋಡಿ:



ವ್ಯಾಲೆಂಟೈನ್ಸ್ ಡೇ ಹತ್ತಿರವಿರುವ ಕಾರಣ ಇಬ್ಬರೂ ಶಾಪಿಂಗ್‌ಗಾಗಿ ಬಂದಿದ್ದರು. ಆದರೆ, ಅದೇ ಸಮಯದಲ್ಲಿ ಆತನ ಪತ್ನಿ ಕೂಡ ಮಾಲ್‌ಗೆ ಬಂದಿದ್ದರಿಂದ ಪ್ಲಾನ್ ತಲೆಕೆಳಗಾಗಿದೆ.‌ ಪತ್ನಿ ನೋಡಿದ್ದೇ ತಡ, ಪತಿ ಅಲ್ಲಿಂದ ಮೆಲ್ಲಗೆ ಪರಾರಿಯಾಗಿದ್ದಾನೆ. ಇದರಿಂದ ಆಕ್ರೋಶಗೊಂಡ ಪತ್ನಿ, ಪತಿಯ ಜೊತೆಗಿದ್ದ ಮಹಿಳೆಯನ್ನು ಹಿಡಿದು ಪ್ರಶ್ನಿಸಿದ್ದು ಈ ಜಗಳ ತಾರಕಕ್ಕೇರಿದೆ.

Viral Video: ಛೇ ಎಂತಾ ಅಮಾನವೀಯ ಕೃತ್ಯ: ಭಾರಿ ತೂಕದ ಪಾರ್ಸೆಲ್ ಹೊತ್ತು ಹೈರಾಣಾದ ಡೆಲಿವರಿ ಬಾಯ್!

ಸುಮಾರು 15 ನಿಮಿಷಗಳ ಕಾಲ ಇಬ್ಬರು ಮಹಿಳೆಯರು ಮಾಲ್‌ ನೊಳಗೆ ಕಿತ್ತಾಡಿದ್ದಾರೆ. ಘರ್ಷಣೆಯ ಸಮಯದಲ್ಲಿ ಇಬ್ಬರು ಮಹಿಳೆಯರು ಕೂಗಾಡುವುದು, ಜುಟ್ಟು ಹಿಡಿದು ಎಳೆದಾಡುತ್ತಾ, ಒಬ್ಬರಿಗೊಬ್ಬರು ಕಚ್ಚುವ ಮಟ್ಟಕ್ಕೆ ಹೋಗಿದ್ದಾರೆ. ಬಳಿಕ ಮಾಲ್‌ಗೆ ಭೇಟಿ ನೀಡಿದವರು ಮತ್ತು ಮಹಿಳಾ ಸಿಬ್ಬಂದಿ ಮಧ್ಯಪ್ರವೇಶಿಸಿ ಇಬ್ಬರನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು.ಸದ್ಯ ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಪೊಲೀಸರು ದಂಪತಿಯನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ಪತ್ನಿಯ ದೂರಿನ ಮೇರೆಗೆ ಪತಿಗೆ ಎಚ್ಚರಿಕೆ ಕೂಡ ನೀಡಿದ್ದಾರೆ.