Viral News: "ಬೀದಿ ನಾಯಿ ತಂದು ಹಾಸಿಗೆ ಮೇಲಿಡುತ್ತಾಳೆ"; ಪತ್ನಿಯ ಕಾಟಕ್ಕೆ ಬೇಸತ್ತು ವಿಚ್ಛೇದನ ಕೋರಿದ ಪತಿ!
Viral News: ಮಹಿಳೆಯೊಬ್ಬರು ಅತಿಯಾಗಿ ನಾಯಿಯ ಮೇಲೆ ಪ್ರೀತಿ ತೋರಿಸಿದ್ದು ಆಕೆಯ ಪತಿ ಇದೇ ಕಾರಣಕ್ಕೆ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದ ಘಟನೆ ಗುಜರಾತ್‌ನಲ್ಲಿ ನಡೆದಿದೆ. ತನ್ನ ಪತ್ನಿಗೆ ಬೀದಿ ನಾಯಿ ಗಳ ಮೇಲಿನ ಗೀಳು ವೈವಾಹಿಕ ಜೀವನದ ಮೇಲೆ ತೀವ್ರ ಪರಿಣಾಮ ಬೀರಿದೆ. ತನ್ನ ಪತ್ನಿ ಬೀದಿ ನಾಯಿ ಗಳನ್ನು ತಮ್ಮ ಮನೆಗೆ ಕರೆತಂದು ಅವುಗಳ ಜೊತೆಗೆ ನಾನು ಹಾಸಿಗೆ ಹಂಚಿಕೊಳ್ಳುವಂತೆ ಒತ್ತಾಯಿ ಸುತ್ತಾಳೆ. ಆಕೆಯ ಈ ಅಭ್ಯಾಸ ಕ್ರಮವು ನನಗೆ ಮಾನಸಿಕ ನೆಮ್ಮದಿ ಹಾಳು ಮಾಡಿದೆ. ಹೀಗಾಗಿ ವಿಚ್ಛೇದನ ನೀಡುವಂತೆ ಹೈಕೋರ್ಟ್ ನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದಾರೆ.
ಬೀದಿ ನಾಯಿಯಿಂದಾಗಿ ಪತ್ನಿಗೆ ವಿಚ್ಛೇದನ ಕೋರಿದ ಪತಿ -
ನವದೆಹಲಿ: ಇತ್ತೀಚಿನ ದಿನದಲ್ಲಿ ವಿಚ್ಛೇದನ (Divorce) ಪಡೆಯುವ ಪ್ರಮಾಣ ಹೆಚ್ಚಾಗಿದೆ. ಸಣ್ಣ ಪುಟ್ಟ ಕಾರಣಕ್ಕೆಲ್ಲ ವೈಮನಸ್ಸು ಬಂದು ಬಳಿಕ ದಾಂಪತ್ಯ ಜೀವನವು ವಿಚ್ಛೇದನದ ಮೂಲಕ ಕೊನೆಗೊಂಡಿದ್ದು ಇದೆ. ಅಂತೆಯೇ ಮಹಿಳೆಯೊಬ್ಬರು ಅತಿಯಾಗಿ ನಾಯಿಯ ಮೇಲೆ ಪ್ರೀತಿ ತೋರಿಸಿದ್ದು ಆಕೆಯ ಪತಿ ಇದೇ ಕಾರಣಕ್ಕೆ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದ ಘಟನೆ ಗುಜರಾತ್‌ನಲ್ಲಿ ನಡೆದಿದೆ. ತನ್ನ ಪತ್ನಿಗೆ ಬೀದಿ ನಾಯಿಗಳ (Street Dogs) ಮೇಲಿನ ಗೀಳು ವೈವಾಹಿಕ ಜೀವನದ ಮೇಲೆ ತೀವ್ರ ಪರಿಣಾಮ ಬೀರಿದೆ. ತನ್ನ ಪತ್ನಿ ಬೀದಿ ನಾಯಿಗಳನ್ನು ತಮ್ಮ ಮನೆಗೆ ಕರೆತಂದು ಅವುಗಳ ಜೊತೆಗೆ ನಾನು ನಿದ್ರಿಸುವಂತೆ ಒತ್ತಾಯಿಸುತ್ತಾಳೆ. ಆಕೆಯ ಈ ಅಭ್ಯಾಸ ಕ್ರಮವು ನನಗೆ ಮಾನಸಿಕ ನೆಮ್ಮದಿ ಹಾಳು ಮಾಡಿದೆ. ಹೀಗಾಗಿ ವಿಚ್ಛೇದನ ನೀಡುವಂತೆ ಹೈಕೋರ್ಟ್ ನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದಾರೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದೆ.
ಪತಿಯೂ ವಿಚ್ಛೇದನಕ್ಕೆ ಅನೇಕ ಕಾರಣವನ್ನು ತಿಳಿಸಿದ್ದಾರೆ. ತನ್ನ ಪತ್ನಿ ಅಪಾರ್ಟ್‌ಮೆಂಟ್‌ಗೆ ಬೀದಿ ನಾಯಿಯನ್ನು ತರಲು ವಸತಿ ಸಂಘದಿಂದ ತೀವ್ರ ಆಕ್ಷೇಪಣೆ ಇತ್ತು. ಅದರ ಹೊರತಾಗಿಯೂ ಆಕೆ ನಾಯಿಯನ್ನು ತಂದಿದ್ದಾಳೆ. ಆಗಲಿಂದಲೂ ದಾಂಪತ್ಯ ಜೀವನಕ್ಕೆ ಸಮಸ್ಯೆ ಉಂಟಾಗಿದೆ. ನಾಯಿ ಗಳು ತನಗೆ ಮತ್ತು ಇತರ ನಿವಾಸಿಗಳಿಗೆ ಅಪಾಯವನ್ನುಂಟುಮಾಡಿದೆ. ಜೊತೆಗೆ ಸಾಕುಪ್ರಾಣಿಯನ್ನು ಸಾಕಲು ಆರ್ಥಿಕ ಸಂಕಷ್ಟವಾಗಿದ್ದು ಕಷ್ಟಕರವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಮನೆಗೆ ನಾಯಿಗಳನ್ನು ತಂದಿದ್ದರಿಂದ ಮನೆಯೆಲ್ಲ ಗಲೀಜಾಗಿತ್ತು. ನೆರೆಹೊರೆಯವರು ದೂರು ನೀಡುತ್ತಿದ್ದರು ನಾಯಿಗಳು ಆಗಾಗ್ಗೆ ನನ್ನ ಮೇಲೆ ದಾಳಿ ಮಾಡಿವೆ, ಅನೇಕ ಸಲ ಕಚ್ಚಿ ನೋವನ್ನು ಅನುಭವಿಸಿದ್ದೇನೆ. ಕೆಲವೊಮ್ಮೆ ನಾಯಿಗಳು ನಾವು ಮಲಗುವ ಹಾಸಿಗೆಯಲ್ಲಿಯೇ ಬಂದು ಮಲ ಗುತ್ತಿತ್ತು. ನಾನು ಅದನ್ನು ಬೆಡ್ ರೂಂ ನಿಂದಾದರೂ ದೂರ ಇಡಲು ಹೇಳಿದರೆ ಅದಕ್ಕೆ ನನ್ನ ಮೇಲೆ ಆಕೆ ಸಿಟ್ಟಾಗುತ್ತಿದ್ದಳು ಎಂದು ಅವರು ಉಲ್ಲೇಖ ಮಾಡಿದ್ದಾರೆ
ತನ್ನ ಪತ್ನಿ ಬಹಿರಂಗವಾಗಿ ತನ್ನ ಮೇಲೆ ವಿವಾಹೇತರ ಸಂಬಂಧದ ಆರೋಪ ಹೊರಿಸಿದ್ದಾಳೆ. ಹೀಗಾಗಿ ನನ್ನ ಸಹೋದ್ಯೋಗಿಗ ಳಿಂದಲೂ ನಾನು ಮುಜುಗರದ ನಿಂಧನೆ ಮಾತುಗಳನ್ನು ಕೇಳ ಬೇಕಾಯಿತು. ಇದರಿಂದಾಗಿ ಮಾನಸಿಕ ಒತ್ತಡ ಉಂಟಾಗಿದೆ. ಮಧುಮೇಹ ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೂ ಕೂಡ ಕಾರಣವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಇದನ್ನು ಓದಿ:Viral News: ಧಾರ್ಮಿಕ ಸಾಮರಸ್ಯ ಎಂದರೆ ಇದೇನೆ; ಮುಸ್ಲಿಂ ಕುಟುಂಬದಿಂದ ಹಿಂದೂ ದೇವಸ್ಥಾನಕ್ಕೆ ಭೂಮಿ ದಾನ
ಆದರೆ ಪತ್ನಿ ಆರೋಪಗಳನ್ನು ನಿರಾಕರಿಸಿದ್ದು, ತಾನು ಎಂದಿಗೂ ಬೀದಿ ನಾಯಿಗಳನ್ನು ಮನೆಗೆ ಕರೆತಂದಿಲ್ಲ. ತನ್ನ ಪತಿ ಪ್ರಾಣಿಗಳನ್ನು ನೋಡಿಕೊಳ್ಳುವ ಟ್ರಸ್ಟ್‌ನಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ನಾಯಿ ಸಾಕುವ ವಿಚಾರಕ್ಕೆ ಯಾವುದೆ ಜಗಳವಾಗಿಲ್ಲ ಎಂದಿ ದ್ದಾರೆ. ನಮ್ಮ ಮನೆಯಲ್ಲಿ ನಾಯಿ ಸಾಕಲು ಅವರಿಗೂ ಇಷ್ಟ ಇತ್ತು ಅವರಿಗೆ ಆರೋಗ್ಯ ಸಮಸ್ಯೆ ಬರಲಿಲ್ಲ ಎಂದು ಪತಿಯ ಎಲ್ಲ ದೂರನ್ನು ನಿರಾಕರಿಸಿದ್ದಾರೆ.
2001 ರಲ್ಲಿ ಭೇಟಿಯಾಗಿ 2006 ರಲ್ಲಿ ವಿವಾಹವಾದ ಈ ದಂಪತಿಗಳು ವಿಚ್ಛೇದನ ವಿಚಾರಕ್ಕೆ ಅನೇಕ ಸಲ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ.ಪತಿ 2012 ರಲ್ಲಿ ಬೆಂಗಳೂರಿನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ದ್ದರು, ಬಳಿಕ 2016 ರಲ್ಲಿ ಪ್ರಕರಣದಲ್ಲಿ ಇರುವ ಸಮಸ್ಯೆಗಳನ್ನು ಉಲ್ಲೇಖಿಸಿ ವಜಾ ಮಾಡಿತ್ತು. ಫೆಬ್ರವರಿ 2024 ರಲ್ಲಿ ಅಹಮದಾಬಾದ್‌ನ ಕೌಟುಂಬಿಕ ನ್ಯಾಯಾಲಯವು ಕೂಡ ಪತ್ನಿಗೆ ನೋಟಿಸ್ ಜಾರಿ ಮಾಡಿ ಪತಿಯ ಅರ್ಜಿಯನ್ನು ತಿರಸ್ಕರಿಸಿತು. ಹೀಗಾಗಿ ಪತಿಯು ಹೈಕೋರ್ಟ್‌ನಲ್ಲಿ ಮೇಲ್ಮ ನವಿ ಸಲ್ಲಿಸಿದ್ದಾರೆ. ಗುಜರಾತ್ ಹೈಕೋರ್ಟ್ ಈ ಪ್ರಕರಣವನ್ನು ಡಿಸೆಂಬರ್ 1 ರಂದು ವಿಚಾರಣೆ ನಡೆಸಲಿದೆ.