ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕ್ರಿಕೆಟ್ ಪಂದ್ಯದ ನಡುವೆ ದಂಪತಿಯ ಕಿತ್ತಾಟ: ಹೆಂಡತಿ ಸೀಟು ಬಿಟ್ಟೊದ್ರು ಪತಿ ಮ್ಯಾಚ್ ನೋಡುವುದರಲ್ಲಿ ಬ್ಯುಸಿ!

Viral Video; ಐಪಿಎಲ್‌ ಪಂದ್ಯದ ವೇಳೆ ಮುದ್ದಾದ ಜೋಡಿಯೊಂದು ಪ್ರೇಕ್ಷಕರ ಗ್ಯಾಲರಿಯಲ್ಲೇ ಕಿತ್ತಾಡಿಕೊಂಡ ಅಪರೂಪದ ವಿಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ದಂಪತಿಗಳಿಬ್ಬರ ನಡುವೆ ಸಣ್ಣ ವಿಚಾರಕ್ಕೆ ಮನಸ್ತಾಪ ಉಂಟಾಗಿದ್ದು ಪತ್ನಿ ಸೀಟಿನಿಂದ ಹೊರ ನಡೆ ದಿದ್ದಾರೆ..ಆದರೆ ಪತಿ ಮಾತ್ರ ತನ್ನ ಪತ್ನಿಯನ್ನು ಸಮಾಧಾನ ಪಡಿಸದೆ ಮ್ಯಾಚ್ ನೋಡುವುದರಲ್ಲೇ ಬ್ಯುಸಿ ಆಗಿದ್ದಾರೆ. ಸದ್ಯ ಈ ವಿಡಿಯೊ ಹೆಚ್ಚಿನವರ ಗಮನ ಸೆಳೆದಿದೆ.

ಕ್ರಿಕೆಟ್ ಪಂದ್ಯದ ನಡುವೆ ದಂಪತಿಗಳ ಕಿತ್ತಾಟ

ಕೋಲ್ಕತಾ, ಎ.13: ಲಖನೌ ಸೂಪರ್ ಜೈಂಟ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಐಪಿಎಲ್‌ ಪಂದ್ಯದ ವೇಳೆ ಮುದ್ದಾದ ಜೋಡಿಯೊಂದು ಪ್ರೇಕ್ಷಕರ ಗ್ಯಾಲರಿಯಲ್ಲೇ ಕಿತ್ತಾಡಿಕೊಂಡ ಅಪರೂಪದ ವಿಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದೆ. ದಂಪತಿಗಳಿಬ್ಬರ ನಡುವೆ ಸಣ್ಣ ವಿಚಾರಕ್ಕೆ ಮನಸ್ತಾಪ ಉಂಟಾಗಿದ್ದು ಪತ್ನಿ ಸೀಟಿನಿಂದ ಹೊರ ನಡೆದಿದ್ದಾರೆ..ಆದರೆ ಪತಿ ಮಾತ್ರ ತನ್ನ ಪತ್ನಿಯನ್ನು ಸಮಾಧಾನ ಪಡಿಸದೆ ಮ್ಯಾಚ್ ನೋಡುವುದರಲ್ಲೇ ಬ್ಯುಸಿ ಆಗಿದ್ದಾರೆ. ಸದ್ಯ ಈ ವಿಡಿಯೊ ಹೆಚ್ಚಿನವರ ಗಮನ ಸೆಳೆದಿದೆ.

ಈ ವಿಡಿಯೋದಲ್ಲಿ ಯುವಕ ಮತ್ತು ಯುವತಿ (ಬಹುಶಃ ಗಂಡ ಹೆಂಡತಿ ಅಥವಾ ಪ್ರೇಯಸಿ- ಪ್ರಿಯಕರ) ಪೆವಿನಿಯನ್​ ನಲ್ಲಿ ಯಾವುದೋ ವಿಷಯಕ್ಕೆ ಮನಸ್ಥಾಪ ಮಾಡಿಕೊಂಡು ಪರಸ್ಪರ ಬೈದುಕೊಳ್ಳುವುದನ್ನು ನೋಡಬಹುದಾಗಿದೆ. ಸಿಟ್ಟಿನಲ್ಲಿ ಪತ್ನಿ‌ ಸ್ಟೇಡಿಯಂನಿಂದ ಹೊರ ಹೋಗುವಂತೆ ಕಂಡು ಬರುತ್ತದೆ. ಆದರೆ ಪತಿ ಮಾತ್ರ ಅಲ್ಲೇ ನಿಂತು ಮ್ಯಾಚ್ ವೀಕ್ಷಿಸಲು ಮುಂದಾಗುತ್ತಾನೆ. ಸ್ವಲ್ಪ ಸಮಯದ ಬಳಿಕ ಆಕೆಯೆ ಸಮಾಧಾನಗೊಂಡು ವಾಪಾಸ್ ಬಂದು ಗೆಳೆಯನಿಗೆ ಸಾಥ್ ಕೊಡುತ್ತಾಳೆ.

ವಿಡಿಯೋ ನೋಡಿ:



ಸಾಮಾನ್ಯವಾಗಿ ದಂಪತಿಗಳ ನಡುವೆ ಜಗಳ ಆದಾಗ ಪತಿ ಹೆಂಡತಿಯನ್ನು ಸಮಾಧಾನ ಮಾಡಲು ಹಿಂದೆ ಹೋಗುತ್ತಾರೆ. ಆದರೆ ಇಲ್ಲಿ ಪತಿ ತನಗೆ ಮ್ಯಾಚ್ ಮುಖ್ಯ ಅನ್ನುವಂತೆ ಕ್ರಿಕೆಟ್ ವೀಕ್ಷಣೆ ಮಾಡುವುದರಲ್ಲಿ ಬ್ಯುಸಿ ಆಗಿದ್ದಾರೆ. ಈ ದಂಪತಿಗಳ ಮುದ್ದಾದ ಮುನಿಸಿನ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

Viral News: ನಾಯಿಯ ಪಾಲನೆಗೆ ತಿಂಗಳಿಗೆ 15,000 ರೂ. ಖರ್ಚು! ಬೆಂಗಳೂರಿನ ದಂಪತಿ ಶ್ವಾನ ಪ್ರೇಮ

ಈ ವಿಡಿಯೊ ನೋಡಿದ ನೆಟ್ಟಿಗರು ಹಲವು ರೀತಿಯ ಹಾಸ್ಯಮಯ ಕಮೆಂಟ್‌ ಮಾಡಿದ್ದಾರೆ. ನೆಟ್ಟಿಗರೊಬ್ಬರು, 'ಇದೇ ಕಾರಣಕ್ಕೆ ನಾನು ನನ್ನ ಹುಡುಗಿಯನ್ನು ಮ್ಯಾಚ್​ ನೋಡಲು ಕರೆದೊಯ್ಯಲ್ಲ' ಎಂದು ತಮಾಷೆ ಮಾಡಿದ್ದಾರೆ. ಮತ್ತೊಬ್ಬರು ಕ್ರಿಕೆಟ್‌ ಪೈಪೋಟಿ ಮಧ್ಯೆ ಪ್ರೇಮಿಗಳ ಮುದ್ದಾದ ಕಿತ್ತಾಟವನ್ನು ನೋಡುವಂತಾಯಿತು ಎಂದು ಬರೆದಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಕೆಕೆಆರ್‌ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 181 ರನ್‌ ಬಾರಿಸಿತು. ಗುರಿಯನ್ನು ಬೆನ್ನಟ್ಟಿದ ಲಖನೌ ತಂಡವು 128 ರನ್‌ಗಳಿಗೆ ಏಳು ವಿಕೆಟ್‌ ಗಳನ್ನು ಕಳೆದು ಸೋಲಿನ ಹಾದಿಯಲ್ಲಿತ್ತು. ಈ ಹಂತದಲ್ಲಿ ಮುಕುಲ್‌ ಸ್ಮರಣೀಯ ಇನಿಂಗ್ಸ್‌ ಕಟ್ಟಿದರು. ಅಸಾಮಾನ್ಯ ಬ್ಯಾಟಿಂಗ್‌ ಮೂಲಕ ಅರ್ಧಶತಕ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.