ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಹುಡುಗ- ಹುಡುಗಿ ಜೊತೆಯಾಗಿ ನಿಂತರೆ ವಿಶ್ವವಿದ್ಯಾಲಯದಲ್ಲೇ ಮದುವೆ! ವೈರಲ್‌ ಆಗ್ತಿದೆ ಕಾಲೇಜು ಹೊರಡಿಸಿದ ಸುತ್ತೋಲೆ

‌Viral News: ಪಾಕಿಸ್ತಾನದ ವಿಶ್ವವಿದ್ಯಾಲಯವೊಂದು ರಂಜಾನ್ ಹಬ್ಬದ ಪ್ರಯುಕ್ತ ವಿದ್ಯಾರ್ಥಿಗಳಿಗಾಗಿ ವಿಶೇಷ ನೋಟೀಸ್ ವೊಂದನ್ನು ಹೊರಡಿಸಿದೆ. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕ್ಯಾಂಪಸ್ ಒಳಗೆ ಹುಡುಗರು ಮತ್ತು ಹುಡುಗಿಯರು ಒಟ್ಟಿಗೆ ನಿಲ್ಲುವುದು ಕಂಡು ಬಂದರೆ ಅಂತಹ ಜೋಡಿಗೆ ತಕ್ಷಣ ಮದುವೆ ಮಾಡಿಸುವುದಾಗಿ ಹೇಳಿಕೊಂಡಿದೆ.‌ ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪಾಕಿಸ್ತಾನ ವಿಶ್ವವಿದ್ಯಾಲಯದ ಪೋಸ್ಟ್ ವೈರಲ್

ನವದೆಹಲಿ, ಫೆ.25: ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ ಆರಂಭವಾಗಿದ್ದು ದೇಶದೆಲ್ಲೆಡೆ ಆಚರಣೆ ಜೋರಾಗಿಯೇ ನಡೆಯುತ್ತಿದೆ. ಈ ತಿಂಗಳಲ್ಲಿ ಮುಸ್ಲಿಮರು ಮುಂಜಾನೆಯಿಂದ ಸಂಜೆಯವರೆಗೆ ಉಪವಾಸ ಮಾಡಿ ದಾನ-ಧರ್ಮಗಳನ್ನು ಮಾಡುವ ಸಂಪ್ರದಾಯ ಇದೆ. ಈ ಆಚರಣೆಯ ನಡುವೆ ‌ಪಾಕಿಸ್ತಾನದ ವಿಶ್ವವಿದ್ಯಾಲಯವೊಂದು ರಂಜಾನ್ ಹಬ್ಬದ ಪ್ರಯುಕ್ತ ವಿದ್ಯಾರ್ಥಿ ಗಳಿಗಾಗಿ ವಿಶೇಷ ನೋಟೀಸ್ ವೊಂದನ್ನು ಹೊರಡಿಸಿದೆ. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕ್ಯಾಂಪಸ್ ಒಳಗೆ ಹುಡುಗರು ಮತ್ತು ಹುಡುಗಿಯರು ಒಟ್ಟಿಗೆ ನಿಲ್ಲುವುದು ಕಂಡು ಬಂದರೆ ಅಂತಹ ಜೋಡಿಗೆ ತಕ್ಷಣ ಮದುವೆ ಮಾಡಿಸುವುದಾಗಿ ಹೇಳಿಕೊಂಡಿದೆ.‌ ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ (Viral News) ವೈರಲ್ ಆಗಿದೆ.

ಪ್ರಿಯ ವಿದ್ಯಾರ್ಥಿಗಳೇ, ಪವಿತ್ರ ರಂಜಾನ್ ತಿಂಗಳಲ್ಲಿ, ಹುಡುಗ ಮತ್ತು ಹುಡುಗಿ ಒಟ್ಟಿಗೆ ನಿಲ್ಲು ವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಇಲ್ಲಿ ತಿಳಿಸಲಾಗಿದೆ. "ಯಾವುದೇ ಹುಡುಗ ಮತ್ತು ಹುಡುಗಿ ಒಟ್ಟಿಗೆ ನಿಂತಿರುವುದು ಕಂಡುಬಂದರೆ, ಅವರ ಮದುವೆಗೆ ತಕ್ಷಣವೇ ವ್ಯವಸ್ಥೆ ಮಾಡಲಾಗುತ್ತದೆ" ಎಂದು ನೋಟಿಸ್ ನಲ್ಲಿ ಬರೆಯಲಾಗಿದೆ .ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿರುವ ಈ‌ ಪೋಸ್ಟ್‌ನಲ್ಲಿ 'ಹಮ್ದರ್ದ್ ಶಾಲೆಯ ಹೆಸರಿದೆ.

ವಿಡಿಯೋ ನೋಡಿ:



ನಮ್ಮ ವಿಶ್ವವಿದ್ಯಾಲಯವು ಧಾರ್ಮಿಕವಾಗಿ ಪ್ರಸಿದ್ಧಿ ಆಗಿರುವುದರಿಂದ ನಮಗೆ ಈ ಅಧಿಸೂಚನೆ ಬಂದಿದೆ ಎಂದು ಹೇಳುವ ಉಲ್ಲೇಖದೊಂದಿಗೆ ಪೋಸ್ಟ್ ವೈರಲ್ ಆಗಿದೆ‌ ಹುಡುಗ ಹುಡುಗಿ ಒಟ್ಟಿಗೆ ನಿಂತರೆ ವಿಶ್ವವಿದ್ಯಾಲಯವೇ ಮದುವೆ ಮಾಡಿಸುತ್ತದೆ. ಆದರೆ ಮದುವೆಯ ನಂತರದ ಔತಣಕೂಟದ (ವಲಿಮಾ) ಖರ್ಚನ್ನು ವಿದ್ಯಾರ್ಥಿಗಳೇ ಭರಿಸಬೇಕು ಎಂದು ಹೇಳಲಾಗಿದೆ. ಅದೇ ರೀತಿ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಪಾವಿತ್ರ್ಯವನ್ನು ಗೌರವಿಸಲು ಸೂಚಿಸಲಾಗಿದೆ.

Viral Video: ಹಿಮದ ಕಣಿವೆಯ ನಡುವೆ ಹಾದು ಹೋದ ವಂದೇ ಭಾರತ್: ಕಾಶ್ಮೀರದ ಎದುರು ಸ್ವಿಟ್ಜರ್ಲೆಂಡ್ ಶೂನ್ಯ ಎಂದ ನೆಟ್ಟಿಗರು

ಈ ರೀಲ್ ಕೆಲವೇ ದಿನಗಳಲ್ಲಿ 40 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದ್ದು ನೆಟ್ಟಿಗರು ಇದನ್ನು 'ಎಚ್ಚರಿಕೆ' ಎನ್ನುವುದಕ್ಕಿಂತ ಮಕ್ಕಳಿಗೆ 'ಅವಕಾಶ' ಎಂಬಂತೆ ತಮಾಷೆ ಮಾಡಿದ್ದಾರೆ. ನೆಟ್ಟಿಗರೊಬ್ಬರು ಅವಕಾಶ ಇದ್ದರೆ ನಾನು ಈ ವಿಶ್ವವಿದ್ಯಾಲಯಕ್ಕೆ ಸೇರುತ್ತಿದ್ದೆ ಎಂದು ಬರೆದು ಕೊಂಡಿದ್ದಾರೆ. ಮತ್ತೊಬ್ಬರು "ಹಮ್ದರ್ದ್ ವಿಶ್ವವಿದ್ಯಾಲಯವು ನಿಜವಾಗಿಯೂ ಅದರ ಹೆಸರಿಗೆ ತಕ್ಕಂತೆ ಜೀವಿಸುತ್ತಿದೆ" ಎಂದು ತಮಾಷೆ ಮಾಡಿದ್ದಾರೆ. ಆದರೆ ಈ ನೋಟಿಸ್ ನಕಲಿ ಎಂದು ಹೇಳಲಾಗುತ್ತಿದೆ.‌ಹಮ್ದರ್ದ್ ವಿಶ್ವವಿದ್ಯಾಲಯದ ವೆಬ್‌ಸೈಟ್ ನಲ್ಲಿ ಇಂತಹ ಯಾವುದೇ ಪ್ರಕಟಣೆ ಹೊರಬಿದ್ದಿಲ್ಲ.