ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

"MBA ಓದಲು ಬಂದೆ; ಜಿಂಕೆಗಳ ಸ್ನೇಹ ಮಾಡಿ ಹೊರಟೆ": ಐಐಟಿ ವಿದ್ಯಾರ್ಥಿನಿಯ ವಿಡಿಯೊ ವೈರಲ್

Viral Video: ಮದ್ರಾಸ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿನಿಯೊಬ್ಬಳು ಕ್ಯಾಂಪಸ್‌ನ ಒಳಗೆ ಪ್ರಾಣಿಗಳ ಜತೆ ಸ್ನೇಹ ಬೆಳೆಸಿದ್ದಾಳೆ. ಆಕೆ ಮೈದಾನದಲ್ಲಿ ಮುಕ್ತವಾಗಿ ಓಡಾಡುವ ಜಿಂಕೆಯನ್ನು ಮುದ್ದಿಸುವುದು ವಿಡಿಯೊದಲ್ಲಿ ಸೆರೆಯಾಗಿದೆ. ಕ್ಯಾಂಪಸ್‌ನಿಂದ ಪ್ರಾಣಿಗಳು ತನ್ನನ್ನು ಹೇಗೆ ಬೀಳ್ಕೊಟ್ಟಿವೆ ಎಂಬುದನ್ನು ಆಕೆ ವಿವರಿಸಿದ್ದಾಳೆ.

ಜಿಂಕೆ ಜತೆ ಸ್ನೇಹ ಬೆಳೆಸಿದ ವಿದ್ಯಾರ್ಥಿನಿ

ಚೆನ್ನೈ, ಮಾ. 29: ಓದು ಮುಗಿಸಿ ಕಾಲೇಜಿನಿಂದ ಹೊರ ಬರುವಾಗ ವಿದ್ಯಾರ್ಥಿಗಳು ವಿವಿಧ ಅನುಭವ ಪಡೆಯುತ್ತಾರೆ. ಕೆಲವರು ಉದ್ಯೋಗದ ಆಫರ್ ಕೂಡ ಹೊಂದಿರುತ್ತಾರೆ. ಆದರೆ ಇಲ್ಲೊಬ್ಬಳು ಎಂಬಿಎ ವಿದ್ಯಾರ್ಥಿನಿ ಸ್ನೇಹಿತರು, ಕಂಪನಿಯ ಆಫರ್ ಇದನ್ನೆಲ್ಲ ಬಿಟ್ಟು ಪ್ರಾಣಿಗಳ ಜತೆ ಸ್ನೇಹ ಬೆಳೆಸಿದ್ದಾಳೆ. ಕ್ಯಾಂಪಸ್‌ನಿಂದ ಪ್ರಾಣಿಗಳು ತನ್ನನ್ನು ಹೇಗೆ ಬೀಳ್ಕೊಟ್ಟಿವೆ ಎಂದು ಆಕೆ ವಿಡಿಯೊ (Viral News) ಮೂಲಕ ವಿವರಿಸಿದ್ದಾಳೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್‌ನ ವಿದ್ಯಾರ್ಥಿನಿ ಕ್ಯಾಂಪಸ್‌ನ ಒಳಗೆ ಪ್ರಾಣಿಗಳ ಜತೆ ಸ್ನೇಹ ಬೆಳೆಸಿದ್ದಾಳೆ. ಆಕೆ ಮೈದಾನದಲ್ಲಿ ಮುಕ್ತವಾಗಿ ಓಡಾಡುವ ಜಿಂಕೆಯನ್ನು ಮುದ್ದಿಸುವುದನ್ನು ವಿಡಿಯೊ ಸೆರೆ ಹಿಡಿದಿದೆ.

ವಿಡಿಯೊ ನೋಡಿ:



ಇತ್ತೀಚೆಗೆ ಪಲ್ಲವಿ ಎನ್ನುವ ಐಐಟಿ ಮದ್ರಾಸ್‌ನ ವಿದ್ಯಾರ್ಥಿನಿ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊ ಶೇರ್ ಮಾಡಿಕೊಂಡಿದ್ದಾರೆ. ವೈರಲ್ ಆದ ವಿಡಿಯೊದಲ್ಲಿ ಪಲ್ಲವಿ ಜಿಂಕೆಯೊಂದಿಗೆ ಆಟ ಆಡುವ ದೃಶ್ಯ, ಅದನ್ನು ಮುದ್ದಿಸುವ ಕ್ಷಣವನ್ನು ಕಾಣಬಹುದು. ಜಿಂಕೆ ಯಾವುದೇ ಭಯ ಇಲ್ಲದೆ ಆತ್ಮವಿಶ್ವಾಸದಿಂದ ಆಕೆಯ ಜತೆ ನಿಂತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ಈ ಕ್ಷಣವನ್ನು ಹಂಚಿಕೊಂಡ ಆಕೆ "ಎಂಬಿಎ ಓದಲು ಬಂದೆ‌‌...ಜಿಂಕೆ ಸ್ನೇಹ ಮಾಡಿ ಹೊರಟೆ" ಎಂದು ಶೀರ್ಷಿಕೆ ನೀಡಿದ್ದಾಳೆ.

ಪಟಾಕಿ ಹುಚ್ಚಿಗೆ ಬಾಲಕಿ ಕಣ್ಣನ್ನೇ ತೆಗೆದನೇ ಬ್ರಿಟಿಷ್‌ ಇನ್‌ಫ್ಲುಯೆನ್ಸರ್‌?

ಅನೇಕರು ಕ್ಯಾಂಪಸ್‌ನ ಈ ದೃಶ್ಯವನ್ನು ನೋಡಿ ಮೆಚ್ಚುಗೆ ಹಾಗೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. ನೆಟ್ಟಿಗರೊಬ್ಬರು, ʼʼಈ ದೃಶ್ಯ ಮುದ್ದಾಗಿದೆʼʼ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ʼʼಜಿಂಕೆಯೊಂದಿಗೆ ಎಂಬಿಎ ಕಂಪ್ಲೀಟ್ʼʼ ಎಂದು ಬರೆದುಕೊಂಡಿದ್ದಾರೆ.

ಐಐಟಿ ಮದ್ರಾಸ್ ಕೇವಲ ಶಿಕ್ಷಣಕ್ಕೆ ಮಾತ್ರವಲ್ಲದೆ ಪ್ರಕೃತಿ ಸೌಂದರ್ಯಕ್ಕೂ ಹೆಸರುವಾಸಿ. ರಾಷ್ಟ್ರೀಯ ಉದ್ಯಾನವನಗಳಲ್ಲಿ ಒಂದಾದ ಗಿಂಡಿ ರಾಷ್ಟ್ರೀಯ ಉದ್ಯಾನವನದ ಗಡಿಯಲ್ಲಿದೆ. ಈ ವಿಶಿಷ್ಟ ಸ್ಥಳದಿಂದಾಗಿ, ಚುಕ್ಕೆ ಜಿಂಕೆ ಮತ್ತು ಕೃಷ್ಣಮೃಗಗಳು ಆಗಾಗ್ಗೆ ಶೈಕ್ಷಣಿಕ ಸ್ಥಳ ಹಾಸ್ಟೆಲ್‌ಗಳು ಮತ್ತು ವಾಕಿಂಗ್ ದಾರಿಯಲ್ಲಿ ಸಂಚರಿಸುತ್ತವೆ.