ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಉಚಿತ ಬಸ್ ಪರಿಶೀಲನೆ ವೇಳೆ ವಿದ್ಯಾರ್ಥಿನಿ ಜೊತೆ ಅಸಭ್ಯವಾಗಿ ವರ್ತಿಸಿದ ಕೈ ಶಾಸಕ; ವಿಪಕ್ಷಗಳಿಂದ ಭಾರೀ ಟೀಕೆ

Viral Video: ಆರ್‌ಟಿಸಿ (RTC) ಬಸ್‌ನಲ್ಲಿ ವಿದ್ಯಾರ್ಥಿನಿಯೊಬ್ಬರನ್ನು "ಅಸಭ್ಯವಾಗಿ ಸ್ಪರ್ಶಿಸಿದ್ದಾರೆ" ಎಂದು ವಿಪಕ್ಷ ಬಿಆರ್‌ಎಸ್ ಗಂಭೀರ ಆರೋಪ ವೊಂದನ್ನು ಮಾಡಿದೆ. ಇಬ್ರಾಹಿಂಪಟ್ಟಣಂನ ಶಾಸಕ ರಂಗ ರೆಡ್ಡಿ  ಕಾಂಗ್ರೆಸ್ ಸರ್ಕಾರ ಉಚಿತ ಬಸ್ ಯೋಜನೆ ಕುರಿತು ವಿದ್ಯಾರ್ಥಿನಿಯರೊಂದಿಗೆ ಸಂಭಾಷಣೆ ನಡೆಸುತ್ತಿರುವಾಗ ಅನುಚಿತ ವರ್ತನೆ ತೋರಿದ್ದಾರೆ ಎಂದು ಆರೋಪ ಮಾಡಲಾಗಿದೆ

ಕಾಂಗ್ರೆಸ್ ಶಾಸಕ ರಂಗಾರೆಡ್ಡಿ

ತೆಲಂಗಾಣ,ಅ. 8: ಕಾಂಗ್ರೆಸ್ ಶಾಸಕ ರಂಗಾರೆಡ್ಡಿ ಅವರ ವಿರುದ್ಧ ಇದೀಗ ಗಂಭೀರ ಆರೋಪವೊಂದು ಕೇಳಿಬಂದಿದೆ. ಆರ್‌ಟಿಸಿ (RTC) ಬಸ್‌ನಲ್ಲಿ ವಿದ್ಯಾರ್ಥಿನಿಯೊಬ್ಬರನ್ನು "ಅಸಭ್ಯವಾಗಿ ಸ್ಪರ್ಶಿಸಿದ್ದಾರೆ" ಎಂದು ವಿಪಕ್ಷ ಬಿಆರ್‌ಎಸ್ ಗಂಭೀರ ಆರೋಪ ವೊಂದನ್ನು ಮಾಡಿದೆ. ಇಬ್ರಾಹಿಂ ಪಟ್ಟಣಂನ ಶಾಸಕ ರಂಗ ರೆಡ್ಡಿ (Ranga Reddy) ಕಾಂಗ್ರೆಸ್ ಸರ್ಕಾರ ಉಚಿತ ಬಸ್ ಯೋಜನೆ ಕುರಿತು ವಿದ್ಯಾರ್ಥಿನಿ ಯರೊಂದಿಗೆ ಸಂಭಾಷಣೆ ನಡೆಸುತ್ತಿರುವಾಗ ಅನುಚಿತ ವರ್ತನೆ ತೋರಿದ್ದಾರೆ ಎಂದು ಆರೋಪ ಮಾಡಲಾಗಿದೆ.

ಕಾಂಗ್ರೆಸ್ ಸರ್ಕಾರದ 'ಮಹಾಲಕ್ಷ್ಮಿ' ಉಚಿತ ಬಸ್ ಪ್ರಯಾಣ ಯೋಜನೆಯ ಬಗ್ಗೆ ಮಾಹಿತಿ ತಲುಪಿಸಲು ಶಾಸಕ ರಂಗಾರೆಡ್ಡಿ ಬಸ್ ಹತ್ತಿ ವಿದ್ಯಾರ್ಥಿನಿಯರೊಂದಿಗೆ ಸಂವಾದವನ್ನು ಮಾಡುತ್ತಿದ್ದರು. ಈ ವೇಳೆ ಶಾಸಕರು ವಿದ್ಯಾರ್ಥಿನಿಯ ಕೈ ಹಿಡಿದುಕೊಂಡಿರುವ ವಿಡಿಯೊವೊಂದು ವೈರಲ್ ಆಗಿದೆ.

ವಿಡಿಯೋ ನೋಡಿ:



ಬಿಆರ್‌ಎಸ್ ಪ್ರಧಾನ ಕಾರ್ಯದರ್ಶಿ ಈ ವಿಡಿಯೋ ಆಧರಿಸಿ, ಕಾಂಗ್ರೆಸ್ ಶಾಸಕ ಸಂಸ್ಕಾರವಿಲ್ಲದೆ ಒಬ್ಬ ಯುವತಿ ಜೊತೆ ಈ ರೀತಿ ವರ್ತಿಸುವುದು ತಪ್ಪು, ತಕ್ಷಣ ಮಹಿಳಾ ಆಯೋಗದ ಅಧ್ಯಕ್ಷೆ ಲೀಗಲ್ ಒಪಿನಿಯನ್ ತೆಗೆದುಕೊಂಡು, ಮಲ್ರೆಡ್ಡಿ ರಂಗಾರೆಡ್ಡಿನಿ ವಿಚಾರಣೆಗೆ ಒಳಪಡಿಸಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.

Viral Video: ಒಂದೇ ಬೈಕ್‌ನಲ್ಲಿ 6 ವಿದ್ಯಾರ್ಥಿಗಳ ಅಪಾಯಕಾರಿ ಸವಾರಿ; ಇದೇನಾ ಶಿಕ್ಷಣ? ಎಂದು ಪ್ರಶ್ನಿಸಿದ ನೆಟ್ಟಿಗರು

ಶಾಸಕರು ವಿದ್ಯಾರ್ಥಿನಿಯ ಕೈ ಹಿಡಿದು ಅಸಭ್ಯವಾಗಿ ವರ್ತಿಸಿರುವುದು ಅಪರಾಧವಲ್ಲವೇ? ಇದು ಮಹಿಳೆಯ ಗೌರವಕ್ಕೆ ಧಕ್ಕೆ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ. ​ರಾಜ್ಯ ಮಹಿಳಾ ಆಯೋಗವು ಈ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಅಂದಿದ್ದಾರೆ..ವೀಡಿಯೊದಲ್ಲಿ, ಕಾಂಗ್ರೆಸ್ ಶಾಸಕ ರಂಗ ರೆಡ್ಡಿ ಬಸ್ಸಿನಲ್ಲಿ ಇಬ್ಬರು ವಿದ್ಯಾರ್ಥಿನಿಯರೊಂದಿಗೆ ಸಂಭಾಷಣೆ ನಡೆಸುತ್ತಿರುವುದನ್ನು ಕಾಣಬಹುದು.

ಈ ಆರೋಪವನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಶಾಸಕ ರಂಗಾರೆಡ್ಡಿ, "ನಾನು ಆ ವಿದ್ಯಾರ್ಥಿ ನಿಯರೊಂದಿಗೆ ತಂದೆಯ ಸಮಾನವಂತೆ ಪ್ರೀತಿ,ಮಮತೆಯಿಂದ ಮಾತುಕತೆ ನಡೆಸುತ್ತಿದ್ದೆ. ಬಸ್ ತಿರುವು ತೆಗೆದುಕೊಳ್ಳುವಾಗ ವಿಡಿಯೊ ಮಾಡಲಾಗಿದ್ದು ಬಿಆರ್‌ಎಸ್ ನಾಯಕರು ಇದನ್ನು ರಾಜಕೀಯ ಲಾಭಕ್ಕಾಗಿ ಅಪಪ್ರಚಾರ ಹೊರಿಸುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.