ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rajastan Flood: ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿ- ಹೋಟೆಲ್ ಸಿಬ್ಬಂದಿಯಿಂದ ರಕ್ಷಣೆ

ರಾಜಸ್ಥಾನದ ಅಜ್ಮೀರ್‌‌ನಲ್ಲಿ ಜುಲೈ 18ರಂದು ಭಾರಿ ಮಳೆಯಿಂದ ಖ್ವಾಜಾ ಗರೀಬ್ ನವಾಜ್ ದರ್ಗಾ ಸೇರಿದಂತೆ ನಗರದ ಹಲವು ಭಾಗಗಳು ಜಲಾವೃತವಾಗಿವೆ. ದರ್ಗಾದ ಸುತ್ತಮುತ್ತಲಿನ ಕಿರಿದಾದ ರಸ್ತೆಗಳು ಹಳ್ಳದಂತಾಗಿ, ಜನರು ಸಂಕಷ್ಟ ಅನುಭವಿಸುವಂತಾಗಿದೆ. ದರ್ಗಾದ ನಿಜಾಮ್ ಗೇಟ್ ಬಳಿ, ಒಬ್ಬ ವ್ಯಕ್ತಿ ನೀರಿನ ರಭಸಕ್ಕೆ ಕಾಲು ಜಾರಿ ಕೊಚ್ಚಿಕೊಂಡು ಹೋಗುವ ದೃಶ್ಯ ಸೆರೆಗಿಯಾಗಿದೆ.

ಅಜ್ಮೀರ್‌: ರಾಜಸ್ಥಾನದ (Rajasthan) ಅಜ್ಮೀರ್‌‌ನಲ್ಲಿ (Ajmer) ಜುಲೈ 18ರಂದು ಭಾರಿ ಮಳೆಯಿಂದ (Heavy Rain) ಖ್ವಾಜಾ ಗರೀಬ್ ನವಾಜ್ ದರ್ಗಾ (Dargah of Khwaja Garib Nawaz) ಸೇರಿದಂತೆ ನಗರದ ಹಲವು ಭಾಗಗಳು ಜಲಾವೃತವಾಗಿವೆ. ದರ್ಗಾದ ಸುತ್ತಮುತ್ತಲಿನ ಕಿರಿದಾದ ರಸ್ತೆಗಳು ಹಳ್ಳದಂತಾಗಿ, ಜನರು ಸಂಕಷ್ಟ ಅನುಭವಿಸುವಂತಾಗಿದೆ. ದರ್ಗಾದ ನಿಜಾಮ್ ಗೇಟ್ ಬಳಿ, ಒಬ್ಬ ವ್ಯಕ್ತಿ ನೀರಿನ ರಭಸಕ್ಕೆ ಕಾಲು ಜಾರಿ ಕೊಚ್ಚಿಕೊಂಡು ಹೋಗುವ ದೃಶ್ಯ ಸೆರೆಯಾಗಿದೆ.

ಈ ಘಟನೆಯ ವಿಡಿಯೋದಲ್ಲಿ, ತೀವ್ರ ಪ್ರವಾಹದ ದೃಶ್ಯ ಕಂಡುಬಂದಿದೆ. ವ್ಯಕ್ತಿಯೊಬ್ಬ ನೀರಿನ ಬಾಟಲಿ ಹಿಡಿದುಕೊಂಡು ರಭಸವಾಗಿ ಹರಿಯುತ್ತಿರುವ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಸುತ್ತಲಿನವರು ರಕ್ಷಣೆಗೆ ಯತ್ನಿಸಿದರೂ, ನೀರಿನ ರಭಸಕ್ಕೆ ತಡೆಯಲು ಆಗಲಿಲ್ಲ. ಆದರೆ, ಹತ್ತಿರದ ಹಾಶ್ಮಿ ಹೋಟೆಲ್‌ನ ಸಿಬ್ಬಂದಿಯೊಬ್ಬ ಧೈರ್ಯದಿಂದ ರಭಸದ ನೀರಿನ ನಡುವೆಯೂ ಆತನನ್ನು ಹಿಡಿದು ರಕ್ಷಿಸಿದ್ದಾರೆ. ಕಳೆದ 24 ಗಂಟೆಗಳಲ್ಲಿ ರಾಜಸ್ಥಾನದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗಿದೆ. ಕೋಟಾ ಜಿಲ್ಲೆಯ ಸಂಗೋದ್‌ನಲ್ಲಿ 166 ಮಿಮೀ ಮಳೆ ದಾಖಲಾಗಿದೆ. ಜೈಸಲ್ಮೇರ್‌ನಲ್ಲಿ ಗರಿಷ್ಠ ತಾಪಮಾನ 39.1 ಡಿಗ್ರಿ ಸೆಲ್ಸಿಯಸ್ ಆಗಿದೆ.

15 ಜಿಲ್ಲೆಗಳಿಗೆ ಭಾರೀ ಮಳೆ ಎಚ್ಚರಿಕೆ

ಹವಾಮಾನ ಇಲಾಖೆಯ ಪ್ರಕಾರ, ವಾಯವ್ಯ ಮಧ್ಯಪ್ರದೇಶ ಮತ್ತು ದಕ್ಷಿಣ-ಪಶ್ಚಿಮ ಉತ್ತರ ಪ್ರದೇಶದಲ್ಲಿ ಕಡಿಮೆ ಒತ್ತಡದ ವ್ಯವಸ್ಥೆಯು ಮುಂದಿನ 24 ಗಂಟೆಗಳಲ್ಲಿ ಪೂರ್ವ ರಾಜಸ್ಥಾನದ ಮೂಲಕ ವಾಯವ್ಯಕ್ಕೆ ಚಲಿಸಲಿದೆ. ಇದರಿಂದ ಕೋಟಾ, ಅಜ್ಮೀರ್‌ ಮತ್ತು ಜೋಧ್‌ಪುರ ಭಾಗಗಳಲ್ಲಿ ಅತಿಹೆಚ್ಚು ಮಳೆಯಗುವ ಸಾಧ್ಯತೆಯಿದೆ. ಜೈಪುರ, ಉದಯಪುರ, ಮತ್ತು ಭರತ್‌ಪುರ ಭಾಗಗಳಲ್ಲೂ ಭಾರಿ ಮಳೆ ನಿರೀಕ್ಷಿಸಲಾಗಿದೆ.ಎಂ

ಈ ಸುದ್ದಿಯನ್ನು ಓದಿ: Viral Video: ಸ್ಕೂಟರ್‌ಗೆ ಅಡ್ಡ ಬಂದ ಬೀದಿ ಶ್ವಾನ ಉಳಿಸಲು ಹೋಗಿ ಜೀವ ಕಳೆದುಕೊಂಡ ಅಪ್ರಾಪ್ತ ಬಾಲಕ

ಜುಲೈ 20ರಿಂದ ಮಳೆ ಕಡಿಮೆಯಾಗುವ ಸಾಧ್ಯತೆ

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ರಾಜಸ್ಥಾನದಲ್ಲಿ ಕಡಿಮೆ ಒತ್ತಡದ ವ್ಯವಸ್ಥೆಯಿಂದ ಭಾರಿ ಮಳೆಯಾಗುತ್ತಿದೆ. ಆದರೆ, ಜುಲೈ 20ರಿಂದ ಈ ವ್ಯವಸ್ಥೆ ದುರ್ಬಲಗೊಂಡು ರಾಜ್ಯದಿಂದ ಹೊರಗೆ ಸರಿಯುವುದರಿಂದ ಮಳೆಯ ತೀವ್ರತೆ ಕಡಿಮೆಯಾಗಲಿದೆ.