ನವದೆಹಲಿ,ಮಾ.11: ಬಾಹ್ಯಾಕಾಶದ ಸುಂದರ ದೃಶ್ಯಗಳು ಕೆಲವೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗುತ್ತವೆ. ಇದೀಗ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು ಸುಂದರ ವಾದ ಭಾರತದ ರಾತ್ರಿಯ ನೋಟವನ್ನು ಹಂಚಿಕೊಂಡಿದೆ. ಚಿತ್ರವು ಭೂಮಿ ಯಾದ್ಯಂತ ಹರಡಿರುವ ಪ್ರಕಾಶಮಾನವಾದ ದೀಪಗಳಗಳೊಂದಿಗೆ ಭಾರತದ ವಿಶಾಲ ನೋಟವನ್ನು ತೋರಿಸುತ್ತದೆ. ಅರೇಬಿಯನ್ ಸಮುದ್ರದ ಮೇಲಿಂದ ಹಿಮಾಲಯದವರೆಗೆ ಬಾಹ್ಯಾಕಾಶ ನಿಲ್ದಾಣವು ಸಂಚರಿಸುವಾಗ ಈ ದೃಶ್ಯಗಳನ್ನು ರೆಕಾರ್ಡ್ ಮಾಡಲಾಗಿದೆ.
ಪ್ರತಿಯೊಂದು ಚಿತ್ರವು ಸ್ವಲ್ಪ ವಿಭಿನ್ನ ದೃಶ್ಯ ಸೆರೆ ಹಿಡಿಯುತ್ತದೆ, ಭೂಮಿಯಾದ್ಯಂತ ಹರಡಿರುವ ಪ್ರಕಾಶ ಮಾನವಾದ ದೀಪಗಳು ಕಂಡು ಬಂದಿವೆ. ಬಾಹ್ಯಾಕಾಶ ನಿಲ್ದಾಣವು ಮೂರು ಫೋಟೋ ಗಳನ್ನು ಶೇರ್ ಮಾಡಿದ್ದು ಭಾರತವು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿರುವುದು ಗೋಚರಿಸುತ್ತದೆ.
ಮೊದಲ ಚಿತ್ರವು ಭೂಮಿಯಾದ್ಯಂತ ಹರಡಿರುವ ಪ್ರಕಾಶ ಮಾನವಾದ ದೀಪಗಳ ಸಮೂಹ ಗಳೊಂದಿಗೆ ಭಾರತದ ವಿಶಾಲ ನೋಟವನ್ನು ತೋರಿಸುತ್ತದೆ. ಎರಡನೆಯ ಚಿತ್ರವು ಭಾರತ ದಾದ್ಯಂತ ಪ್ರಮುಖ ನಗರಗಳು ಮತ್ತು ಪಟ್ಟಣಗಳು ನಕ್ಷತ್ರ ಗಳಂತೆ ಗೋಚರಿಸುತ್ತವೆ. ಮತ್ತೊಂದು ಚಿತ್ರದಲ್ಲಿ ಮಂಜಿನಿಂದ ಆವೃತವಾದ ಹಿಮಾಲಯ ಪರ್ವತ ಶ್ರೇಣಿಗಳ ರೇಖೆ ಅದ್ಭುತವಾಗಿ ಮೂಡಿಬಂದಿವೆ.
Viral Video: ಮರವೇರಿ ಹಾಯಾಗಿ ಕುಳಿತ ಹುಲಿ; AI ವಿಡಿಯೊ ಎಂದ ನೆಟ್ಟಿಗರು
ಈ ಫೋಟೋಗಳು ಆನ್‌ಲೈನ್‌ನಲ್ಲಿ ತ್ವರಿತವಾಗಿ ಗಮನ ಸೆಳೆದಿದ್ದು ಅನೇಕ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದಾರೆ. ಭಾರತದ ಆಕಾರವನ್ನು ಈ ದೀಪಗಳು ಗುರುತಿಸುತ್ತಿರುವುದು ಬಹಳ ಸುಂದರವಾಗಿದೆ ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಇನ್ನೊಬ್ಬರು ಅದ್ಬುತ ದೃಶ್ಯ ಎಂದು ಬರೆದಿದ್ದಾರೆ.
ಇಂತಹ ಫೋಟೋಗಳನ್ನು ನಿಯಮಿತವಾಗಿ ISS ನಿಂದ ಸೆರೆಹಿಡಿಯಲಾಗುತ್ತದೆ, ಇದು ಸರಿ ಸುಮಾರು ಪ್ರತಿ 90 ನಿಮಿಷಗಳಿ ಗೊಮ್ಮೆ ಭೂಮಿಯನ್ನು ಸುತ್ತುತ್ತದೆ. ಈ ಚಿತ್ರಗಳು ಬಾಹ್ಯಾ ಕಾಶದಿಂದ ಗ್ರಹವು ಹೇಗೆ ಕಾಣಿಸಿಕೊಳ್ಳುತ್ತದೆ ಎಂಬುದರ ಅಪರೂಪದ ಮತ್ತು ಸ್ಪಷ್ಟ ನೋಟವನ್ನು ಒದಗಿಸುತ್ತದೆ.