ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಭಾರತ- ಅಮೆರಿಕ ವ್ಯಾಪಾರ ಒಪ್ಪಂದ; ಟೀಕೆಗೆ ಗುರಿಯಾದ ಪಾಕಿಸ್ತಾನ ಸರ್ಕಾರ

ಭಾರತ ಮತ್ತು ಅಮೆರಿಕ ವ್ಯಾಪಾರ ಒಪ್ಪಂದ ಮಾಡಿಕೊಂಡ ಬಳಿಕ ಪಾಕಿಸ್ತಾನ ಸರ್ಕಾರ ತನ್ನ ದೇಶದಲ್ಲೇ ಭಾರಿ ಟೀಕೆಗೆ ಗುರಿಯಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭಾರತ ನೊಬೆಲ್ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಿಲ್ಲ. ಆದರೆ ಅವರೊಂದಿಗೆ ಉತ್ತಮ ಒಪ್ಪಂದವನ್ನು ಮಾಡಿಕೊಂಡಿದೆ ಎಂದು ಹೇಳಿ ಅನೇಕರು ಪಾಕಿಸ್ತಾನ ಸರ್ಕಾರವನ್ನು ಹೀಯಾಳಿಸಿದ್ದಾರೆ.

ಸಂಗ್ರಹ ಚಿತ್ರ

ಇಸ್ಲಾಮಾಬಾದ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US president donald trump) ಅವರನ್ನು ಭಾರತ ನೊಬೆಲ್ ಪ್ರಶಸ್ತಿಗೆ (Nobel Prize) ನಾಮ ನಿರ್ದೇಶನ ಮಾಡಿಲ್ಲ. ಆದರೆ ಅವರೊಂದಿಗೆ ಉತ್ತಮ ಒಪ್ಪಂದವನ್ನು ಮಾಡಿಕೊಂಡಿದೆ ಎಂದು ಪಾಕಿಸ್ತಾನದ (Pakistan) ಪತ್ರಕರ್ತರು, ವಿರೋಧ ಪಕ್ಷಗಳ ನಾಯಕರು ಸೇರಿದಂತೆ ಅನೇಕರು ಸರ್ಕಾರವನ್ನು ಟೀಕಿಸಿದ್ದಾರೆ. ಪಾಕಿಸ್ತಾನ ಸರ್ಕಾರವು ದೀರ್ಘಕಾಲೀನ ಆರ್ಥಿಕ ಹಿತಾಸಕ್ತಿಗಳಿಗಿಂತ ವೈಯಕ್ತಿಕ ಅಧಿಕಾರ ಮತ್ತು ಆಡಳಿತ ಸ್ಥಿರತೆಗೆ ಆದ್ಯತೆ ನೀಡುತ್ತಿದೆ ಎಂದು ಅನೇಕರು ಸಾಮಾಜಿಕ ಮಾಧ್ಯಮಗಳಲ್ಲಿ (Viral News) ಟೀಕಿಸಿದ್ದಾರೆ.

ಭಾರತ ಮತ್ತು ಅಮೆರಿಕ ವ್ಯಾಪಾರ ಒಪ್ಪಂದ ಮಾಡಿದ ಬಳಿಕ ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಅಮೆರಿಕ ಗಣನೀಯ ಪ್ರಮಾಣದಲ್ಲಿ ಇಳಿಕೆ ಮಾಡಿದೆ. ಇದು ಪಾಕಿಸ್ತಾನದ ನಾಯಕರನ್ನು ಟೀಕಿಸುವಂತೆ ಮಾಡಿದೆ. ಪಾಕಿಸ್ತಾನ ಆಡಳಿತದಲ್ಲಿ ಮಿಲಿಟರಿ ನಾಯಕತ್ವ ಸ್ಥಾಪನೆಯು ಹೆಚ್ಚಿನ ಟೀಕೆಗೆ ಕಾರಣವಾಗಿದೆ.



ಸೂರ್ಯನ ಪ್ರಕೋಪ: ಭಾರತಕ್ಕೆ ರೇಡಿಯೋ ಬ್ಲ್ಯಾಕ್‌ಔಟ್ ಭೀತಿ; ಇಸ್ರೋದಿಂದ ಕಟ್ಟೆಚ್ಚರ

ಅಮೆರಿಕವು ಈಗ ಭಾರತೀಯ ಸರಕುಗಳ ಮೇಲೆ ಶೇ.18 ರಷ್ಟು ಸುಂಕವನ್ನು ವಿಧಿಸಿದೆ. ಇನ್ನು ಪಾಕಿಸ್ತಾನಕ್ಕೆ ಶೇ. 19ರಷ್ಟು ಸುಂಕ ವಿಧಿಸಲಾಗಿದೆ. ಸಣ್ಣ ಪ್ರಮಾಣದ ಈ ವ್ಯತ್ಯಾಸವು ಕೂಡ ಪ್ರಧಾನಿ ಶೆಹಬಾಜ್ ಷರೀಫ್, ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ವಿರುದ್ಧ ಟೀಕೆಗೆ ಕಾರಣವಾಗಿದೆ.

ಪಾಕಿಸ್ತಾನದ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ವಕ್ತಾರರು ಸೇರಿದಂತೆ ಅನೇಕರು ಇಸ್ಲಾಮಾಬಾದ್ ಮತ್ತು ವಾಷಿಂಗ್ಟನ್ ನಡುವೆ ಉನ್ನತ ಮಟ್ಟದ ಸಂಬಂಧವಿದೆ ಎಂದು ತೋರಿಸಿಕೊಂಡರೂ ಇದು ದೇಶಕ್ಕೆ ಲಾಭ ತರುವ ಪ್ರಯೋಜನವನ್ನು ನೀಡಿಲ್ಲ ಎಂಬುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಅನೇಕರು ವ್ಯಂಗ್ಯವಾಡಿದ್ದಾರೆ. ಇವರ ವಾಷಿಂಗ್ಟನ್ ಪ್ರವಾಸವು ರಾಷ್ಟ್ರೀಯ ಹಿತಾಸಕ್ತಿಗಿಂತ ರಾಜಕೀಯ ಉಳಿವಿಗಾಗಿ ಹೆಚ್ಚಾಗಿ ಕೈಗೊಂಡ ರಿಕ್ಷಾ ಪ್ರಯಾಣವಾಗಿದೆ ಎಂದು ಹೇಳಿದ್ದಾರೆ.

ಪಾಕಿಸ್ತಾನದ ಪ್ರಮುಖ ಪತ್ರಕರ್ತ ಅಸಾದ್ ಟೂರ್ ಅವರು, ಪಾಕಿಸ್ತಾನದ ವಿಶಾಲ ಆರ್ಥಿಕ ಚಿತ್ರಣವು ಅಮೆರಿಕ ಸುಂಕದ ಪರಿಣಾಮದಿಂದ ಇನ್ನಷ್ಟು ಹಾನಿಕಾರಕವಾಗಿದೆ. ರಫ್ತುಗಳು ನಿರಂತರ ಕುಸಿಯುತ್ತಿವೆ, ವಿದೇಶಿ ಹೂಡಿಕೆ ಬಹುತೇಕ ಕಣ್ಮರೆಯಾಗಿದೆ ಮತ್ತು ದೇಶದ ಆರ್ಥಿಕ ಹತೋಟಿ ತಪ್ಪಿದೆ ಎಂದು ಹೇಳಿದ್ದಾರೆ.

ವ್ಲಾಗರ್ ಮೊಯೀದ್ ಪಿರ್ಜಾಡಾ ಅವರು, ಪಾಕಿಸ್ತಾನದ ನಾಯಕರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ವೈಯಕ್ತಿಕ ಸಂಬಂಧದ ಮೂಲಕ ರಿಯಾಯಿತಿಗಳನ್ನು ಪಡೆಯಬಹುದು ಏನು ಹೇಳಲಾಗಿತ್ತು. ಫೀಲ್ಡ್ ಮಾರ್ಷಲ್' ಬಿರುದು ಮತ್ತು ಖನಿಜಗಳ ಬ್ರೀಫ್‌ಕೇಸ್ ಟ್ರಂಪ್ ಅವರ ಹೃದಯದ ಕೀಲಿಗಳಾಗಿವೆ ಎಂದು ತಿಳಿಸಲಾಯಿತು. ಆದರೆ ರಷ್ಯಾದೊಂದಿಗೆ ನಿಂತು ಅಮೆರಿಕವನ್ನು ಧಿಕ್ಕರಿಸಿದ ಪ್ರಧಾನಿ ಮೋದಿಗೆ ಕರೆ ಮಾಡಿ ಟ್ರಂಪ್ ಶೇ. 18ರಷ್ಟು ಸುಂಕ ನೀಡಿರುವುದಾಗಿ ಹೇಳಿದ್ದಾರೆ. ನಮ್ಮ ನಾಯಕರು ಅವರಿಂದ ಕೇಳಿ ಎಲ್ಲವನ್ನೂ ಮಾಡಿದ ಮೇಲೆ ಶೇ. 19ರಷ್ಟು ಸುಂಕ ವಿಧಿಸಲಾಗಿದೆ. ಇದು ರಾಜತಾಂತ್ರಿಕತೆಯಲ್ಲ; ಇದು ವಹಿವಾಟಿನ ಶರಣಾಗತಿ ಎಂದು ತಿಳಿಸಿದ್ದಾರೆ.

ಯಾವುದೇ ದೇಶದಿಂದ ತೈಲ ಖರೀದಿಸುವ ಸ್ವಾತಂತ್ರ್ಯ ಭಾರತಕ್ಕಿದೆ; ಡೊನಾಲ್ಡ್‌ ಟ್ರಂಪ್‌ಗೆ ತಿರುಗೇಟು ಕೊಟ್ಟ ರಷ್ಯಾ?

ಪತ್ರಕರ್ತ ಇಮ್ರಾನ್ ರಿಯಾಜ್ ಖಾನ್ ಅವರು, ಬಲೂಚಿಸ್ತಾನದ ಖನಿಜಗಳನ್ನು ನೀವು ಮರದ ಪೆಟ್ಟಿಗೆಗಳಲ್ಲಿ ನೀಡಬಹುದು. ಆದರೆ ಗೌರವವನ್ನು ಖರೀದಿಸಲು ಸಾಧ್ಯವಿಲ್ಲ. ಈ ವ್ಯಾಪಾರ ಒಪ್ಪಂದವು ಹೊಸ ಇತಿಹಾಸವನ್ನು ನಿರ್ಮಿಸಲಿದೆ. ಇದು ಭಾರತವು ತನ್ನ ಜಾಗತಿಕ ಇಮೇಜ್ ಅನ್ನು ರಕ್ಷಿಸಲು ಅನುವು ಮಾಡಿಕೊಡುತ್ತದೆ ಎಂದು ತಿಳಿಸಿದ್ದಾರೆ.

ಭಾರತ ಮತ್ತು ಅಮೆರಿಕ ವ್ಯಾಪಾರ ಒಪ್ಪಂದದಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಶೆಹ್ಬಾಜ್-ಮುನೀರ್ ನಾಯಕತ್ವದ ವಿರುದ್ಧ ಟೀಕೆಗಳು ಹೆಚ್ಚಾಗಿವೆ. ಹ್ಯಾಶ್‌ಟ್ಯಾಗ್‌ಗಳು ಟ್ರೆಂಡ್ ಕೂಡ ಮಾಡಲಾಗಿದೆ.

ವಿದ್ಯಾ ಇರ್ವತ್ತೂರು

View all posts by this author