ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಮೆರಿಕದಲ್ಲಿ ಬಿಂದಿ ಧರಿಸಿದ್ದಕ್ಕಾಗಿ ಭಾರತೀಯ ಮೂಲದ ವೈದ್ಯೆಗೆ ಜನಾಂಗೀಯ ನಿಂದನೆ: ವಿಡಿಯೊ ಮೂಲಕ ತಿರುಗೇಟು ನೀಡಿದ ಮಹಿಳೆ

Viral Video: ಬಿಂದಿ ಧರಿಸಿದ್ದಾರೆ ಎನ್ನುವ ಕಾರಣಕ್ಕೆ ಅಮೆರಿಕದಲ್ಲಿ ಭಾರತೀಯ ಮೂಲಕ ವೈದ್ಯೆಗೆ ನಿಂದಿಸಿರುವ ಘಟನೆ ನಡೆದಿದೆ. ಈ ವೈದ್ಯೆ ಅಮೆರಿಕದಲ್ಲಿ ಹುಟ್ಟಿ ಬೆಳೆದಿದ್ದರೂ ಭಾರತೀಯ ವಿರೋಧಿ ನಡೆಯನ್ನು ಕಂಡು ದಿಗ್ಭ್ರಮೆಗೊಂಡಿರುವುದಾಗಿ ತಿಳಿಸಿದ್ದಾರೆ. ಬಿಂದಿ ಧರಿಸಿದ್ದರಿಂದ ಸೋಷಿಯಲ್ ಮೀಡಿಯಾದಲ್ಲಿ ಕೆಲವು ಕಿಡೀಗೆಡಿಗಳು 'ಗೋ ಬ್ಯಾಕ್ ಟು ಇಂಡಿಯಾ' ಎಂಬ ನಿಂದನೆಯ ಪದ ಬಳಸಿದ್ದಾರೆ.

ಡಾ. ಕರಿಷ್ಮಾ ರೆಡ್ಡಿ

ವಾಷಿಂಗ್ಟನ್ ,ಜು. 26: ಹಣೆಯ ಮೇಲೆ ಬಿಂದಿ ಧರಿಸಿದ್ದಾರೆ ಎನ್ನುವ ಕಾರಣಕ್ಕೆ ಅಮೆರಿಕದಲ್ಲಿ ಭಾರತೀಯ ಮೂಲಕ ವೈದ್ಯೆಯನ್ನು ಅವಮಾನಿಸಿರುವ ಘಟನೆ ನಡೆದಿದೆ. ಈ ವೈದ್ಯೆ ಅಮೆರಿಕದಲ್ಲಿ ಹುಟ್ಟಿ ಬೆಳೆದಿದ್ದರೂ ಭಾರತೀಯ ವಿರೋಧಿ ನಡೆ ಕಂಡು ದಿಗ್ಭ್ರಮೆಗೊಂಡಿದ್ದಾರೆ. ಬಿಂದಿ ಧರಿಸಿದ್ದಾರೆ ಎನ್ನುವ ಕಾರಣಕ್ಕೆ ಸೋಷಿಯಲ್ ಮೀಡಿಯಾದಲ್ಲಿ (Viral News) ಕೆಲವು ಕಿಡೀಗೆಡಿಗಳು 'ಗೋ ಬ್ಯಾಕ್ ಟು ಇಂಡಿಯಾ' ಎಂಬ ನಿಂದನೆಯ ಪದಗಳನ್ನು ಬಳಸಿದ್ದಾರೆ. ಈ ಟೀಕೆಗಳನ್ನು ಕೇಳಿದ ಬೆನ್ನಲ್ಲೇ ಮಹಿಳೆ ಇದಕ್ಕೆ ಸರಿಯಾದ ಪ್ರತಿಕ್ರಿಯೆ ನೀಡಿದ್ದಾರೆ.

​ಡಾ. ಕರಿಷ್ಮಾ ರೆಡ್ಡಿ ಎಂಬ ಇಂದಿಯನ್‌-ಅಮೆರಿಕನ್ ವೈದ್ಯೆ ರೋಗಿಯ ಜತೆಗೆ ಮಾತನಾಡಿದ ವಿಡಿಯೊವೊಂದನ್ನು ಇನ್‌ಸ್ಟಾಗ್ರಾಮ್‌ ನಲ್ಲಿ ಶೇರ್ ಮಾಡಿಕೊಂಡಿದ್ದರು‌‌. ವಿಡಿಯೊದಲ್ಲಿ ಅವರು ಬಿಂದಿ ಧರಿಸಿರುವುದು ಕಾಣಿಸುತ್ತಿತ್ತು. ಇದನ್ನು ಕಂಡು ಕೆಲವರು ನಿಮ್ಮ ದೇಶವಾದ ಭಾರತಕ್ಕೆ ವಾಪಸ್ ಹೋಗಿ ಎಂದು ಕಮೆಂಟ್ ಮಾಡಿ ನಿಂದಿಸಿದ್ದರು. ಇದಕ್ಕೆ ಇದೀಗ ಕರಿಷ್ಮಾ ತಿರುಗೇಟು ನೀಡಿದ್ದಾರೆ.

ವಿಡಿಯೊ ನೋಡಿ:



ಬಿಂದಿ ಧರಿಸಿದ್ದ ವಿಡಿಯೊದ ಬಗ್ಗೆ ಆನ್‌ಲೈನ್‌ನಲ್ಲಿ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಅವರು ಮಾತನಾಡಿದ್ದಾರೆ. ತನ್ನ ವಿರುದ್ಧ ದ್ವೇಷ ಹರಡುತ್ತಿರುವವರಿಗೆ ಅತ್ಯಂತ ಗೌರವದಿಂದ ತಿರುಗೇಟು ನೀಡಿದ್ದಾರೆ. ಡಾ. ಕರಿಷ್ಮಾ, ಈ ಬಗ್ಗೆ ಮಾತನಾಡಿ, ʼʼನನ್ನ ಇಡೀ ಜೀವನದಲ್ಲಿ ಇಂತಹ ವಿರೋಧಿಗಳನ್ನು ನೋಡಿಲ್ಲ. ವೈದ್ಯಕೀಯ ಕ್ಷೇತ್ರದಲ್ಲಿ ಅಪಾರ ಗೌರವ ಪಡೆದಿದ್ದೇನೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಜನರು ಇಷ್ಟೊಂದು ಸುಲಭವಾಗಿ ದ್ವೇಷದ ಸಂದೇಶಗಳನ್ನು ಹರಡುತ್ತಿರುವುದು ಬೇಸರ ತರಿಸಿದೆʼʼ ಎಂದು ಹೇಳಿದ್ದಾರೆ.

ರಸ್ತೆಗೆ ಮದ್ಯದ ಬಾಟಲ್‌ ಎಸೆದ ಕಿಡಿಗೇಡಿ; ಕೂದಲೆಳೆ ಅಂತರದಲ್ಲಿ ತಪ್ಪಿದ ದುರಂತ

ತಮ್ಮ ಹಿಂದೂ ನಂಬಿಕೆಯನ್ನು ಗುರಿಯಾಗಿಸಿಕೊಂಡು ಮಾಡಿದ ಕಮೆಂಟ್‌ಗಳಿಗೆ ಪ್ರತಿಕ್ರಿಯಿಸುತ್ತಾ, ರೆಡ್ಡಿ, ಹಿಂದೂ ಧರ್ಮದಲ್ಲಿ ಹಸುಗಳ ಮಹತ್ವದ ಬಗ್ಗೆ ಮಾತನಾಡಿದ್ದಾರೆ. ʼʼಹಿಂದೂಗಳು ಯಾಕೆ ಗೋಮಾಂಸ ಸೇವಿಸುವುದಿಲ್ಲ ಎಂದು ನಿಮಗೆ ತಿಳಿದಿದೆಯೇ? ಹಸುಗಳು ಹಾಲು ನೀಡುವ ಮೂಲಕ ಕುಟುಂಬಗಳನ್ನು ಪೋಷಿಸುತ್ತವೆ. ಈ ನಿಟ್ಟಿನಲ್ಲಿ ಅನೇಕ ಹಿಂದೂಗಳು ಗೋಮಾಂಸ ತಿನ್ನುವುದನ್ನು ತಪ್ಪಿಸುತ್ತಾರೆ. ಆ ಕೃತಜ್ಞತೆ ಮತ್ತು ಗೌರವದ ಕಾರಣಕ್ಕಾಗಿಯೇ ಹಿಂದೂಗಳು ಗೋಮಾಂಸ ಸೇವಿಸುವುದಿಲ್ಲ. ಈ ವಿಡಿಯೊ ನಿಮ್ಮಲ್ಲಿ ಹಿಂದೂ ಧರ್ಮದ ಬಗ್ಗೆ ಜಾಗೃತಿ ಮೂಡಿಸಬಹುದುʼʼ ಎಂದು ಹೇಳಿದ್ದಾರೆ.

ಈ ವಿಡಿಯೊ ವೈರಲ್ ಆಗಿದ್ದು ಹಲವರು ಅವರ ನಡೆಯನ್ನು ಮೆಚ್ಚಿದ್ದಾರೆ. ಪ್ರಮುಖವಾಗಿ ಅವರ ಬಳಿ ಚಿಕಿತ್ಸೆ ಪಡೆದ ಅಮೆರಿಕನ್ ರೋಗಿಗಳು ಜನಾಂಗೀಯವಾದಿಗಳಿಗೆ ತಕ್ಕ ರೆಸ್ಪಾನ್ಸ್ ನೀಡಿದ್ದಾರೆ. ನೆಟ್ಟಿಗರೊಬ್ಬರು, ʼʼಚಿಕಿತ್ಸೆಯ ಮೂಲಕ ತಮ್ಮ ಜೀವನ ಪರಿವರ್ತಿಸಿದ್ದಾರೆʼʼ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ. ಮತ್ತೊಬ್ಬರು‌, ʼʼನೀವು ಭಾರತೀಯರಾಗಿ ಅಮೆರಿಕದಲ್ಲಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆ ತಂದಿದೆʼʼ ಎಂದು ಬರೆದಿದ್ದಾರೆ.