ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕೆಮ್ಮಿಗೆ ಚಿಕಿತ್ಸೆ ಪಡೆಯಬೇಕೆಂದರೂ ಒಂದು ವಾರ ಕಾಯಬೇಕು; ವಿದೇಶಗಳ ವೈದ್ಯಕೀಯ ಸ್ಥಿತಿ ಬಿಚ್ಚಿಟ್ಟ ಭಾರತೀಯ ಮಹಿಳೆ

ಅಭಿವೃದ್ಧಿ ಹೊಂದಿದ ವಿದೇಶಗಳಲ್ಲಿ ವೈದ್ಯಕೀಯ ಸೇವೆ ಪಡೆಯುವುದು ಎಷ್ಟು ಕಷ್ಟ ಎಂಬ ಸತ್ಯವನ್ನು ನ್ಯೂಜಿಲ್ಯಾಂಡ್‌ನಲ್ಲಿರುವ ಭಾರತೀಯ ಮಹಿಳೆಯೊಬ್ಬರು ಬಹಿರಂಗಪಡಿಸಿದ್ದಾರೆ. ತೀವ್ರ ಕೆಮ್ಮಿನಿಂದ ನರಳುತ್ತಿದ್ದ ಮಗನ ಚಿಕಿತ್ಸೆಗೆ ವೈದ್ಯರ ಅಪಾಯಿಂಟ್‌ಮೆಂಟ್ ಸಿಗದೆ ಅನುಭವಿಸಿದ ನರಕಯಾತನೆಯನ್ನು ಇನ್‌ಸ್ಟಾಗ್ರಾಮ್ ವಿಡಿಯೋದಲ್ಲಿ ಹಂಚಿಕೊಂಡಿದ್ದು, "ಇಂತಹ ಪರಿಸ್ಥಿತಿಯಲ್ಲಿ ಭಾರತದ ಹೆಲ್ತ್ಕೇರ್ ಸಿಸ್ಟಮ್ ನಿಜಕ್ಕೂ ಗ್ರೇಟ್" ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಂಗ್ರಹ ಚಿತ್ರ

ವೆಲ್ಲಿಂಗ್ಟನ್: ಭಾರತೀಯ ವೈದ್ಯಕೀಯ ವ್ಯವಸ್ಥೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಪ್ರಶ್ನೆಗಳು ಮೂಡುತ್ತಿರುತ್ತವೆ. ಇದೀಗ ವಿದೇಶದಲ್ಲಿ ನೆಲೆಸಿರುವ ಭಾರತೀಯ ಮಹಿಳೆಯೊಬ್ಬರು ಬೇರೆ ದೇಶಗಳಲ್ಲಿ ಸಾಮಾನ್ಯ ಚಿಕಿತ್ಸೆಗೆ ಜನರು ಹೇಗೆ ಪರದಾಡುತ್ತಾರೆ ಎಂಬುದರ ಕುರಿತು ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಸದ್ಯ ನ್ಯೂಜಿಲ್ಯಾಂಡ್‌ನಲ್ಲಿ ನೆಲೆಸಿರುವ ಭಾರತೀಯ ಮೂಲದ ಆಕೃತಿ ಜೈಸ್ವಾಲ್ ಶ್ರೀವಾಸ್ತವ ಎಂಬ (Viral News) ಮಹಿಳೆಯೊಬ್ಬರು ತಮ್ಮ ಮಗನಿಗೆ ಚಿಕಿತ್ಸೆ ಕೊಡಿಸಲು ವೈದ್ಯರ ಅಪಾಯಿಂಟ್‌ಮೆಂಟ್ ಸಿಗದೆ ಅನುಭವಿಸಿದ ಸಂಕಟದ ಕುರಿತು ಹೇಳಿದ್ದಾರೆ.

ಮಹಿಳೆ ಹೇಳಿಕೊಂಡಿರುವ ಪ್ರಕಾರ, ಸುಮಾರು 10 ದಿನಗಳಿಂದ ತೀವ್ರವಾದ ಕೆಮ್ಮಿನ ಸಮಸ್ಯೆಯಿಂದ ಅವರ ಮಗ ಬಳಲುತ್ತಿದ್ದ. ಮೊದಲು ಸ್ಥಳೀಯ ಕ್ಲಿನಿಕ್‌ನಲ್ಲಿ ಅಪಾಯಿಂಟ್‌ಮೆಂಟ್ ಬಗ್ಗೆ ಅವರು ವಿಚಾರಿಸಿದ್ದಾರೆ. ಆದರೆ ಅಲ್ಲಿ ಸುಮಾರು ಒಂದು ವಾರ ಕಾಯುವಂತೆ ತಿಳಿಸಿದ್ದಾರೆಂತೆ. ಬಳಿಕ ಆಕೃತಿ, ತಮ್ಮ ಮಗನಿಗೆ ಮನೆ ಔಷಧಿಯನ್ನು ನೀಡಿದ್ದಾರೆ. ಅದರಿಂದ ಯಾವುದೇ ಪ್ರಯೋಜನವಾಗದ ಕಾರಣ ಆಫ್ಟರ್-ಅವರ್ಸ್ ಕ್ಲಿನಿಕ್‌ನಲ್ಲಿ ವಿಚಾರಿಸಿದ್ದಾರೆ. ಆದರೆ ಅಲ್ಲಿಯೂ ಜನ ದಟ್ಟಣೆ ಹೆಚ್ಚಿದ್ದರಿಂದ ಆಸ್ಪತ್ರೆಯ ಹೊರಗೆ ಬೋರ್ಡ್ನಲ್ಲಿ ‘ಕ್ಷಮಿಸಿ ಇಂದು ನಮ್ಮ ಸಾಮರ್ಥ್ಯ ಮೀರಿದೆ. ಇನ್ನು ಯಾವುದೇ ರೋಗಿಗಳನ್ನು ನೋಡಲು ಆಗುವುದಿಲ್ಲ’ಎಂದು ಬರೆದು ಬಾಗಿಲು ಮುಚ್ಚಲಾಗಿತ್ತು. ‘ಭಾರತಕ್ಕೆ ಹೋಲಿಸಿದರೆ ವಿದೇಶಗಳಲ್ಲಿ ಸಣ್ಣಪುಟ್ಟ ಕಾಯಿಲೆಗಳಿಗೆ ವೈದ್ಯರು ತಕ್ಷಣವೇ ಔಷದಿ ಅಥವಾ ಆಂಟಿಬಯೋಟಿಕ್ಸ್‌ಗಳನ್ನು ನೀಡಲು ಹಿಂಜರಿಯುತ್ತಾರೆ. ತಾನಾಗಿಯೇ ವಾಸಿಯಾಗಬಹುದು ಎಂದು ಕಾಯಲು ಹೇಳುತ್ತಾರೆ. ನಾನೂ ಕೂಡಾ ಅದೇ ರೀತಿ ಕಾದು ನೋಡಿದೆ, ಆದರೆ ಮಗನ ಕೆಮ್ಮು ಕಡಿಮೆಯಾಗದಿದ್ದಾಗ ವೈದ್ಯರ ಬಳಿ ಕರೆದೊಯ್ಯಲು ನಿರ್ಧರಿಸಿದೆ’. ಎಂದು ಅವರು ಹೇಳಿದ್ದಾರೆ.

‘ವಿದೇಶಗಳಲ್ಲಿ ಮಕ್ಕಳ ಆರೋಗ್ಯ ಸೇವೆ ಪಡೆಯುವುದು ಸುಲಭವಲ್ಲ. ದೊಡ್ಡವರು ತಡೆದುಕೊಳ್ಳಬಹುದು ಆದರೆ ಮಕ್ಕಳಿಗೆ ಈ ರೀತಿ ಕಾಯುವುದು ಕಷ್ಟ. ಹೀಗಾಗಿ ವಿದೇಶಕ್ಕೆ ಬರುವಾಗ ಭಾರತದಿಂದಲೇ ಅಗತ್ಯ ಆಂಟಿಬಯೋಟಿಕ್ ಹಾಗೂ ಔಷಧಗಳನ್ನು ತರುವುದು ಒಳಿತು’ ಎಂದು ಅವರು ವಿಡಿಯೋದಲ್ಲಿ ಸಲಹೆ ನೀಡಿದ್ದಾರೆ.

ನ್ಯೂಜಿಲ್ಯಾಂಡ್ ಅಭಿವೃದ್ಧಿ ಹೊಂದಿದ ದೇಶವಾದರು, ತಕ್ಷಣದ ವೈದ್ಯಕೀಯ ನೆರವಿಗೆ ಭಾರತವೇ ಬೆಸ್ಟ್. ‘ಭಾರತದಲ್ಲಿ ಕಾಯಿಲೆ ಬಂದರೆ ತಕ್ಷಣ ಆಸ್ಪತ್ರೆ ಅಥವಾ ಕ್ಲಿನಿಕ್‌ಗೆ ಹೋಗಿ ವೈದ್ಯರಿಗೆ ತೋರಿಸಬಹುದು, ಆದರೆ ವಿದೇಶಗಳಲ್ಲಿ ಹಾಗಿಲ್ಲ’ಎಂದು ಹೇಳಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿದೇಶಗಳಲ್ಲಿ ನೆಲೆಸಿರುವ ಅನೇಕ ಭಾರತೀಯರು ತಮಗೂ ಇಂತಹ ಅನುಭವಗಳಾಗಿವೆ ಎಂದು ಕಮೆಂಟ್ ಮೂಲಕ ಬೆಂಬಲ್ ವ್ಯಕ್ತಪಡಿಸಿದ್ದಾರೆ.

Vishakha Bhat Heggar

View all posts by this author