ಬರ್ಲಿನ್, ಜು. 16: ಭಾರತದಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಪ್ರಶ್ನೆ ಮೂಡುವಂತಹ ಅನೇಕ ಘಟನೆಗಳು ಆಗಾಗ ನಡೆಯುತ್ತಿರುತ್ತವೆ. ಮಹಿಳಾ ಪರ ಕಾರ್ಯಕ್ರಮ, ಯೋಜನೆ ಹಮ್ಮಿಕೊಂಡರೂ ದೌರ್ಜನ್ಯಕ್ಕೆ ಕೊನೆ ಬಿದ್ದಿಲ್ಲ. ಈ ಮಧ್ಯೆ ವಿದೇಶದಲ್ಲಿ ಮಹಿಳೆಯರ ಸುರಕ್ಷತೆ ಹೇಗಿದೆ ಎಂಬುದನ್ನು ಜರ್ಮನಿಯಲ್ಲಿ ವಾಸವಾಗಿರುವ ಭಾರತೀಯ ಮಹಿಳೆಯೊಬ್ಬರು ತಮ್ಮ ಅನುಭವ (Viral News) ಹಂಚಿಕೊಂಡಿದ್ದಾರೆ. ಬರ್ಲಿನ್‌ನಲ್ಲಿ ಮುಂಜಾನೆ 3 ಗಂಟೆಗೆ ಒಬ್ಬಂಟಿಯಾಗಿ ಮನೆಗೆ ನಡೆದು ಕೊಂಡು ಹೋಗುತ್ತಿದ್ದ ವಿಡಿಯೊ ಹಂಚಿಕೊಂಡ ಅವರು, ʼʼಇಲ್ಲಿ ನಾವು ಸ್ವಾತಂತ್ರ್ಯವಾಗಿದ್ದೇವೆ, ಯಾರ ಭಯವಿಲ್ಲದೆ ಒಬ್ಬಂಟಿಯಾಗಿ ಪ್ರಯಾಣಿಸಬಹುದುʼʼ ಎಂದಿದ್ದಾರೆ. ಸದ್ಯ ಈ ಘಟನೆ ಭಾರತದಲ್ಲಿನ ಮಹಿಳೆಯ ಸುರಕ್ಷತೆಯ ಬಗ್ಗೆ ಪ್ರಶ್ನೆ ಮೂಡುವಂತೆ ಮಾಡಿದೆ.
ʼʼಭಾರತದಲ್ಲಿ ಮಧ್ಯರಾತ್ರಿಯಲ್ಲಿ ಒಬ್ಬಂಟಿಯಾಗಿ ಪ್ರಯಾಣ ಮಾಡುವುದು ಇಂದಿಗೂ ಮಹಿಳೆಯರಿಗೆ ಕನಸಿನ ಮಾತು. ಆದರೆ ಜರ್ಮನಿಯಲ್ಲಿ ವಾಸಿಸುವ ಪ್ರತಿಯೊಬ್ಬ ಮಹಿಳೆ ಸುರಕ್ಷಿತವಾಗಿದ್ದಾಳೆʼʼ ಎಂದು ಆ ಮಹಿಳೆ ಖುಷಿ ಹಂಚಿಕೊಂಡಿದ್ದಾರೆ.
ವಿಡಿಯೊ ನೋಡಿ:
ಉಪಸ್ನಾ ಗಂಭೀರ್ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೊ ಹಂಚಿಕೊಂಡಿದ್ದಾರೆ. ಬರ್ಲಿನ್‌ನಲ್ಲಿ ಮುಂಜಾನೆ ನಿರ್ಭೀತಿಯಿಂದ 3 ಗಂಟೆಗೆ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ವಿಡಿಯೊ ರೆಕಾರ್ಡ್ ಮಾಡಿದ್ದಾರೆ. "ಗೆಳೆಯರೇ, ಈಗ ಸರಿಯಾಗಿ ರಾತ್ರಿ 3 ಗಂಟೆ. ನಾನು ಬರ್ಲಿನ್‌ನಲ್ಲಿದ್ದೇನೆ ಮತ್ತು ಮನೆಗೆ ನಡೆದುಕೊಂಡು ಹೋಗುತ್ತಿದ್ದೇನೆ. ಮೊದಲನೆಯದಾಗಿ, ನಾನು ಇಲ್ಲಿರುವ ಈ ಸ್ವಾತಂತ್ರ್ಯಕ್ಕಾಗಿ ತುಂಬಾ ಕೃತಜ್ಞಳಾಗಿದ್ದೇನೆ., ನಾನು ರಾತ್ರಿ ಯಾವುದೇ ಸಮಯದಲ್ಲಿ ಮನೆಗೆ ಹೋಗಬಹುದು ಹಾಗೂ ಯಾವುದೇ ರೀತಿ ಭಯಪಡಬೇಕಾಗಿ ಇಲ್ಲ'' ಎಂದಿದ್ದಾರೆ.
ಗಾಯಗೊಂಡಂತೆ ನಟಿಸಿ ನೆರವಿಗೆ ಧಾವಿಸಿದ ವ್ಯಕ್ತಿಯಿಂದಲೇ 1 ಲಕ್ಷ ರುಪಾಯಿಯ ಐಫೋನ್ ದೋಚಿದ ಖದೀಮರು!
ʼʼನಮ್ಮ ಭಾರತದಲ್ಲಿ ಇಂತಹ ಸುರಕ್ಷಿತ ವಾತಾವರಣ ಬರಲು ಇನ್ನು ಎಷ್ಟು ದಶಕಗಳು ಬೇಕಾಗಬಹುದು? ರಾತ್ರಿ 3 ಗಂಟೆ ಬಿಡಿ, ಹಗಲಿನ ವೇಳೆಯಲ್ಲಿಯೂ ಸಹಬ ಬೀದಿಗಳು, ನಗರಗಳು ಅಸುರಕ್ಷಿತವಾವೆ. ಸರಿಯೇ?ʼʼ ಎಂದು ಪ್ರಶ್ನಿಸಿದ್ದಾರೆ. ಸದ್ಯ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಅನೇಕರು ಉಪಾಸನಾ ಅವರ ಮಾತನ್ನು ಒಪ್ಪಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ನೆಟ್ಟಿಗರೊಬ್ಬರು, ʼʼಭಾರತದ ಹೆಚ್ಚಿನ ನಗರಗಳಲ್ಲಿ ಇಂದಿಗೂ ಮಹಿಳೆಯರು ರಾತ್ರಿಯ ವೇಳೆಯಲ್ಲಿ ಒಬ್ಬರೇ ಓಡಾಡುವುದು ಸುರಕ್ಷಿತ ಅಲ್ಲʼʼ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು "ನೀವು ಹೇಳಿದ ಎಲ್ಲದಕ್ಕೂ ನಾನು ಸಂಪೂರ್ಣವಾಗಿ ಒಪ್ಪುತ್ತೇನೆ" ಎಂದು ಪ್ರತಿಕ್ರಿಯೆ ನೀಡಿದ್ದಾರೆ.